ಮನೆ ದೇವಸ್ಥಾನ ಮೈಸೂರು: ಮೂಗುರಿನಲ್ಲಿರುವ ತ್ರಿಪುರ ಸುಂದರಿ ದೇವಸ್ಥಾನ

ಮೈಸೂರು: ಮೂಗುರಿನಲ್ಲಿರುವ ತ್ರಿಪುರ ಸುಂದರಿ ದೇವಸ್ಥಾನ

0

ಕರ್ನಾಟಕದಲ್ಲಿರುವ ದೇವಿಯ ದೇವಸ್ಥಾನಗಳಲ್ಲಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಕೂಡ ಒಂದು.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಕಟ್ಟಿಸಿದ ಹಾಗೆ ಮೈಸೂರಿನ ಮೂಗುರಿನಲ್ಲಿರುವ ತ್ರಿಪುರ ಸುಂದರಿ ದೇವಸ್ಥಾನವನ್ನು ಕೂಡ ಮುಸ್ಲೀಂ ಪಾಳೇಗಾರ ಕಟ್ಟಿಸಿದ್ದು. ನೀವು ಈ ದೇವಸ್ಥಾನಕ್ಕೆ ಬಂದರೆ ನೆಲಕ್ಕೆ ಮೂಗನ್ನು ಹಚ್ಚಿ ನಮಸ್ಕರಿಸಬೇಕು. ನಮ್ಮಲ್ಲಿರುವ ಅಹಂಕಾರವನ್ನು ದೇವಿಯ ಮುಂದೆ ತೊರೆಯಬೇಕು ಎಂಬುದು ಇದರ ಅರ್ಥವಾಗಿದೆ.

ಹಲವು ವರ್ಷಗಳ ಹಿಂದೆ ಮುಸ್ಲಿ ಪಾಳೇಗಾರ ಈ ಸ್ಥಳಕ್ಕೆ ಭೇಟಿ ನೀಡುತ್ತಾನೆ. ಅಲ್ಲಿರುವ ನೇರಳೆ ಮರದ ಕೆಳಗೆ ಕಲ್ಲೊಂದರ ಮೇಲೆ ನಿದ್ರಿಸುತ್ತಾನೆ. ಕೆಲ ನಿಮಿಷದ ಬಳಿಕ ತಾಯಿ ಪ್ರತ್ಯಕ್ಷಳಾಗಿ ಅದು ತನಗೆ ಸೇರಿದ ಕಲ್ಲು, ಈ ಕಲ್ಲಿನಲ್ಲಿ ನಾನು ಐಕ್ಯಗೊಂಡಿದ್ದೇನೆ ಎನ್ನುತ್ತಾಳೆ. ಒಮ್ಮೆ ತಬ್ಬಿಬ್ಬಾದ ಪಾಳೇಗಾರ ತಾನು ಅಲ್ಲಾನ ಭಕ್ತ ತನಗೆ ಬೇರೆ ದೇವರ ಬಗ್ಗೆ ನಂಬಿಕೆ ಇಲ್ಲ ಎನ್ನುತ್ತಾನೆ.

ಅಲ್ಲೇ ಪಕ್ಕದಲ್ಲಿ ಒಣಗಿದ ಜೋಳದ ಕಡ್ಡಿಯನ್ನು ನೆಲಕ್ಕೆ ನೆಟ್ಟು, ಅದು ನಾಳೆಯೇ ಚಿಗುರೊಡೆದರೆ ಮಾತ್ರ ತಾನು ದೇವಿಯನ್ನು ನಂಬುತ್ತೇನೆ ಎಂದು ಹೇಳುತ್ತಾನೆ. ಮರುದಿನ ಎದ್ದು ನೋಡಿದಾಗ, ಕಡ್ಡಿ ಚಿಗುರೊಡೆದಿರುತ್ತದೆ. ಇದನ್ನು ಕಂಡ ಪಾಳೇಗಾರ ತಾಯಿಯ ಬಳಿ ಕ್ಷಮೆ ಕೇಳುತ್ತಾನೆ. ಮತ್ತು ಆಕೆಗಾಗಿ ದೇವಸ್ಥಾನ ಕಟ್ಟಿಸುತ್ತಾನೆ. ಆ ದೇವಸ್ಥಾನವೇ ಮುಗೂರು ತ್ರಿಪುರ ಸುಂದರಿ ದೇವಸ್ಥಾನ.