ಮೈಸೂರು: 2024 ರ ಡಿಸೆಂಬರ್ 14 ರಂದು ಜಯಮ್ಮ (72) ಯಾರಿಗೂ ತಿಳಿಸದೇ ಮನೆಯಿಂದ ಹೋದವರು ಹಿಂತಿರುಗದೇ ನಾಪತ್ತೆಯಾಗಿದ್ದಾರೆಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಹರೆ: 4.9 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ, ಬಿಳಿ ತಲೆ ಕೂದಲು, ಕನ್ನಡ, ತಮಿಳು, ತೆಲುಗು ಭಾಷೆ ಮಾತನಾಡುತ್ತಾರೆ.
ನೇರಳೆ ಬಣ್ಣ ಸೀರೆ ಧರಿಸಿರುತ್ತಾರೆ. ಮುಖದಲ್ಲಿ ಬಂಗಿನ ಕಲೆ ಮತ್ತು ಹೊಟ್ಟೆಯ ಮೇಲೆ ಬಿಳಿ ಮಚ್ಚೆ ಇರುತ್ತದೆ.
ಈಕೆಯ ಕುರಿತು ಮಾಹಿತಿ ದೊರೆತಲ್ಲಿ ಮೈಸೂರು ನಗರದ ನಿಸ್ತಂತು ಕೊಠಡಿ ದೂ.ಸಂ.0821-2418339, ಕುವೆಂಪುನಗರ ಪೊಲೀಸ್ ಠಾಣೆ ದೂ.2418324, ಪೊಲೀಸ್ ಇನ್ಸ್ ಪೆಕ್ಟರ್ ದೂ.9480802247 ನ್ನು ಸಂಪರ್ಕಿಸಲು ಕೋರಲಾಗಿದೆ.
Saval TV on YouTube