ಮನೆ ಸ್ಥಳೀಯ ಮೈಸೂರು ದಸರಾ ಆನೆಗಳ ತೂಕ ಮಾಪನ: ಅಭಿಮನ್ಯು 5 ಸಾವಿರ ತೂಕ

ಮೈಸೂರು ದಸರಾ ಆನೆಗಳ ತೂಕ ಮಾಪನ: ಅಭಿಮನ್ಯು 5 ಸಾವಿರ ತೂಕ

0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ದತೆ ಭರದಿಂದ ಸಾಗಿದ್ದು, ದಸರಾದ ಕೇಂದ್ರ ಬಿಂದುವಾಗಿರುವ ಗಜಪಡೆ ಈಗಾಗಲೇ ಅರಮನೆ ಆವರಣದಲ್ಲಿ ಬೀಡು ಬಿಟ್ಟಿವೆ.

Join Our Whatsapp Group

ಶನಿವಾರ ದೇವರಾಜ ಮೊಹಲ್ಲಾದಲ್ಲಿರುವ ಸಾಯಿ ತೂಕ ಮಾಪನ ಕೇಂದ್ರದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತೂಕ ಮಾಪನ ಮಾಡಲಾಯಿತು.

ಮೈಸೂರು ದಸರಾದ ಗಜಪಡೆಯ ಕ್ಯಾಪ್ಟನ್​​ ಅಭಿಮನ್ಯು ತೂಕ 5560 ಕೆಜಿ ಇದೆ. ಈತನ ಜೊತೆಗಾರ್ತಿ ವರಲಕ್ಷ್ಮೀಯ ತೂಕ 3495 ಕೆಜಿ ಇದೆ. ಭೀಮ 4925 ಕೆಜಿ, ರೋಹಿತ್ 3625, ಗೋಪಿ 4970, ಕಂಜನ್ 4515, ಧನಂಜಯ 5155 ಕೆಜಿ ತೂಕ ಇದ್ದಾನೆ.

ಏಕಲವ್ಯ 4730 ಕೆಜಿ ತೂಕ ಇದ್ದಾನೆ. ಈತನ ಜೊತೆಗಾರ್ತಿ ಲಕ್ಷ್ಮೀ 2480 ಕೆಜಿ ತೂಕ ಇದ್ದಾಳೆ.

ಎರಡನೇ ಹಂತದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ, ಹಿರಣ್ಯ ಆನೆಗಳು ಮೈಸೂರಿಗೆ ಆಗಮಿಸಲಿವೆ,

ಹರ್ಷ, ಅಯ್ಯಪ್ಪ, ಪಾರ್ಥಸಾರಥಿ, ಮಾಲಾದೇವಿ ಮೀಸಲು ಆನೆಗಳಾಗಿವೆ.