ಮೈಸೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಹಾಗೂ ಮಹಾರಾಜ ಇಸ್ಟೀಟ್ಯೂಟ್ ಆಫ್ ಟೆಕ್ನಾಲಿಜಿ, ತಾಂಡವಪುರ, ನಂಜನಗೂಡು ತಾಲ್ಲೂಕು ಇವರ ಸಹಯೋಗದಲ್ಲಿ ಮಾರ್ಚ್ 08 ರಂದು ಮಹಾರಾಜ ಇಸ್ಟೀಟ್ಯೂಟ್ ಆಫ್ ಟೆಕ್ನಾಲಿಜಿ, ತಾಂಡವಪುರ ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಸದರಿ ಉದ್ಯೋಗ ಮೇಳಕ್ಕೆ, ಮೈಸೂರು-ಬೆಂಗಳೂರಿನ ಹೆಸರಾಂತ ಕಂನಿಗಳು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆಮಾಡಿಕೊಳ್ಳಲಿದ್ದು, ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳು ಮಾರ್ಚ್ 08 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 4 ಗಂಟೆಯವರೆಗೆ ಮಹಾರಾಜ ಇಸ್ಟೀಟ್ಯೂಟ್ ಆಫ್ ಟೆಕ್ನಾಲಿಜಿ, ತಾಂಡವಪುರ, ನಂಜನಗೂಡು ತಾಲ್ಲೂಕು ಇಲ್ಲಿ ಎಸ್.ಎಸ್.ಎಲ್.ಸಿ ಪಾಸು/ಫೇಲು, ಪಿಯುಸಿ/ಪದವಿ/ಐಟಿಐ/ಡಿಪ್ಲೋಮ/ಎಂ.ಬಿ.ಎ/ಸ್ನಾತಕೋತ್ತರ ದಲ್ಲಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷ ವಯೋಮಿತಿ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಉದ್ಯೋಗ ಮೇಳ ಮೂಲಕ ಆಯ್ಕೆ ಮಾಡಿಕೊಳ್ಳತ್ತಿದ್ದು, ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳು ಮತ್ತು ಆಧಾರ್ ಕಾರ್ಡ್, ಸ್ವ-ವಿವಿರವುಳ್ಳ 10 ಬಯೋಡೇಟಾ ಪ್ರತಿಗಳೊಂದಿಗೆ, ಮಹಾರಾಜ ಇಸ್ಟೀಟ್ಯೂಟ್ ಆಫ್ ಟೆಕ್ನಾಲಿಜಿ, ತಾಂಡವಪುರ, ನಂಜನಗೂಡು ತಾಲ್ಲೂಕು ಇಲ್ಲಿ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ, ಮೈಸೂರು ಇವರನ್ನು ಕಛೇರಿ ವೇಳೆಯಲ್ಲಿ ಅಥವಾ ದೂ.ಸಂ: 0821-2970815 ನ್ನು ಅಥವಾ ಉದ್ಯೋಗ ವಿನಿಮಯ ಕಛೇರಿ ದೂ.ಸಂ: 8095856846 ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.