ಮೈಸೂರು: ಕಳೆದ ಎರಡು ತಿಂಗಳಿನಿಂದ ಮೈಸೂರು ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಎಂಎಂಸಿ ನಿರ್ದೇಶಕಿ ಡಾ.ದಾಕ್ಷಾಯಿಣಿಯವರಿಗೆ ಮನವಿ ನೀಡಲಾಯಿತು.
ಹೊರ ಗುತ್ತಿಗೆ ನೌಕರರು ವೇತನವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಎರಡು ತಿಂಗಳಿಂದ ವೇತನ ಪಾವತಿಯಾಗದೇ ಇರುವುದರಿಂದ ದಿನನಿತ್ಯದ ಖರ್ಚಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದ್ದರಿಂದ ಶೀಘ್ರವಾಗಿ ವೇತನ ಪಾವತಿಸುವಂತೆ ನೌಕರರು ಮನವಿ ಮಾಡಿದ್ದಾರೆ.