ಮೈಸೂರು(Mysuru): ಮೈಸೂರು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಸಯ್ಯದ್ ಹಸ್ರತ್ ಉಲ್ಲಾ ಮತ್ತು ಗೋಪಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಶೋಭಾ ಸುನೀಲ್ ನಾಮಪತ್ರ ಸಲ್ಲಿಸಿದರೇ ಜೆಡಿಎಸ್ ನಿಂದ ಮೇಯರ್ ಸ್ಥಾನಕ್ಕೆ ಕೆ. ವಿ ಶ್ರೀಧರ್ , ಉಪಮೇಯರ್ ಸ್ಥಾನಕ್ಕೆ ರೇಷ್ಮಾಭಾನು ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಜೆಡಿಎಸ್ ನಿರ್ಧರಿಸಿದ್ದು, ಕೆ.ವಿ ಶ್ರೀಧರ್ ಪಕ್ಷೇತರರಾಗಿ ಗೆದ್ದು ಜೆಡಿಎಸ್ ಸೇರಿದ್ಧರು.
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಶಿವಕುಮಾರ್ ಉಪಮೇಯರ್ ಸ್ಥಾನಕ್ಕೆ ರೂಪಾ ನಾಮಪತ್ರ ಸಲ್ಲಿಸಿದ್ದಾರೆ.














