ಮೈಸೂರು: ಬೈಕ್ ನಿಂದ ಕೆಳಗೆ ಬಿದ್ದು ಸವಾರ ಮೃತಪಟ್ಟಿರುವ ಘಟನೆ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಬಳಿ ಮಂಗಳವಾರ ನಡೆಯಿತು.
ಮೃತರನ್ನು ಪಿರಿಯಾಪಟ್ಟಣದ ನಿವಾಸಿ ಪ್ರತೀಪ್ (31) ಎಂದು ಗುರುತಿಸಲಾಗಿದೆ.
ನಗರದ ಬೋಗಾದಿಯ ಕಿಡ್ ವಿಂಟ್ರೋನಲ್ಲಿ ಪ್ರತೀಪ್, ಇವೆಂಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಪಿರಿಯಾಪಟ್ಟಣದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದಾಗ ಕೆಳಗೆ ಬಿದ್ದಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ವಿ.ವಿ.ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube