ಮನೆ ರಾಜ್ಯ ಮೈಸೂರಿನ ಹೊರಗುತ್ತಿಗೆ ನೌಕರರು ಸಾಯುವ ಪರಿಸ್ಥಿತಿ ತಂದೊಡ್ಡುತ್ತಿರುವ ಸರ್ಕಾರಿ ಅಧಿಕಾರಿಗಳು

ಮೈಸೂರಿನ ಹೊರಗುತ್ತಿಗೆ ನೌಕರರು ಸಾಯುವ ಪರಿಸ್ಥಿತಿ ತಂದೊಡ್ಡುತ್ತಿರುವ ಸರ್ಕಾರಿ ಅಧಿಕಾರಿಗಳು

0

ಮೈಸೂರು(Mysuru):  ನಗರ ಹಾಗೂ ಜಿಲ್ಲೆಯಾದ್ಯಾಂತ  ಹಲವಾರು ಸರ್ಕಾರಿ ಹಾಗೂ ಅರೆ ಸರ್ಕಾರಿ ಮತ್ತು ಅನುದಾನಿತ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರು ನೇಣಿಗೆ ಕೊರಳೊಡ್ಡುವ ದಿನಗಳು ದೂರವಿಲ್ಲ. ಇದಕ್ಕೆ ಕಾರಣ ಸದರಿ ಇಲಾಖೆಯ ಹಿರಿಯ ಅಧಿಕಾರಿಗಳೆನ್ನುವುದೇ ವಿಪರ್ಯಾಸ.

ಹೌದು.!   ಜಿಲ್ಲೆಯಾದ್ಯಾಂತ ದಿನವಿಡೀ ಕಷ್ಟಪಟ್ಟು ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸದ ಅವಧಿಯನ್ನು ಮೀರಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಕಳೆದ 7-8 ವರ್ಷಗಳಿಂದಲೂ ಸಿಗಬೇಕಾದ ಕನಿಷ್ಟ ಕೂಲಿಯು ಕೂಡ ದೊರೆಯದೇ ದಿನನಿತ್ಯದ ಖರ್ಚುವೆಚ್ಚಗಳಿಗೆ ಪರದಾಡಬೇಕಾಗಿದ್ದು, ಅನೇಕ ಕಾರ್ಮಿಕರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ.

ಹೊರಗುತ್ತಿಗೆ ನೌಕರರುನ್ನು ಖಾಯಂ ಮಾಡಿಕೊಳ್ಳುವ ಮಾತು ಹಾಗಿರಲಿ ಇವರಿಗೆ  ವೇತನ ಪಾವತಿಸಬೇಕಾದ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಬೇಜವಬ್ದಾರಿತನದಿಂದಾಗಿ  ಹೊರ ಗುತ್ತಿಗೆ ನೌಕರರು ಜೀವ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆದಾರರು ತಮ್ಮ ಸಂಸ್ಥೆಯಡಿಯಲ್ಲಿ  ಗುತ್ತಿಗೆದಾರರ ಮೂಲಕ ನೂರಾರು ಮಂದಿ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುತ್ತಾರೆ. ಆದರೆ ಈ ಕೆಲಸಗಾರರರಿಗೆ ಸಿಗಬೇಕಾದ ಯಾವುದೇ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದಿಲ್ಲ. ಇದರಿಂದಾಗಿ ಅನೇಕ ಕಾರ್ಮಿಕರು ದೈನದಿಂನ ಜೀವನ ನಡೆಸಲು ಪರದಾಡುತ್ತಿದ್ದಾರೆ. ಇದು ಸರ್ಕಾರರ ಹಾಗೂ ಕಾರ್ಮಿಕ ಇಲಾಖೆಯ ಗಮನಕ್ಕೆ ಬಂದರೂ ಕಂಡರು ಕಾಣದಂತೆ ವ್ಯವಹರಿಸುತ್ತಿದೆ.

ಇಂದು ಬಾಗಲಕೋಟೆಯ ರಾಜೀವ ಗಾಂಧಿ ವಸತಿ ನಿಗಮದ ಹೊರಗುತ್ತಿಗೆ ನೌಕರ ಬಸಣ್ಣಾ ಪಟ್ಟೇದ್ (42) ಕಳೆದ 7 ವರ್ಷಗಳಿಂದ ವೇತನ ಸಿಗದಿರುವ ಕಾರಣಕ್ಕೆ ಬೇಸತ್ತು ತಾಪಂ ಕಚೇರಿಯಲ್ಲಿಯೇ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊರಗುತ್ತಿಗೆ ನೌಕರನಾಗಿರುವ  ಬಸಣ್ಣಾ ಅವರಿಗೆ ಏಜೆನ್ಸಿಯಿಂದ ಸಂಬಳವೂ ಪಾವತಿಯಾಗದೇ ಇರುವುದಕ್ಕೆ ಮನನೊಂದು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತನ ಪತ್ನಿ ಕವಿತಾ ಪಟ್ಟೇದ್  ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂತಹದ್ದೇ ಪರಿಸ್ಥಿತಿ ರಾಜ್ಯದ ಎಲ್ಲಾ  ಹೊರಗುತ್ತಿಗೆ ನೌಕರರದ್ದೂ ಆಗಿದೆ. ಮೈಸೂರು ಜಿಲ್ಲೆಯ ಹೊರಗುತ್ತಿಗೆ ನೌಕರರ ಪರಿಸ್ಥಿತಿಯೂ ಕೂಡ ಇದರಿಂದ ಹೊರತಾಗಿಲ್ಲ.

ಖಾಯಂ ನೇಮಕಾತಿಗಾಗಿ, ಕನಿಷ್ಟ ಕೂಲಿ, ಮೂಲಭೂತ ಸೌಕರ್ಯಗಳು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಹೊರ ಗುತ್ತಿಗೆ ನೌಕರರು ಹಲವಾರು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಯಾವ ಸರ್ಕಾರಿ ಅಧಿಕಾರಿಗಳು ಕೂಡ ಗಮನಹರಿಸುವುದಿಲ್ಲ. ಅವರು ನೀಡುವ ಮನವಿಗಳು ಕೂಡ ಅಧಿಕಾರಿಗಳ ಟೇಬಲ್ ಮೇಲೆ ಹಾಗೆಯೇ ಕೊಳೆಯುತ್ತವೆ.

ಈ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜು,  ಕೆ.ಆರ್.ಆಸ್ಪತ್ರೆ , ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಗಳ ಹೊರ ಗುತ್ತಿಗೆ ನೌಕರರು ಕೂಡ `ಸವಾಲ್’ ಪತ್ರಿಕೆ ಹಾಗೂ ವೆಬ್ ಸೈಟ್ ನೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದು,  ಬಾಕಿ ಇರುವ ವೇತನ ಪಾವತಿಸುವಂತೆ ಹಾಗೂ ಸಮಯಕ್ಕೆ ಸರಿಯಾಗಿ ಸಂಬಳ ನೀಡುವಂತೆ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ  ಇಲಾಖೆಗಳಲ್ಲಿ ಮನವಿ ಮಾಡಿದ್ದಾರೆ.

ಆದ್ದರಿಂದ ಇನ್ನಾದರೂ ಸರ್ಕಾರಿ ಅಧಿಕಾರಿಗಳು ಹೊರ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಕನಿಷ್ಟ ವೇತನ ಪಾವತಿಸಲು ಮುಂದಾಗಬೇಕು ಎಂಬುದು `ಸವಾಲ್’ ಪತ್ರಿಕೆ ಹಾಗೂ ವೆಬ್ ಸೈಟ್ ನ ಕಳಕಳಿ.

ಹಿಂದಿನ ಲೇಖನಉದ್ದವ್ ಠಾಕ್ರೆಗೆ ಅಗ್ನಿ ಪರೀಕ್ಷೆ: ಬಹುಮತ ಸಾಬೀತಿಗೆ ನಾಳೆಯೇ ಅಧಿವೇಶನ ಕರೆದ ರಾಜ್ಯಪಾಲರು
ಮುಂದಿನ ಲೇಖನಮಹಾರಾಷ್ಟ್ರ: ನಾಳೆ ಮುಂಬೈಗೆ ಆಗಮಿಸಲಿರುವ ಬಂಡಾಯ ಶಾಸಕರು