ಮೈಸೂರು: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಪತಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕು ದೊಡ್ಡಹೊಮ್ಮ ಗ್ರಾಮದಲ್ಲಿ ನಡೆದಿದೆ.
ರೂಪ (35) ಮೃತ ದುರ್ದೈವಿ. ಪತಿ ಪುರುಷೋತ್ತಮ್ (40) ಕೊಲೆ ಆರೋಪಿ.
ಮೂಲತಃ ಯಳಂದೂರು ಕೆಸ್ತೂರು ಗ್ರಾಮದ ಪುರುಷೋತ್ತಮ್, ಎಂಟು ವರ್ಷಗಳ ಹಿಂದೆ ದೊಡ್ಡಹೊಮ್ಮ ಗ್ರಾಮದ ರೂಪ ಜೊತೆ ವಿವಾಹವಾಗಿದ್ದರು.
ಗಂಡ ಹೆಂಡತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಆಗಾಗ ಗಲಾಟೆಯಾಗುತ್ತಿತ್ತು. ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಂಜುನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ.
Saval TV on YouTube