ಮೈಸೂರು: ಮಹಿಳಾ ಜಿಮ್ ಟ್ರೈನರ್ ಬಳಿ ಎಂಡಿಎಂಎ ಮಾದಕ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ಸೇರಿದಂತೆ ಇಬ್ಬರನ್ನು ಮೈಸೂರು ಸೆನ್ ಪೊಲೀಸರು ಬಂಧಿಸಿದ್ದಾರೆ.
ಜಿಮ್ ಟ್ರೈನರ್ ಕುಸುಮಾ ರಾಜ್ (22) ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನ ಸಿಬ್ಬಂದಿ ಅನಿಲ್ ಬೋಬ್ಡೆ ಬಂಧಿತ ಆರೋಪಿಗಳು.
ಆರೋಪಿಗಳಿಂದ 16.57 ಗ್ರಾಂ ಎಂಡಿಎಂಎ ಮಾದಕ ವಸ್ತು, ಡಿಯೋ, ಹೋಂಡಾ ಆ್ಯಕ್ಟೀವಾ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನಿಲ್ ಬೋಬ್ಡೆ, ಜಿಮ್ ಟ್ರೈನರ್ ಕುಸುಮಾ ರಾಜ್ ಅವರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದನು. ಇನ್ನು ಪೊಲೀಸರಿಗೆ ಮೈಸೂರಿನ ಕಾಲೇಜು ವಿದ್ಯಾರ್ಥಿಗಳಿಗೂ ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ.
ಈ ಬಗ್ಗೆ ತನಿಖೆ ನಡೆಸಲು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸೆನ್ ಇನ್ಸಪೆಕ್ಟರ್ ಪ್ರಸನ್ನಕುಮರ್ ಸಬ್ ಇನ್ಸಪೆಕ್ಟರ್ ಅನಿಲ್ ಸಿದ್ದೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ.