ಮೈಸೂರು: ಅಪಾಯಕಾರಿ ವ್ಹೀಲಿಂಗ್ ಮಾಡುತ್ತಾ ಪುಡಾಂಟ ಮೆರೆದ ಪಿಎಸ್ ಐ ಪುತ್ರನನ್ನು ಮೈಸೂರು ನಗರದ ಸಿದ್ದಾರ್ಥ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ವ್ಹೀಲಿಂಗ್ ಮಾಡ್ತಿದ್ದ ಮಹಿಳಾ ಪಿಎಸ್ ಐ ಪುತ್ರ ಸೈಯದ್ ಐಮಾನ್ ಎಂಬಾತನನ್ನು ಪೊಲೀಸರು ದ್ವಿಚಕ್ರ ವಾಹನ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿ ಸೈಯದ್ ಐಮಾನ್ ತನ್ನ ಸ್ನೇಹಿತನ ಜೊತೆಗೂಡಿ ರಿಂಗ್ ರಸ್ತೆ, ರಾಜೀವ್ ನಗರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಜೊತೆಗೆ, ವ್ಹೀಲಿಂಗ್ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಿದ್ದ. ವ್ಹೀಲಿಂಗ್ ವಿಡಿಯೋ ಆಧರಿಸಿ ಐಮಾನ್ ನನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Saval TV on YouTube