ಮೈಸೂರು: ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತದಲ್ಲಿ ಯುವ ಭಾರತ್ ಸಂಘಟನೆ ವತಿಯಿಂದ ದೇಶಪ್ರೇಮ ದಿನ ಹಾಗೂ ಪುಲ್ವಾಮಾ ದಾಳಿ ಕರಾಳ ದಿನವನ್ನು ಆಚರಿಸಲಾಯಿತು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಅವರ ತ್ಯಾಗ ಬಲಿದಾನವನ್ನು ನೆನೆದು ಸ್ಮರಿಸಲಾಯಿತು.
ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ, ವಿಶ್ವ ದೇಶಪ್ರೇಮಿಗಳಿಗೆ ಜಯವಾಗಲಿ,ಭಾರತ್ ಮಾತಾಕಿ ಜೈ ವಂದೇ ಮಾತರಂ, ವೀರ ಯೋಧರು ಅಮರರಾಗಲಿ, ಸೈನಿಕರ ದಿನಾಚರಣೆಗೆ ಜಯವಾಗಲಿ ಎಂಬ ಘೋಷಣೆಗಳನ್ನು ಸಂಘಟನೆಯ ಪದಾಧಿಕಾರಿಗಳು ಕೂಗಿದರು.
ಬಳಿಕ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಭಾರತ ದೇಶ ಪುರಾತನವಾದದ್ದು ,ಪ್ರೇಮ ದಿನಾಚರಣೆ ನಮ್ಮ ಸಂಸ್ಕೃತಿಯಲ್ಲ. ಪ್ರೀತಿ ಪ್ರೇಮ ಎನ್ನುವುದು ತಂದೆ –ತಾಯಿ, ಗುರು- ಹಿರಿಯರು, ದೇಶದ ಬೆನ್ನಲುಬಾದ ಸೈನಿಕರು ಮತ್ತು ರೈತರ ಮೇಲೆ ಇರಬೇಕು. ಅರ್ಥವಿಲ್ಲದ ಪ್ರೇಮಿಗಳ ದಿನಾಚರಣೆ ಸಲ್ಲದು ಎಂದು ನುಡಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಈ ವೀರ ಯೋಧರ ತ್ಯಾಗ ಬಲಿದಾನಗಳನ್ನು ನಾವೆಲ್ಲ ಸ್ಮರಿಸಬೇಕಿದೆ. ನಮ್ಮ ದೇಶದ ಸುರಕ್ಷತೆಗಾಗಿ ಸೈನಿಕರು ತಮ್ಮ ಮನೆ, ಕುಟುಂಬದವರನ್ನು ತೊರೆದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಅವರ ತ್ಯಾಗಗಳಿಂದಾಗಿ ನಾವೆಲ್ಲರೂ ನೆಮ್ಮದಿಯ ಸುಖ ಜೀವನ ನಡೆಸುವಂತಾಗಿದೆ. ಆದ್ದರಿಂದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾಗಿ ಹುತಾತ್ಮರಾದ ಸೈನಿಕರನ್ನು ನೆನೆಯಲು ಈ ದಿನವನ್ನು ದೇಶಪ್ರೇಮದ ದಿನವನ್ನಾಗಿಸೋಣ ಎಂದು ಹೇಳಿದರು
ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ಅಜಯ್ ಶಾಸ್ತ್ರಿ, ನಗರಪಾಲಿಕ ನಾಮನಿರ್ದೇಶಕರು ಜಗದೀಶ್, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಚಾಮರಾಜ ಕ್ಷೇತ್ರದ ಹಿಂದುಳಿದ ವರ್ಗದ ಅಧ್ಯಕ್ಷ ಸೂರಜ್, ಮಹದೇವ ಪ್ರಸಾದ್, ಕಡಕೋಳ ಜಗದೀಶ್,ಸುಚಿಂದ್ರ, ವಿಘ್ನೇಶ್ವರ ಭಟ್, ಎಸ್ ಎನ್ ರಾಜೇಶ್, ದುರ್ಗಾ ಪ್ರಸಾದ್, ಶ್ರೀನಿವಾಸ್, ಚರಣ್, ಲಿಂಗರಾಜು ಭಾಗಿಯಾಗಿದ್ದರು.