ಮನೆ ಸ್ಥಳೀಯ ಮೈಸೂರಿನ ವಿಷಕಾರಿ ಅನಿಲ ಸೋರಿಕೆ‌ ಪ್ರಕರಣ: ಮಾಲೀಕನ ಯಡವಟ್ಟಿನಿಂದ ಅವಘಡ

ಮೈಸೂರಿನ ವಿಷಕಾರಿ ಅನಿಲ ಸೋರಿಕೆ‌ ಪ್ರಕರಣ: ಮಾಲೀಕನ ಯಡವಟ್ಟಿನಿಂದ ಅವಘಡ

0

ಮೈಸೂರು: ವಿಷಕಾರಿ ಅನಿಲ ಸೋರಿಕೆ‌ಯಾಗಿ 50 ಜನ ಅಸ್ವಸ್ಥಗೊಂಡಿದ್ದ ಘಟನೆ ಸಂಬಂಧಿಸಿದಂತೆ ಗುಜುರಿ ಅಂಗಡಿ ಮಾಲೀಕ ಮತ್ತು ಕಾರ್ಮಿಕನ ಯಡವಟ್ಟಿನಿಂದ ಅವಘಡ ಸಂಭವಿಸಿದೆ ಎಂದು ನರಸಿಂಹರಾಜ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

Join Our Whatsapp Group

ಮೈಸೂರಿನ ಹಳೇ ಕೆಸರೆ ಗ್ರಾಮದ ವರುಣ ನಾಲೆ ಸಮೀಪದಲ್ಲಿರುವ ಗುಜರಿ ಅಂಗಡಿ ಮಾಲೀಕ ಮೊಹಮ್ಮದ್ ಮೂರು ತಿಂಗಳ ಹಿಂದೆ ದಾವಣಗೆರೆಯಿಂದ ಗುಜರಿ ಸಾಮಗ್ರಿಗಳನ್ನು ತಂದಿದ್ದನು. ಈ ಗುಜುರಿ ಸಾಮಾಗ್ರಿಗಳಲ್ಲಿ ಖಾಲಿ ಸಿಲಿಂಡರ್​ಗಳು ಕೂಡ ಇದ್ದವು. ಈ ಖಾಲಿ ಸಿಲಿಂಡರ್​ನಲ್ಲಿ ಕ್ಲೋರಿನ್ ತುಂಬಿದ ಸಿಲಿಂಡರ್‌ ಕೂಡ ಇತ್ತು. ಶುಕ್ರವಾರ (ಜೂ.07) ರಾತ್ರಿ ಸಿಲಿಂಡರ್​ಗಳನ್ನು ಕಟ್​ ಮಾಡುವಾಗ, ಕಾರ್ಮಿಕ ಕ್ಲೋರಿನ್ ತುಂಬಿದ್ದ ಸಿಲಿಂಡರ್ ಅನ್ನು ಕೂಡ ತುಂಡರಿಸಿದ್ದಾನೆ. ಇದರಿಂದ ಕಾರ್ಮಿಕ ಪ್ರಜ್ಞೆ ತಪ್ಪಿದ್ದಾನೆ.

ಕೆಲವೇ ಹೊತ್ತಲ್ಲಿ ಗುಜುರಿ ಅಂಗಡಿ ಸುತ್ತಲಿನ ಪ್ರದೇಶಕ್ಕೆ ವಿಷಾನಿಲ ಹರಡಿದೆ. ಈ ವಿಷಾನಿಲದಿಂದ ಸುತ್ತಮುತ್ತಲಿನ ಜನರು ಅಸ್ವಸ್ಥಗೊಂಡಿದ್ದಾರೆ. ಸದ್ಯ ಮಾಲೀಕ ಮೊಹಮ್ಮದ್ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.