ಮೈಸೂರು(Mysuru): ಧಾರ್ಮಿಕ ದತ್ತಿ ಇಲಾಖೆ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ 2022ರ ಅಕ್ಟೋಬರ್ 8 ರಿಂದ 14 ರವರೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಮಹಾ ರಥೋತ್ಸವ ಶ್ರೀಮುಖ ಕಾರ್ಯಕ್ರಮಗಳು ನಡೆಯಲಿದೆ.
ಅ. 8 ರಂದು ಶನಿವಾರ ಆಶ್ವಯುಜ ಶುಕ್ಲ ಚತುರ್ದಶಿ ಪೂರ್ವಭಾದ್ರ ನಕ್ಷತ್ರ, ಕಳಶಾರೋಹಣದ, ಗಜಾರೋಹಣ ಕಾರ್ಯಕ್ರಮ,
ಅ-9 ರಂದು ಭಾನುವಾರ ಆಶ್ವಯುಜ ಶುಕ್ಲ ಪೂರ್ಣಮಿ ಉತ್ತರ ಭಾದ್ರ ನಕ್ಷತ್ರ ಬೆಳಿಗ್ಗೆ 7.50 ರಿಂದ 8.10 ಗಂಟೆ ಒಳಗೆ ಸಲ್ಲುವ ಶುಭಮುಹೂರ್ತದಲ್ಲಿ ‘ಶ್ರೀಮದ್ ದಿವ್ಯ ರಥಾರೋಹಣ ಮಂಟಪೋತ್ಸವ ಕಾರ್ಯಕ್ರಮ’ ಹಾಗೂ ಸಾಯಂಕಾಲ ಸಿಂಹ ವಾಹನೋತ್ಸವ ,ಹಂಸವಾಹನೋತ್ಸವ, ಮಂಟಪೋತ್ಸವ ಕಾರ್ಯಕ್ರಮಗಳು ಜರುಗಲಿದೆ.
ಅ-10 ರಂದು ಸೋಮವಾರ ಆಶ್ವಯುಜ ಶುಕ್ಲ ಕೃಷ್ಣಪಾಡ್ಯ ರೇವತಿ ನಕ್ಷತ್ರ ಅಶ್ವರೋಹಣ.
ಅ-11ರಂದು ಮಂಗಳವಾರ ಅಶ್ವಿನಿ ನಕ್ಷತ್ರದಲ್ಲಿ ಬೆಳಗ್ಗೆ ವಸಂತ ಪೂಜೆ ಅವಭೃತ ತೀರ್ಥಸ್ನಾನ, ಮಂಟಪೋತ್ಸವ ಸಾಯಂಕಾಲ 7 ಗಂಟೆಗೆ ತೆಪ್ಪೋತ್ಸವ, ಆಂದೋಳಿರೋಹಣ, ಧ್ವಜಾರೋಹಣ,
ಅ-12ರಂದು ಬುಧವಾರ ಸಾಯಂಕಾಲ ಪಂಚೋಪಚಾರ ಪೂಜೆ, ಕೈಲಾಸ ವಾಹನೋತ್ಸವ, ಶಯನೋತ್ಸವ,
ಅ-13 ರಂದು ಗುರುವಾರ ಕೃತಿಕಾ ನಕ್ಷತ್ರದಲ್ಲಿ ಮಹಾಭಿಷೇಕ, ಸಿಂಹವಾಹನ, ಮಂಟಪೋತ್ಸವ
ಅ-14ರAದು ಶುಕ್ರವಾರ ಕೃಷ್ಣ ಪಂಚಮಿ ರೋಹಿಣಿ ನಕ್ಷತ್ರ ಸಾಯಂಕಾಲ ಮುಡಿಉತ್ಸವ (ಜವಾಹಿರಿ ಉತ್ಸವ) ಮಂಟಪೋತ್ಸವ ಈ ಕಾರ್ಯಕ್ರಮಗಳು ನಡೆಯಲಿವೆ ಎಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.