ಮನೆ ಅಪರಾಧ ಮೈಸೂರು: ಇಬ್ಬರು ಸರಗಳ್ಳರ ಬಂಧನ:  11.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮೈಸೂರು: ಇಬ್ಬರು ಸರಗಳ್ಳರ ಬಂಧನ:  11.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

0

ಮೈಸೂರು(Mysuru): ಮೋಜು ಮಸ್ತಿಗಾಗಿ  ಸರಗಳ್ಳತನ ಮಾಡುತ್ತಿದ್ದ ಇಬ್ಬರು ಸರಗಳ್ಳರನ್ನು ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್(23) ಹಾಗೂ ದರ್ಶನ್(20) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 11.75. ಲಕ್ಷ ಮೌಲ್ಯದ 235 ಗ್ರಾಂ ತೂಕದ 5 ಚಿನ್ನದ ಸರ, 3 ಲಕ್ಷ ಮೌಲ್ಯದ ಮೂರು ಬೈಕ್’ಗಳು ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್’ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳಿಬ್ಬರು ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಇಬ್ಬರು ಮೋಜು ಮಸ್ತಿಗಾಗಿ ಸಾಕಷ್ಟು ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ತೀರಿಸುವ ಸಲುವಾಗಿ ಇಬ್ಬರು ಆರೋಪಿಗಳು ಸರಗಳ್ಳತನಕ್ಕೆ ಇಳಿದಿದ್ದರು.

ಕುವೆಂಪುನಗರ ಠಾಣೆ ಇನ್ಸ್ ಪೆಕ್ಟರ್ ಷಣ್ಮುಗ ವರ್ಮ ಮತ್ತು ತಂಡದಿಂದ ಈ ಕಾರ್ಯಾಚರಣೆ ನಡೆದಿದೆ. ಈ ಪತ್ತೆ ಕಾರ್ಯದಿಂದ ಕುವೆಂಪುನಗರ ಠಾಣೆಯ ನಾಲ್ಕು ಹಾಗೂ ಕೆ.ಆರ್.ಪೊಲೀಸ್ ಠಾಣೆಯಲ್ಲಿ 1 ಸರಗಳವು ಪ್ರಕರಣ ಪತ್ತೆಯಾಗಿದೆ.

ಹಿಂದಿನ ಲೇಖನಸಪೋಟ ಹಣ್ಣು ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳು
ಮುಂದಿನ ಲೇಖನ ‘ಖಾಸಗಿ ಪುಟ’ಗಳಲ್ಲಿ ಸೆರೆಯಾದ ಪ್ರೇಮಕಥೆ!