ಮನೆ ಸ್ಥಳೀಯ ಮೈಸೂರು: ಜೂನ್ 10  ರಿಂದ 12 ರವರೆಗೆ ಮೂರು ದಿನಗಳ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ...

ಮೈಸೂರು: ಜೂನ್ 10  ರಿಂದ 12 ರವರೆಗೆ ಮೂರು ದಿನಗಳ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ

0

ಮೈಸೂರು: ಭಾರತೀಯ ಭಾಷಾ ಸಂಸ್ಥಾನವು ದಿನಾಂಕ ಜೂನ್ 10  ರಿಂದ 12 ರವರೆಗೆ ಮೂರು ದಿನಗಳ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ (ಸಿಸಿಎಲ್ಐ-24) ವನ್ನು ಹಮ್ಮಿಕೊಂಡಿದೆ.

Join Our Whatsapp Group

 ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ 10/06/2024 ರಂದು ಬೆಳಗ್ಗೆ 10:00 ರಿಂದ 11:30ರವರೆಗೆ ಸಂಸ್ಥೆಯ ಪ್ರಿವ್ಯೂ ಥಿಯೇಟರ್‌ನಲ್ಲಿ ಜರುಗಲಿದೆ.

 ಪ್ರೊ. ಉದಯ ನಾರಾಯಣ ಸಿಂಗ್, ಡೀನ್, ಕಲಾ ನಿಕಾಯ ಹಾಗೂ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಅಮಿಟಿ ವಿಶ್ವವಿದ್ಯಾಲಯ, ಗುರ್ಗಾಂವ್ ಇವರು ಮುಖ್ಯ ಅತಿಥಿಗಳಾಗಿದ್ದು ಈ ಸಮ್ಮೇಳನದ   ಉದ್ಘಾಟನಾ ಭಾಷಣವನ್ನು ನೆರವೇರಿಸಲಿದ್ದಾರೆ. ಸಮ್ಮೇಳನದ ಗೌರವಾನ್ವಿತ ಅತಿಥಿಗಳಾಗಿ, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ, ಪ್ರೊ. ಶ್ರೀನಿವಾಸ ವರಖೇಡಿ ಉಪಸ್ಥಿತರಿರವರು.

 ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ಪ್ರೊ.ಶೈಲೇಂದ್ರ ಮೋಹನ್ ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಹಿಂದಿನ ಲೇಖನನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ:  ಸಿದ್ದರಾಮಯ್ಯ ಒತ್ತಾಯ
ಮುಂದಿನ ಲೇಖನವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್-3, ಜೆಡಿಎಸ್-2, ಬಿಜೆಪಿ-1 ಸ್ಥಾನದಲ್ಲಿ ಗೆಲುವು