ಮೈಸೂರು ಜಿಲ್ಲಾ ಪಂಚಾಯತ್’ನಲ್ಲಿ 36 ಟೆಕ್ನಿಷಿಯನ್ ಅಸಿಸ್ಟೆಂಟ್, ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಇದೇ ಡಿಸೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮೈಸೂರಿನಲ್ಲಿ ವೃತ್ತಿ ಜೀವನ ಮಾಡಬಯಸುವವರು ಹಾಗೂ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಹುದ್ದೆಯ ಮಾಹಿತಿ:
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ಸ್ (TAE)- 4
ಟೆಕ್ನಿಕಲ್ ಕೋಆರ್ಡಿನೇಟರ್ (TC)- 2
IEC-ಕೋಆರ್ಡಿನೇಟರ್(IEC)-1
ಟೆಕ್ನಿಕಲ್ ಅಸಿಸ್ಟೆಂಟ್(ಅಗ್ರಿಕಲ್ಚರ್)-4
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)-10
ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)-1
ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)-6
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ -8
ವಿದ್ಯಾರ್ಹತೆ:
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ಸ್ (TAE)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ, ಸ್ನಾತಕೋತ್ತರ ಪದವಿ
ಟೆಕ್ನಿಕಲ್ ಕೋಆರ್ಡಿನೇಟರ್ (TC)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ, ಸ್ನಾತಕೋತ್ತರ ಪದವಿ
IEC-ಕೋಆರ್ಡಿನೇಟರ್(IEC)- ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ
ಟೆಕ್ನಿಕಲ್ ಅಸಿಸ್ಟೆಂಟ್(ಅಗ್ರಿಕಲ್ಚರ್)- ಬಿ.ಎಸ್ಸಿ (ಅಗ್ರಿಕಲ್ಚರ್), ಸ್ನಾತಕೋತ್ತರ ಪದವಿ
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)-ಬಿ.ಎಸ್ಸಿ (ಹಾರ್ಟಿಕಲ್ಚರ್), ಸ್ನಾತಕೋತ್ತರ ಪದವಿ
ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)- ಬಿ.ಎಸ್ಸಿ (ಸಿರಿಕಲ್ಚರ್), ಸ್ನಾತಕೋತ್ತರ ಪದವಿ
ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)-ಬಿ.ಎಸ್ಸಿ (ಫಾರೆಸ್ಟ್ರಿ), ಸ್ನಾತಕೋತ್ತರ ಪದವಿ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ -ಬಿ.ಕಾಂ
ವೇತನ:
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ಸ್ (TAE)- ತಿಂಗಳಿಗೆ 24,000 ರೂ.
ಟೆಕ್ನಿಕಲ್ ಕೋಆರ್ಡಿನೇಟರ್ (TC)- ತಿಂಗಳಿಗೆ 29,000 ರೂ.
IEC-ಕೋಆರ್ಡಿನೇಟರ್(IEC)-ತಿಂಗಳಿಗೆ 24,000 ರೂ.
ಟೆಕ್ನಿಕಲ್ ಅಸಿಸ್ಟೆಂಟ್(ಅಗ್ರಿಕಲ್ಚರ್)-ತಿಂಗಳಿಗೆ 24,000 ರೂ.
ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)-ತಿಂಗಳಿಗೆ 24,000 ರೂ.
ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)-ತಿಂಗಳಿಗೆ 24,000 ರೂ.
ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)-ತಿಂಗಳಿಗೆ 24,000 ರೂ.
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ -ತಿಂಗಳಿಗೆ 17,600 ರೂ.
ಅನುಭವ:
ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್ಸ್, ಟೆಕ್ನಿಕಲ್ ಕೋಆರ್ಡಿನೇಟರ್, IEC-ಕೋಆರ್ಡಿನೇಟರ್, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2-3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ:
ಮೈಸೂರು ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 30/12/2022
ಆಯ್ಕೆ ಪ್ರಕ್ರಿಯೆ:
ಮೆರಿಟ್ ಆಧಾರದಲ್ಲಿ ಖಾಲಿ ಹುದ್ದೆಗೆ ಅನುಗುಣವಾಗಿ 1:3 ಆಧಾರದಲ್ಲಿ ಅಭ್ಯರ್ಥಿಗೆ ದೂರವಾಣಿ ಮೂಲಕ ದಾಖಲಾತಿ ಪರಿಶೀಲನೆಗೆ ದಿನಾಂಕ ಗೊತ್ತುಪಡಿಸಲಾಗುತ್ತದೆ.
ಸದರಿ ದಿನಾಂಕದಂದು ಅಭ್ಯರ್ಥಿಗಳು 2 ಭಾವಚಿತ್ರ, ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ, SSLC ಅಂಕಪಟ್ಟಿ ಹಾಗೂ ಪದವಿ/ಸ್ನಾತಕೋತ್ತರ ಪದವಿ ಅಂಕಪಟ್ಟಿಗಳು/ ಅನುಭವ ಪ್ರಮಾಣ ಪತ್ರ/ ಕಂಪ್ಯೂಟರ್ ಜ್ಞಾನ ಹೊಂದಿದ ಪ್ರಮಾಣ ಪತ್ರಗಳನ್ನು ನೋಟರಿ ಅವರಿಂದ ದೃಢೀಕರಿಸಿಕೊಂಡು ಹಾಜರಾಗಬೇಕು.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಮೊಬೈಲ್ ನಂಬರ್- 9980001309 ಗೆ ಕರೆ ಮಾಡಬಹುದು.