ಮೈಸೂರು(Mysuru): ದಸರೆಗೆ ಕಾಡಿನಿಂದ ನಾಡಿಗೆ ಆಗಮಿಸಿರುವ ಲಕ್ಷ್ಮಿ ಆನೆ ಮಂಗಳವಾರ ರಾತ್ರಿ ಅರಮನೆ ಕೋಡಿ ಸೋಮೇಶ್ವರ ದೇಗುಲದ ಬಳಿ ಗಂಡು ಮರಿಗೆ ಜನ್ಮ ನೀಡಿದೆ.
ತಾಯಿ ಆನೆ ಹಾಗೂ ಮರಿ ಆರೋಗ್ಯವಾಗಿದ್ದು, ಉಳಿದ ಆನೆಗಳಿಂದ ಬೇರ್ಪಡಿಸಿ ಆವರಣದ ಸುರಕ್ಷಿತ ಪ್ರದೇಶದಲ್ಲಿ ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದು, ಚೈತ್ರಾ, ಕಾವೇರಿ, ಲಕ್ಷ್ಮಿ ಹಾಗೂ ವಿಜಯಾ ಹೆಣ್ಣಾನೆಗಳು ಇವೆ.
ಲಕ್ಷ್ಮಿ ಮರಿ ಹಾಕಿರುವುದರಿಂದ ದಸರೆಯಲ್ಲಿ ಆಕೆ ಪಾಲ್ಗೊಳ್ಳುವುದು ಬಹುತೇಕ ಅನುಮಾನ.
ಉಳಿದ ಆನೆಗಳು ಎಂದಿನಂತೆ ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ಮೂಲಗಳು ತಿಳಿಸಿವೆ.