ಮೈಸೂರು : ಮೈಸೂರು ಮಿತ್ರ ಕನ್ನಡ ದಿನಪತ್ರಿಕೆಯ ಪುಟ ವಿನ್ಯಾಸಕ ಗೋವಿಂದರಾಜು(೫೩) ಅವರು ಸೋಮವಾರ ಮಧ್ಯಾಹ್ನ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೈಸೂರಿನ ಬೆಲವತ್ತ ಗ್ರಾಮದ ನಿವಾಸಿಯಾಗಿದ್ದ ಗೋವಿಂದರಾಜು ಪತ್ನಿ ಗೀತಾ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ೧೨ ಗಂಟೆಗೆ ಕುಂಬಾರಕೊಪ್ಪಲಿನ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.