ಮನೆ ದೇವಸ್ಥಾನ ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಹಾಶಿವರಾತ್ರಿ ಆಚರಣೆ

ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಹಾಶಿವರಾತ್ರಿ ಆಚರಣೆ

0

ಮೈಸೂರು: ಇಲ್ಲಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಹಾಶಿವರಾತ್ರಿಯನ್ನು ಇಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಪೂಜೆ ನೆರವೇರಿಸಿದ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಗಣಪತಿ‌ ಸಚ್ಚಿದಾನಂದ ಸ್ವಾಮೀಜಿ, ಜನ್ಮಕ್ಕೊಂದು ಶಿವರಾತ್ರಿ ಎನ್ನುತ್ತಾರೆ. ಹಾಗೆಂದು ಜನ್ಮದಲ್ಲಿ ಒಮ್ಮೆಯೇ ಶಿವನನ್ನು ಪೂಜಿಸಬೇಕು ಎಂಬ ಅರ್ಥವಲ್ಲ. ಶಿವ ಜ್ಞಾನದಾತ. ಆತ ಎಲ್ಲರಿಗೂ ಜ್ಞಾನವನ್ನು ನೀಡುವವನು. ಶಿವರಾತ್ರಿಯಂದು ಉಪವಾಸ ವ್ರತ ಕೈಗೊಂಡು ಜಾಗರಣೆ ಮಾಡುತ್ತಾ ಶಿವನ ಬಳಿ ಇದ್ದು ಜ್ಞಾನ ಸಂಪಾದಿಸಬೇಕು ಎಂದು ತಿಳಿಸಿದರು.

ಶಿವ ಎಲ್ಲರಿಗೂ ಗುರು. ಆ ಪಾರ್ವತಿಗೇ ಗುರು ಆಗಿದ್ದವನು. ಆತ ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿಕೊಂಡಿರುವವನು ಎಂದರು.

ದೇಶದಲ್ಲಿ ಒಳ್ಳೆಯ ಮಳೆ, ಬೆಳೆಯಾಗಲಿ. ಬೆಳೆ ರೈತರ ಕೈಗೆ ಸಿಗುವಂತಾಗಲಿ. ನಾಡು ಸುಭಿಕ್ಷವಾಗಲಿ. ಪ್ರಜೆಗಳಿಗೆ, ಪ್ರಜಾಪ್ರತಿನಿಧಿಗಳಿಗೆ ಭಗವಂತ ಒಳ್ಳೆಯ ಮನಸ್ಸು ಕೊಡಲಿ ಎಂದು ಪ್ರಾರ್ಥಿಸಿದರು.