ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ – 2024 ರ ಅಂಗವಾಗಿ ನಂಜನಗೂಡಿನಿoದ ಹುಣಸೂರಿಗೆ ಸರಬರಾಜಾದ 650 ಮಿಲಿಯ ಕಿಂಗ್ ಫಿಷರ್ ಸ್ಟ್ರಾಂಗ್ ಪ್ರೀಮಿಯಂನ ಒಟ್ಟು 1150 ರ.ಪೆ ಬಿಯರ್‌ನ ಪೈಕಿ 07 ರಟ್ಟಿನ ಪೆಟ್ಟಿಗೆಗಳಲ್ಲಿ Barcode, QR Code, Stickers ಅಥವಾ ಕಂಟ್ರೋಲಿoಗ್ ಭದ್ರತಾ ಚೀಟಿಗಳು ಇರುವುದಿಲ್ಲ ಹಾಗೂ ಎರಡು ರಟ್ಟಿನ ಪೆಟ್ಟಿಗೆಗಳ ಬಾರ್ ಕೋಡ್ ಇದ್ದರೂ ಅವುಗಳು ಮಿಸ್ ಮ್ಯಾಚ್ ಆಗಿರುವುದು ಕಂಡುಬAದ ಹಿನ್ನಲೆಯಲ್ಲಿ ಹುಣಸೂರು ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ಗೀತಾ ಡಿ. ರವರು ನಂಜನಗೂಡಿನ ಯುನೈಟೆಡ್ ಬ್ರೀವರೀಸ್ ಲಿ. ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಒಟ್ಟು ಮೌಲ್ಯ ರೂ. 23,07,049 ಗಳಾಗಿರುತ್ತವೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.16 ರಿಂದ 29 ರವರೆಗೆ ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖಾ ವತಿಯಿಂದ ಅಕ್ರಮ ಮದ್ಯ ಚಟುವಟಿಕೆಗಳನ್ನು ಪತ್ತೆಹಚ್ಚಿ ಅಬಕಾರಿ ಕಾನೂನಿನನ್ವಯ ಒಟ್ಟು 148 ಮೊಕದ್ದಮೆಗಳನ್ನು ದಾಖಲಿಸಿದ್ದು, 376.445 ಲೀ. ಮದ್ಯ, 351432 630 ಲೀ. ಬಿಯರ್ ಮತ್ತು ಒಟ್ಟು 18 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟಾರೆ ಮೌಲ್ಯ 8,36,37,858 ರೂ. ಆಗಿರುತ್ತದೆ ಎಂದು ಮೈಸೂರು ಗ್ರಾಮಾಂತರ ಜಿಲ್ಲೆಯ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೆಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.