ಮನೆ ಅಪರಾಧ ಮೈಸೂರು –ಗದ್ದಿಗೆ ಮುಖ್ಯ ರಸ್ತೆ ಕಬಳಿಸಿ ಬೃಹತ್ ಬಡಾವಣೆ ನಿರ್ಮಾಣ: ಆರೋಪ

ಮೈಸೂರು –ಗದ್ದಿಗೆ ಮುಖ್ಯ ರಸ್ತೆ ಕಬಳಿಸಿ ಬೃಹತ್ ಬಡಾವಣೆ ನಿರ್ಮಾಣ: ಆರೋಪ

0

ಮೈಸೂರು: ಮೈಸೂರು –ಗದ್ದಿಗೆ ಮುಖ್ಯ ರಸ್ತೆ ಕಬಳಿಸಿ ಬೃಹತ್ ಬಡಾವಣೆ ನಿರ್ಮಾಣ ಮಾಡಿದ್ದು, ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Join Our Whatsapp Group


ಜೆ ಪಿ ನಗರದ 16ನೇ ಕ್ರಾಸ್ 27ನೇ ಮೇನ್ #665 ರ ನಿವಾಸಿ ಬಿ.ಆರ್ ಹನುಮಂತ ಬಾಬು ಅಕ್ರಮ ವಸತಿ ಬಡಾವಣೆ ಹಾಗೂ 286 ಅಕ್ರಮ ನಿವೇಶನಗಳ ಮಾಲೀಕರಾಗಿದ್ದಾರೆ. ಮೇ|| ನನ್ನ ಮನೆ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಪ್ರೈ ಲೀ ಅಕ್ರಮ ವಸತಿ ಬಡಾವಣೆ ನಿರ್ಮಾಣಕಾರರು ಹಾಗೂ ಅಕ್ರಮ ವಸತಿ ನಿವೇಶನಗಳ ಮಾರಾಟಗಾರರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಈ ಅಕ್ರಮ ವಸತಿ ಬಡಾವಣೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇಂಜಿನಿಯರ್ ಹೆಚ್ ವಿ ಶ್ರೀಧರ್ ನಕ್ಷೆ ರೂಪಿಸಿ, ಹಗರಣದಲ್ಲಿ ಭಾಗಿಯಾಗಿದ್ದಾರೆ.


ಪ್ರಸ್ತುತ ಇವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಗರ ಯೋಜನಾ ಶಾಖೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡಾವಣೆಯ ಮಾಲೀಕ ಬಿ.ಆರ್ ಹನುಮಂತ ಹಾಗೂ ಇಂಜಿನಿಯರ್ ಹೆಚ್ ವಿ ಶ್ರೀಧರ್ ದುರುದ್ದೇಶದಿಂದ ದಕ್ಷಿಣ ಭಾಗದಲ್ಲಿರುವ ಸ್ವಾತಂತ್ರ್ಯ ಪೂರ್ವದಿಂದಲೂ ಸಾರ್ವಜನಿಕ ಬಳಕೆಯ 100 ಅಡಿ ಇರುವ ಮೈಸೂರು-ಗದ್ದಿಗೆ ಮುಖ್ಯ ರಸ್ತೆಯನ್ನು ಒತ್ತುವರಿ ಬಡಾವಣೆ ನಿರ್ಮಿಸಲು ಮಾಡಿಕೊಂಡಿದ್ದಾರೆ.


ಮುಖ್ಯ ರಸ್ತೆಯನ್ನು ಅಕ್ರಮ ಅನುಮೋದಿತ ಬಡಾವಣೆ ನಕ್ಷೆಯಲ್ಲಿ ಹಾಲಿ 8 ಮೀಟರ್ ಅಗಲದ ರಸ್ತೆಯನ್ನು 9 ಮೀಟರ್ ಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದ್ದು, ಮೈಸೂರು –ಗದ್ದಿಗೆ ಮುಖ್ಯ ಬೃಹತ್ ರಸ್ತೆಯನ್ನು ಸಂಕುಚಿತಗೊಳಿಸಲಾಗಿದೆ. ಜಯಪುರ ಹೋಬಳಿ ಮಾದಹಳ್ಳಿಯಲ್ಲಿ ಒಟ್ಟು 11 ಎಕರೆ 15 ಗುಂಟೆ ಅಕ್ರಮ ವಸತಿ ಬಡಾವಣೆ ರಚಿಸಲಾಗಿದೆ. ನಿವೇಶನ ಸಂಖ್ಯೆ 276 ಮತ್ತು 277 ನಡುವಿನ ಓವರ್ ಹೆಡ್ ಟ್ಯಾಂಕ್ ಅನುಮೋದಿತ ನಕ್ಷೆಯಂತೆ ನಿರ್ಮಾಣ ಮಾಡಿದರೆ ಸದರಿ ಪ್ರದೇಶವು ಮೈಸೂರು –ಗದ್ದಿಗೆ ಮುಖ್ಯ ರಸ್ತೆ ಆಗಿರುವುದರಿಂದ ನಷ್ಟ ಉಂಟಾಗುತ್ತದೆ ಎಂದು ನಿರ್ಮಿಸಿಲ್ಲ. 30X40 ಅಳತೆಯ ನಾಲ್ಕು, 20X30 ಅಳತೆಯ ಹದಿನೈದು ಅಕ್ರಮ ನಿವೇಶನಗಳನ್ನು ರಚನೆ ಮಾಡಲಾಗಿದೆ. ಬಡಾವಣೆಯ ಪಶ್ಚಿಮ ಭಾಗದಲ್ಲಿ ಬರುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.


ಈ ಅಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಡಬೇಕು. ಹಾಗೂ ಒತ್ತುವರಿಯಾಗಿರುವ ಮೈಸೂರು – ಗದ್ದಿಗೆ ಮುಖ್ಯ ರಸ್ತೆಯನ್ನು ತೆರವುಗೊಳಿಸಬೇಕೆಂಬುದು ಸ್ಥಳೀಯ ಸಾರ್ವಜನಿಕರ ಒತ್ತಾಯವಾಗಿದೆ.