ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಹುಲಿ ಬಲಿ ಪಡೆದುಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಇದೀಗ ಆ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಚರಣೆ ನಡೆಸಿದ್ದು, ವ್ಯಾಘ್ರನ ಪತ್ತೆಗೆ ಆನೆಗಳನ್ನು ಕರೆತರಲಾಗಿದೆ.
ಬಂಡೀಪುರ ಅರಣ್ಯದ ವಲಯ ವ್ಯಾಪ್ತಿಯ ಹೆಡಿಯಾಲ ಗ್ರಾಮದ ಕಳೆದ ಮೂರು ದಿನಗಳ ಹಿಂದೆ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಚರಣೆ ಸಂದರ್ಭದಲ್ಲೇ ಹುಲಿ ಮೇಕೆಯನ್ನ ಹೊತ್ತೊಯ್ದಿತ್ತು.ಇದರೊಂದಿಗೆ ಹುಲಿ ಪದೇ ಪದೇ ಆತಂಕ ಸೃಷ್ಟಿಸಿದೆ. ಅಲ್ಲದೇ ಸ್ಥಳೀಯ ಜನರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇದರಿಂದ ಅರಣ್ಯ ಇಲಾಖೆ, ವ್ಯಾಘ್ರನ ಬಂಧನಕ್ಕೆ ಬಂಡೀಪುರ, ರಾಂಪುರ ಆನೆ ಕ್ಯಾಂಪ್ ನಿಂದ ಆನೆಗಳನ್ನು ಕರೆತರಲಾಗಿದೆ.
ಬಂಡೀಪುರ ರಾಂಪುರ ಆನೆ ಕ್ಯಾಂಪ್ ನ ಪಾರ್ಥಸಾರಥಿ, ಧರ್ಮ ಆನೆಗಳ ಮೂಲಕ ಶೋಧಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಸಿಬ್ಬಂದಿಯಿಂದ ಕಾಲ್ನಡಿಗೆಯಲ್ಲಿ ಕಾರ್ಯಚರಣೆ ನಡೆಯುತ್ತಿದೆ.