ಮೈಸೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸ್ಥಳೀಯ ಠಾಣಾ ವ್ಯಾಪ್ತಿಯ 23 ಸ್ಥಳಗಳಲ್ಲಿ 50 ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವು ಜುಲೈ 7ರಿಂದ ಕಾರ್ಯನಿರ್ವಹಿಸಲಿವೆ.
ನಿಯಮ ಉಲ್ಲಂಘಿಸಿದವರು ಅಧಿಕೃತ ವೆಬ್ ಸೈಟ್ ಮೂಲಕ ದಂಡದ ಮೊತ್ತವನ್ನು ಪರಿಶೀಲಿಸಿ ಸ್ಥಳೀಯ ಠಾಣೆಯಲ್ಲಿ ಪಾವತಿಸಬೇಕು ಎಂದು ಇಲಾಖೆ ತಿಳಿಸಿದೆ.
ರಸ್ತೆ ಅಪಘಾತದಿಂದಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿದಿನ 1–2 ಸಾವುಗಳಾಗುತ್ತಿವೆ. ಇವನ್ನು ನಿಯಂತ್ರಿಸಲು ಸಂಚಾರ ನಿಯಮ ಉಲ್ಲಘಿಸುವವರನ್ನು ಕ್ಯಾಮೆರಾ ಮೂಲಕ ಗುರುತಿಸಿ, ದಂಡ ವಿಧಿಸಲಾಗುವುದು. https://payfine.mchallan.com:7271 ವೆಬ್‌ಸೈಟ್ ಹಾಗೂ ಸ್ಥಳೀಯ ಠಾಣೆಯಲ್ಲಿ ದಂಡ ಪಾವತಿಸಬಹುದು ಎಂದು ಪ್ರಕಟಣೆ ತಿಳಿಸಿದೆ.