ಮೈಸೂರು: ಗುಣಮಟ್ಟ ಸರಿಯಿಲ್ಲ ಎಂಬ ಕಾರಣಕ್ಕೆ ಹಾಕಿದ್ದ ಡಾಂಬರ್ ಅನ್ನು ತೆರೆನುಗೊಳಿಸಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೀಗ ಮೈಸೂರಿನ ಹೃದಯ ಭಾಗದ ಡಿ.ದೇವರಾಜ ಅರಸು ರಸ್ತೆಗೆ ಮರು ಡಾಂಬರೀಕರಣ ಮಾಡುತ್ತಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಕೆ.ಆರ್.ಸರ್ಕಲ್ ಕಡೆಯಿಂದ ಅರಸು ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ಆರಂಭಿಸಿದ್ದು ವಾರದ ಹಿಂದೆ ಹಾಕಿದ್ದ ಡಾಂಬರ್ ತೆರೆವುಗೊಳಿಸಿದ ನಂತರ ಈಗ ಗುಣ ಮಟ್ಟದ ಡಾಂಬರೀಕರಣ ಕಾಮಗಾರಿ ನಡೆಸುತ್ತಿದ್ದು, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜು ಖುದ್ದು ಹಾಜರಿದ್ದು, ನಿರ್ವಹಣೆ ಮಾಡುತ್ತಿದ್ದಾರೆ. ಕಾಮಗಾರಿ ಸರಿ ಇಲ್ಲ ಎಂಬ ವಿಷಯ ತಿಳಿಯುತ್ತದ್ದಂತೆಯೇ ಸ್ಥಳಕ್ಕೆ ಆಗಮನಿಸಿ ಪರಿಶೀಲಿಸಿದ ಶಾಸಕ ಎಲ್.ನಾಗೇಂದ್ರ, ಡಿ. ದೇವರಾಜ ಅರಸು ರಸ್ತೆಯ ಅರ್ಧ ಭಾಗಕ್ಕೆ ಅಳವಡಿಸಿದ್ದ ಡಾಂಬರ್ ತೆಗೆದು ಮತ್ತೆ ಗುಣಮಟ್ಟದ ಡಾಂಬರೀಕರಣ ಕಾಮಗಾರಿ ನಡೆಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.
ಅದರಂತೆ ಅಂದೆ ರಾತ್ರಿ ಡಾಂಬರ್ ಅನ್ನು ಡೋಜರ್ ನಿಂದ ತೆರೆವುಗೂಳಿಸಿದ್ದ ಅಧಿಕಾರಿಗಳು ಇದೀಗ ಮತ್ತೆ ಡಾಂಬರೀಕರಣ ಆರಂಭಿಸಿದ್ದಾರೆ. ಅದಕ್ಕಾಗಿ ಡಿ.ದೇವರಾಜ ಅರಸು ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಅಕ್ಕ-ಪಕ್ಕದ ರಸ್ತೆಗಳಲ್ಲಿ ಬದಲಿ ಮಾರ್ಗಸೂಚಿಸಲಾಗಿದೆ.
ಕೆ.ಆರ್. ಸರ್ಕಲ್ ನೊಂದ ಕೆ.ಎಲ್.ಬಿ ರಸ್ತೆ ಜಂಕ್ಷನ್ ವರೆಗೆ 850 ಮೀಟರ್ ಉದ್ದ, ಹಾಗೂ 16 ಮೀಟರ್ ಅಗಲದ ರಸ್ತೆಗೆ ಡಾಂಬರೀಕರಣ, ಎರಡೂ ಕಡೆಯ ಫುಟ್ ಪಾತ್ ಕಾಮಗಾರಿ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ಅಕ್ಕಪಕ್ಕದ ಅಡ್ಡ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳು ಸೇರಿ 9 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಪ್ರತಿ ದಿನ 200 ಮೀಟರ್ ನಂತೆ ಕಾಮಗಾರಿ ವಡೆಸಲಾಗುತ್ತಿದ್ದು, ಭಾನುವಾರ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಅಂದು ಕೆಲಸ ಮಾಡಬೇಡಿ ಎಂದು ಪೊಲೀಸರು ಸಲಹೆ ನೀಡಿರುವುದರಿಂದ ಮಂಗಳವಾರ ಅರಸು ರಸ್ತೆ ಕೆಲಸ ಪೂರ್ಣಗೊಳಿಸುತ್ತೆವೆ ಎಂದು ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜು ತಿಳಿಸಿದ್ದಾರೆ.