ಮನೆ ರಾಜ್ಯ ಮೈಸೂರು: ನಿಯಮಕ್ಕೆ ವಿರುದ್ಧವಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ

ಮೈಸೂರು: ನಿಯಮಕ್ಕೆ ವಿರುದ್ಧವಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ

0

ಮೈಸೂರು : ಜಿಲ್ಲಾ ಪಂಚಾಯತ್ ಹಿನಕಲ್ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಪೂರ್ವ ಅನುಮತಿ ಪಡೆಯದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಹೆಮಂತ್ ಕುಮಾರ್ ರವರು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ112 ಮತ್ತು113 ರ ಗ್ರಾಮ ಪಂಚಾಯಿತ್ ಸಿಬ್ಬಂದಿ ನೇಮಕಾತಿ ನಿಯಮಕ್ಕೆ ವಿರುದ್ಧವಾಗಿ ನಿಯೋಜಿಸಿ ಕೊಂಡಿರುವ ಪ್ರಸನ್ನ (ಬಿಲ್ ಕಲೆಕ್ಟರ್) ಹಾಗೂ ಶಿಲ್ಪಾ ( ಗುಮಾಸ್ತರು) ಹುದ್ದೆ ಇಂದ 12/12/2016 ರಲ್ಲಿ ಹಿನಕಲ್ ಪಂಚಾಯಿತಿ ಇಂದ ಅಕ್ರಮ ನೇಮಕಾತಿ ಪ್ರಕ್ರಿಯೆ ಎಂದು ಬಿಡುಗಡೆ ಗೊಳಿಸಿರುತ್ತಾರೆ.

Join Our Whatsapp Group

ಕ್ರಿಮಿನಲ್ ಪ್ರಕರಣ ಸ್ವರೂಪ ಉಳ್ಳ ಮತ್ತು ರೌಡಿ ಶೀಟರ್ ಚಾಲ್ತಿಯಲ್ಲಿರುವ ಅಪರಾಧಿಯನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ವಿರುದ್ಧವಾಗಿ  ಎಂ. ರೋಹಿತ್ ಅವರನ್ನು ಡಾಟಾ ಅಪರೇಟರ್ ಕಂ ಕ್ಲರ್ಕ ಹುದ್ದೆಗೆ ನಿಯೋಜಿಸಿ ಕೊಂಡಿರುವುದನ್ನು ಹೊಸದಾಗಿ ಮೇಲ್ ದರ್ಜೆಗೆರಿರುವ ಹೂಟಗಳ್ಳಿ ನಗರ ಸಭೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈ ರೀತಿ ಅಕ್ರಮವಾಗಿ ನಿಯೋಜಿಸಿಕೊಂಡಿರುವ ಸಿಬ್ಬಂಧಿಗಳು ವಿರುದ್ಧ ಜಿಲ್ಲಾ ನಗರಾಭಿವೃದ್ಧಿ ಜಿಲ್ಲಾಕೋಶ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ನೀಡಲಾಗಿ ಇವರನ್ನು ಪೌರ ಸೇವಾ ವೃಂದಕ್ಕೆ ವಿಲೀನಗೊಳಿಸದೇ ತಾತ್ಕಾಲಿಕವಾಗಿ ತಡೆ ಹಿಡಿಯಲಾಯಿತು.

ಇವರನ್ನು ಪೂರ್ವಾನ್ವಯವಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ತಾಲ್ಲೋಕು ಪಂಚಾಯಿತ್ ಕಾರ್ಯನಿ ರ್ವಾಹಕ ಅಧಿಕಾರಿ ದಿನಾಂಕ 15/12/2023 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಮೈಸೂರು ಈ ವರೆಗೂ ಬಿಡುಗಡೆಗೊಳಿಸದೆ ಇರುವುವರಿಂದ ಇವರಿಗೆ ವೇತನ ಪಾವತಿಸುತ್ತಾ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿರುತ್ತದೆ ಸದರಿ ಸಿಬ್ಬಂದಿಗಳ ರಾಜ ಕೀಯ ಪ್ರಭಾವ ಬಳಸಿಕೊಂಡು ಅನಧಿಕೃತವಾಗಿ ಮುಂದುವರೆದಿರುವ ಬಗ್ಗೆ ದಾಖಲೆ ಸಮೇತ ದೂರು ನೀಡಿದ್ದರು.

ಈವರೆಗೂ ಬಿಡುಗಡೆಗೊಳಿಸಿದೆ ಆಕ್ರಮದ ಬಗ್ಗೆ ವಿಚಾರಣೆ ಮಾಡುತ್ತದ್ದೆವೆ ಎಂದು ಬಿಡುಗಡೆಗೆ ಮೀನಾಮೇಷ ಎಣಿಸುತ್ತಿರುವ ಮತ್ತು ಇವರಿಗೆ ಸಹಕಾರಿ ಸುತ್ತರುವ ಅಧಿಕಾರಿಗಳಾದ (1)  ಗ್ರಾಯಿತ್ರಿ ಕಿ.ಎಂ CEO,(2)  ಕೃಷ್ಣಂರಾಜ್ ಉಪಕಾರ್ಯದರ್ಶಿ (ಅಭಿವೃದ್ಧಿ) (3) ಸವಿತಾ ಉಪಕಾರ್ಯದರ್ಶಿ(ಆಡಳಿತ)(4) ನರಸಿಂಹ ಮಾರ್ತಿ ಹಿಂದಿನ ಪೌರ ಆಯುಕ್ತರು ಹೂಟಗಳ್ಳಿ ನಗರಸಭೆ(5) ಚಂದ್ರಶೇಖರ್ ಬಿ. ಎನ್ ಹಾಲಿ ಪೌರ ಆಯುಕ್ತರು ಹೂಟಗಳ್ಳಿ ನಗರಸಭೆ(6) ಸೈಯ ಫೌದ್ದಿನ್ ಅಧೀಕ್ಷರು ಪೌರಡಳಿತ ಇಲಾಖೆ ಬೆಂಗಳೂರು(7) ಮಧು ಎಚ್ ಪಿ ಕಂದಾಯಧಿಕಾರಿ ಹೂಟಗಳ್ಳಿ ನಗರಸಭೆ(8) ಶುಭ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿ ಕಚೇರಿ ಇವರುಗಳ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಬಿಡುಗಡೆಗೊಳಿಸಬೇಕು ಮತ್ತು ಇವರಿಗೆ ಪಾವತಿಸಿರುವ ವೇತನವನ್ನು ಈ ಅಧಿಕಾರಿಗಳ ವೇತನದಿಂದ ಕಟಾವು ಮಾಡಿ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಬೇಕೆಂದು ಒತ್ತಾಯಿಸುತ್ತೇನೆ.