ಮೈಸೂರು(Mysuru) : ನಗರದ ಹೆಸರಾಂತ ವೈದ್ಯರು, ಭಾರತ್ ಕ್ಯಾನ್ಸರ್ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಎಂ.ಸಿ. ವಿಶ್ವೇಶ್ವರ ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲದಿನಗಳ ಹಿಂದಷ್ಟೆ ಅವರಿಗೆ ಪಿತ್ತಜನಕಾಂಗದ ಮರುಜೋಡಣೆ ಮಾಡಲಾಗಿತ್ತು. ಅದು ಅವರ ದೇಹಕ್ಕೆ ಹೊಂದದೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಮ್ಮ ಸೇವೆಯ ಮೂಲಕ ಸಾಕಷ್ಟು ಜನ ಮನ್ನಣೆ ಗಳಿಸಿದ್ದ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.















