ಮನೆ ಸ್ಥಳೀಯ ಮೈಸೂರು: ವಾರ್ಷಿಕ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೈರು

ಮೈಸೂರು: ವಾರ್ಷಿಕ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೈರು

0

ಮೈಸೂರು: ಇಲ್ಲಿನ ಕ್ರಾಫರ್ಡ್ ಹಾಲ್‌ನಲ್ಲಿ ಶನಿವಾರ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೈರು ಹಾಜರಾದರು.

Join Our Whatsapp Group

ಮಾಜಿ ಸಂಸದ ಎ‌.ಸಿ. ಷಣ್ಮುಗಂ ಹಾಗೂ ಶಾಹೀನ್ ಮಜೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು 2020ರಲ್ಲಿ ಘೋಷಣೆಯಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಈ ಬಾರಿ ಸ್ವೀಕರಿಸಿದರು.

ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ಸಾರಿಗೆ ಎಂಜಿನಿಯರ್ ಬಾಬು ಕೆ.ವೀರೇಗೌಡ ಗೈರು ಹಾಜರಾದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಪದವಿ ಪ್ರದಾನ ಮಾಡಿದರು.

ನವದೆಹಲಿಯ ಎಐಐಎಂಎಸ್‌ನ ಸಂಶೋಧಕ ಪ್ರಾಧ್ಯಾಪಕ ಟಿ.ಪಿ.ಸಿಂಗ್ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವರಾದ ಪ್ರೊ.ಎನ್. ನಾಗರಾಜ್, ವಿ.ಆರ್. ಶೈಲಜಾ ಪಾಲ್ಗೊಂಡಿದ್ದರು.