ಮೈಸೂರು: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸೊಸೆಯನ್ನು ಮಾವ ಹೊಡೆದು ಕೊಲೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಂಟಯ್ಯ (70) ಎಂಬುವವರು ತಮ್ಮ ಸೊಸೆಯನ್ನೇ ಕೊಲೆ ಮಾಡಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾರೋಹಳ್ಳಿ ಗ್ರಾಮದ ಘಂಟಯ್ಯ ಅವರ ಪುತ್ರನ ಜೊತೆ 15 ವರ್ಷಗಳ ಹಿಂದೆ ಮಹಿಳೆ ಮದುವೆ ಮಾಡಲಾಗಿತ್ತು. ಕುಟುಂಬ ನಿರ್ವಹಣೆಗೆ ಗಂಡನ ದುಡಿಮೆ ಸಾಲದು ಎಂಬ ಕಾರಣದಿಂದ ಕವಿತಾ, ಖಾಸಗಿ ಕಾಲೇಜಿನಲ್ಲಿ ಆಯಾ ಕೆಲಸಕ್ಕೆ ಸೇರಿದ್ದರು. ಇದು ಮಾವ ಘಂಟಯ್ಯನಿಗೆ ಇಷ್ಟವಾಗುತ್ತಿರಲಿಲ್ಲ. ಕೆಲಸಕ್ಕೆ ಹೋಗದಂತೆ ಗಲಾಟೆ ಮಾಡುತ್ತಿದ್ದರು. ಅಲ್ಲದೇ, ಸೊಸೆಯ ಮೇಲೆ ಸಂಶಯಪಟ್ಟು ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದರು.
ಇದೇ ಅನುಮಾನದಿಂದ ಜಗಳದ ವೇಳೆ ಸೊಸೆಯ ತಲೆಯ ಭಾಗಕ್ಕೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube