ಮನೆ ಯೋಗಾಸನ ಮೈಸೂರು ಯೋಗಕ್ಕೆ ವಿಶ್ವ ಪ್ರಸಿದ್ಧಿ ಪಡೆದಿದೆ. ಯೋಗ ನಗರಿ ಎಂಬ ಹಿರಿಮೆ ಮೈಸೂರಿಗಿದೆ: ಟಿ ಎಸ್...

ಮೈಸೂರು ಯೋಗಕ್ಕೆ ವಿಶ್ವ ಪ್ರಸಿದ್ಧಿ ಪಡೆದಿದೆ. ಯೋಗ ನಗರಿ ಎಂಬ ಹಿರಿಮೆ ಮೈಸೂರಿಗಿದೆ: ಟಿ ಎಸ್ ಶ್ರೀವತ್ಸ

0

ಮೈಸೂರು:  ಮೈಸೂರಿನ ಯೋಗಕ್ಕೆ ವಿಶ್ವ ಪರಂಪರೆ ಇದೆ. ಮೈಸೂರಿನ ಯೋಗ ವಿಶ್ವ ಪ್ರಸಿದ್ಧಿಯನ್ನು ಪಡೆದಿದ್ದು, ಎಲ್ಲಾ  ವಯೋಮಾನದವರು ಯೋಗದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ  ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ಹೇಳಿದರು.

Join Our Whatsapp Group

ಇಂದು ಮೈಸೂರು ದಸರಾ ಅಂಗವಾಗಿ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿನ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ ಯೋಗ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ, ರಾಜ್ಯಮಟ್ಟದ  ದಸರಾ ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ  ಅವರು ರಾಜ್ಯಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಮಾಡಿದವರು ಮೈಸೂರಿನಲ್ಲಿ ಯೋಗ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದಾರೆ ಎಂದರು.

ಯಾವುದೇ ವಯಮಾನದವರು ಯೋಗವನ್ನು ಅಭ್ಯಾಸ ಮಾಡಬಹುದು. ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂಬುವುದರ ಸಲುವಾಗಿ ಮೈಸೂರಿನಲ್ಲಿ ಯೋಗ ದಸರಾವನ್ನು ಪ್ರಾರಂಭ ಮಾಡಿರುವುದು. ಯೋಗ ದಸರಾವನ್ನು ಗಿನ್ನಸ್ ದಾಖಲೆಗೆ ತೆಗೆದುಕೊಂಡು ಹೋಗಬೇಕು ಎಂದು‌  ಹೇಳಿದೆ. ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ ಎಂದರು.

ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಲಾವಿದರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಇಂದು ಯೋಗಾಪಟುಗಳಿಗೆ ಯೋಗಾಸನ ಸ್ಪರ್ಧೆಯಲ್ಲಿ  2000 ಸಾವಿರಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿದರು. ಹಾಗೆಯೇ ವಿಶೇಷ ಚೇತನ ಮಕ್ಕಳು, ವಿದ್ಯಾರ್ಥಿ ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಆಸನಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.

ಕಾರ್ಯಕ್ರಮದಲ್ಲಿ ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷರಾದ

ಎಂ.ಮಹೇಶ್,  ಉಪಾಧ್ಯಕ್ಷರಾದ ಜಮೀರ್ ಅಹ್ಮದ್, ಪ್ರಕಾಶ್, ಸಿದ್ದರಾಜು, ಚಿಕ್ಕಸ್ವಾಮಿ,  ಸದಸ್ಯರಾದ ಕೆ.ವಿ.ಭರತ್ ರಾಜ್, ಎಚ್.ಯೋಗೇಶ್, ಪ್ರಭು, ಹರೀಶ್, ಎಂ.ಬಿ.ವಿಕೇಶ್ ಶರ್ಮ, ಪುಟ್ಟಸ್ವಾಮಿ, ಶ್ರೀಕಂಠ, ಜಗದೀಶ್, ಸಮಿತಿಯ ಉಪ ವಿಶೇಷಾಧಿಕಾರಿ ರಮ್ಯ, ಸಮಿತಿಯ ಅಧಿಕಾರಿಗಳಾದ ಡಾ.ಪುಷ್ಪ ಹಾಜರಿದ್ದರು‌.