ಮೈಸೂರು(Mysore): ಒಂಟಿಕೊಪ್ಪಲಿನ ವೆಂಕಟರಮಣ ಸ್ವಾಮಿ ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟಿನವರು ಹಣ ಲೂಟಿ ಮಾಡುತ್ತಿರುವ ಪ್ರಕರಣವನ್ನು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ನಗರ ಪಾಲಿಕೆ ಸದಸ್ಯರಾದ ಲೋಕೇಶ್ ಪಿಯಾ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರು ನಂತರ ದೇವಸ್ಥಾನದ ಟ್ರಸ್ಟಿಗಳು ಸಾರ್ವಜನಿಕರಿಂದ ಕೋಟಿ ಗಟ್ಟಲೆ ಹಣವನ್ನು ಕೊಳ್ಳೆ ಹೊಡೆದಿರುವುದು ತುಂಬಾ ದುರದೃಷ್ಟಕರವಾಗಿದೆ ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ದೇವಾಲಯವನ್ನು ಮುಜರಾಯಿಗೆ ವಹಿಸಬೇಕು.ಇಲ್ಲವಾದಲ್ಲಿ ದೇವಸ್ಥಾನದ ಟ್ರಸ್ಟೀಗಳ ವಿರುದ್ದ ದೇವಾಲಯದ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪ್ರಶಾಂತ್ ಆರ್ಯ, ಸ್ಮರಣ್, ಶೇಖರ್, ನಾಗೇಶ್, ಮಂಜು, ರಾಜು, ಸಾಗರ್ ಮುಂತಾದವರು ಪಾಲ್ಗೊಂಡಿದ್ದರು.