ಮನೆ ಸುದ್ದಿ ಜಾಲ ಮೈಸೂರು: ವಸ್ತುಪ್ರದರ್ಶನ‌ ಪ್ರಾಧಿಕಾರದ ಕಚೇರಿ ಕಟ್ಟಡಕ್ಕೆ ಬೆಂಕಿ

ಮೈಸೂರು: ವಸ್ತುಪ್ರದರ್ಶನ‌ ಪ್ರಾಧಿಕಾರದ ಕಚೇರಿ ಕಟ್ಟಡಕ್ಕೆ ಬೆಂಕಿ

0

ಮೈಸೂರು(Mysuru): ದಸರಾ ವಸ್ತುಪ್ರದರ್ಶನ‌ ಆವರಣದಲ್ಲಿರುವ ವಸ್ತುಪ್ರದರ್ಶನ‌ ಪ್ರಾಧಿಕಾರದ ಕಚೇರಿ ಕಟ್ಟಡಕ್ಕೆ ಗುರುವಾರ ಬೆಳಿಗ್ಗೆ ಬೆಂಕಿ ಬಿದ್ದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಮಹಿಳಾ ಮತ್ತು ಮಕ್ಕಳ ವಿಭಾಗದ ಕೊಠಡಿಗೆ ಮುಂಜಾನೆ ಬೆಂಕಿ ಬಿದ್ದಿದ್ದು, ಬೆಳಿಗ್ಗೆ 7.50 ಕ್ಕೆ ಠಾಣೆಗೆ ಕರೆ ಬಂದಿದೆ. ಕಾರ್ಯಾಚರಣೆ ನಡೆಸಲಾಗಿದ್ದು, ಅರ್ಧ ಗಂಟೆಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ ಸರಸ್ವತಿಪುರಂನ ಅಗ್ನಿಶಾಮಕ ದಳದ ಅಧಿಕಾರಿ ರಾಜು ತಿಳಿಸಿದರು‌.

ಯಾವುದೇ ಪ್ರಾಣಹಾನಿಯಾಗಿಲ್ಲ. ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ ಎಂದರು.

ಹಿಂದಿನ ಲೇಖನಪವರ್ ಗ್ರಿಡ್ ಕಾರ್ಪೊರೇಷನ್‌’ನಲ್ಲಿ `ಡಿಪ್ಲೊಮಾ ಟ್ರೈನಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಅಗ್ನಿವೀರರದು ಸೈನಿಕರ ಕೆಳಗಿನ ಶ್ರೇಣಿ, ಅವರ ಸೇವೆ ಸೇನಾಪಡೆಯ ಖಾಯಂ ಸೇವೆಯ ಭಾಗವಲ್ಲ: ನ್ಯಾಯಾಲಯಕ್ಕೆ ಕೇಂದ್ರದ ವಿವರಣೆ