ಮನೆ ಸ್ಥಳೀಯ ಮೈಸೂರು ನೈಋತ್ಯ ರೈಲ್ವೆ ವಿಭಾಗದಿಂದ ಅಂತಾರಾಷ್ಟ್ರೀಯ ಮಟ್ಟದ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನ ಆಚರಣೆ

ಮೈಸೂರು ನೈಋತ್ಯ ರೈಲ್ವೆ ವಿಭಾಗದಿಂದ ಅಂತಾರಾಷ್ಟ್ರೀಯ ಮಟ್ಟದ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನ ಆಚರಣೆ

0

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು 2025ರ ಜೂನ್ 5ರಂದು ಅಂತಾರಾಷ್ಟ್ರೀಯ ಲೆವೆಲ್ ಕ್ರಾಸಿಂಗ್ ಜಾಗೃತಿ ದಿನ ಆಚರಿಸಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಕ್ರಾಸ್‌ಗೇಟ್ ಬಳಕೆಯ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು.

ಈ ಕುರಿತು ಮಾಹಿತಿ ನೀಡಿದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ, ಮೈಸೂರಿನ ಕೋಕ್ಕರಹಳ್ಳಿ ಲೆವಲ್ ಕ್ರಾಸಿಂಗ್ ಗೇಟ್ ಸಂಖ್ಯೆ 01ರಲ್ಲಿ ಬೆಳಿಗ್ಗೆ 9:30ಕ್ಕೆ ಈ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿತ್ತೆಂದರು. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮುದಿತ್ ಮಿತ್ತಲ್‌ ಅವರು ಇತರ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಜಾಗೃತಿ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡವೂ ಪ್ರಮುಖ ಪಾತ್ರ ವಹಿಸಿತು. ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಪಾಲಿಸಬೇಕಾದ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ನೀಡಲಾಯಿತು.

ಸಾರ್ವಜನಿಕರಿಗೆ ಸುರಕ್ಷತಾ ಕರಪತ್ರಗಳ ವಿತರಣೆ ಮಾಡಲಾಯಿತು. ರಸ್ತೆ ಬಳಕೆದಾರರೊಂದಿಗೆ ಸಂವಾದದ ಮೂಲಕ ಲೆವೆಲ್ ಕ್ರಾಸಿಂಗ್ ಸಮಯದಲ್ಲಿ ಎಚ್ಚರಿಕೆಗೆ ಕರೆ ಮಾಡಬಾರದು/ಮಾಡಬೇಕು ಎಂಬ ನಿಬಂಧನೆಗಳ ಪ್ರಾತ್ಯಕ್ಷಿಕೆಗಳು ಸೇರಿದ್ದವು. ಇವೆಲ್ಲದರ ಉದ್ದೇಶ, ರಸ್ತೆ ಮತ್ತು ರೈಲು ಸಂಚಾರದ ನಡುವೆ ತಡೆರಹಿತ ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಯನ್ನು ಸ್ಥಾಪಿಸುವುದು ಹಾಗೂ ಪ್ರಾಣಾಪಾಯದಿಂದ ಬದುಕುಳಿಯಲು ಸಹಾಯವಾಗುವ ಜಾಗೃತಿಯನ್ನು ಮೂಡಿಸುವುದು.


ನೈಋತ್ಯ ರೈಲ್ವೆ ಮೈಸೂರು ವಿಭಾಗವು, ಸಾರ್ವಜನಿಕರು ಲೆವಲ್ ಕ್ರಾಸಿಂಗ್‌ಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಜೀವ ಮತ್ತು ಇತರರ ಸುರಕ್ಷತೆಯನ್ನೂ ಕಾಪಾಡಬೇಕೆಂದು ವಿನಂತಿಸಿದೆ.