ಮೈಸೂರು: ಹೆಚ್.ಡಿ ಕೋಟೆ ತಾಲೂಕಿನ ಮೈಸೂರು- ಗದ್ದಿಗೆ ರಸ್ತೆಯ ಕ್ಯಾತನಹಳ್ಳಿ ಗೇಟ್ ಬಳಿ ಇರುವ ಯಾತ್ರಿ ನಿವಾಸ ವೈನ್ಸ್ ಎಂಬಲ್ಲಿ ಹೆಚ್ಚಿನ ಬೆಲೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
260 ರೂ. ಕ್ವಾರ್ಟರ್ ಐಬಿಯನ್ನು 290 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದರಂತೆಯೇ ಇತರೆ ಮದ್ಯದ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಸರ್ಕಾರ ಈಗಾಗಲೇ ಮದ್ಯದ ಬೆಲೆಯನ್ನು ಏರಿಸಿದ್ದು, ಅಂಗಡಿ ಮಾಲೀಕರು ಬೆಲೆ ಏರಿಸಿದ್ದಾರೆ ಎಂದು ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಪ್ರಶ್ನಿಸಿದ ಪತ್ರಕರ್ತರಿಗೆ ಅಲ್ಲಿಯ ಸಿಬ್ಬಂದಿ ಸಮರ್ಪಕ ಉತ್ತರ ನೀಡದೇ ಬೇಜವಬ್ದಾರಿ ಉತ್ತರ ನೀಡಿದ್ದಾರೆ. ಆದ್ದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.