ಮನೆ ಸ್ಥಳೀಯ ಮೈಸೂರು: ಸಾರಿಗೆ ಅದಾಲತ್ ನಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೇ ಆರ್ ಟಿ ಓ ಅಧಿಕಾರಿ  ಪಲಾಯನ

ಮೈಸೂರು: ಸಾರಿಗೆ ಅದಾಲತ್ ನಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೇ ಆರ್ ಟಿ ಓ ಅಧಿಕಾರಿ  ಪಲಾಯನ

0

ಮೈಸೂರು: ಸಾರಿಗೆ ಅದಾಲತ್ ನಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೇ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ ಕುಂಟು ನೆಪ ಹೇಳಿ ಪಲಾಯನ ಗೈದಿರುವ ಘಟನೆ ಮೈಸೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ (ನವೆಂಬರ್ 16)  ನಡೆದಿದೆ.

ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಲು  ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಸಾರಿಗೆ ಅದಲಾತ್ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ, ಸಾರ್ವಜನಿಕರ ಅಹವಾಲನ್ನು ಸ್ವೀಕರಿಸದೇ ತನ್ನ ತಪ್ಪನ್ನು ಮರೆಮಾಚಿಕೊಳ್ಳುವ ಸಲುವಾಗಿ ಇದು ಸಾರಿಗೆ ಅದಾಲತ್ ಅಲ್ಲ, ಆಟೋ ರಿಕ್ಷಾ ಯೂನಿಯನ್ ಅವರನ್ನು ಮಾತ್ರ ಕರೆದು  ಮಾತನಾಡಿದ್ದೇನೆ ಎಂದು ಸಾರ್ವಜನಿಕರನ್ನು ವಾಪಾಸ್ ಕಳುಹಿಸಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ತನಗೇ ಮೀಟಿಂಗ್ ಇರುವುದಾಗಿ ಕುಂಟು ನೆಪ ಹೇಳಿ ಹೊರಟು ಹೋಗಿದ್ದಾರೆ.

ಇದರಿಂದಾಗಿ ಸಾರಿಗೆ ಅದಾಲತ್ ನಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾರ್ವಜನಿಕರು ವಾಪಾಸ್ ಹೋಗಿರುವ ಘಟನೆ ನಡೆದಿದೆ.

ಈ ಕುರಿತು ‘ಸವಾಲ್ ವಾಹಿನಿ’ಯೊಂದಿಗೆ ಮಾತನಾಡಿದ ಸಾರ್ವಜನಿಕರು, ಸಾರಿಗೆ ಅದಾಲತ್  ಎಂದು ಪತ್ರಿಕಾ ಪ್ರಕಟಣೆ ನೀಡಿದ್ದು, ಕಾರ್ಯಕ್ರಮದ ಬ್ಯಾನರ್ ನಲ್ಲಿಯೂ ಸಾರಿಗೆ ಅದಾಲತ್ ಎಂದೇ ಹಾಕಿಕೊಂಡಿದ್ದಾರೆ. ಆದರೆ ಅದಾಲತ್ ನಲ್ಲಿ ಭಾಗವಹಿಸಲು ಆಗಮಿಸಿದ ಸಾರ್ವಜನಿಕರಿಗೆ ನಾವು ಆಟೋ ಯೂನಿಯನ್ ಅವರನ್ನು ಮಾತ್ರ ಕರೆದಿರುವುದು ಎಂದು ಹೇಳಿ ಉಳಿದವರನ್ನು ವಾಪಾಸ್ ಹೊರಡುವಂತೆ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಮೀಟಿಂಗ್ ಇದೆ ಎಂದು ಆರ್ ಟಿ ಓ ಅಧಿಕಾರಿ  ದೇವಿಕಾ ಹೊರಟು ಹೋದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೇ ಆರ್ ಟಿ ಓ ಅಧಿಕಾರಿ ಪಲಾಯನ ಮಾಡಿದ್ದು, ಈ ಸಂಬಂಧ ಕಾನೂನು ಹೋರಾಟ ಮಾಡುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.