ಹುಣಸೂರು ಲ್ಲೆ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದ ಬಳಿ ಮೂರು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವ ಅಪರೂಪದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದ ಜಮೀನೊಂದರಲ್ಲಿ ಒಂದು ನಾಗರ ಹಾವಿನೊಂದಿಗೆ ಎರಡು ಕೇರೆ ಹಾವುಗಳು ಸ್ವಚ್ಚಂದವಾಗಿ ಸರಸದಲ್ಲಿ ತೊಡಗಿರುವ ದೃಶ್ಯವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.
ಊರಿನ ಯುವಕರು ಮೂರು ಹಾವುಗಳು ಸರಸದಲ್ಲಿ ತೊಡಗಿರುವುದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.














