ಮನೆ ಸುದ್ದಿ ಜಾಲ ಉಕ್ರೇನ್‌ ಸಂಕಷ್ಟದಲ್ಲಿರುವ ಪ್ರಾಣಿಗಳಿಗೆ ಮೈಸೂರು ಮೃಗಾಲಯದಲ್ಲಿ  ಆಶ್ರಯ

ಉಕ್ರೇನ್‌ ಸಂಕಷ್ಟದಲ್ಲಿರುವ ಪ್ರಾಣಿಗಳಿಗೆ ಮೈಸೂರು ಮೃಗಾಲಯದಲ್ಲಿ  ಆಶ್ರಯ

0

ಮೈಸೂರು(Mysuru):  ಉಕ್ರೇನ್ –ರಷ್ಯಾ ನಡುವೆ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ಪ್ರಾಣಿಗಳಿಗೆ ಆಶ್ರಯ ನೀಡಲು ಮೈಸೂರು ಮೃಗಾಲಯ ಮುಂದಾಗಿದೆ.

ಉಕ್ರೇನ್‌ ನಲ್ಲಿ ನೆಲೆಸಿರುವ ಭಾರತೀಯ ವೈದ್ಯ ಡಾ.ಗಿರಿಕುಮಾರ್ ಸಾಕಿರುವ ಬ್ಲಾಕ್ ಪ್ಯಾಂಥರ್ಸ್ ಹಾಗೂ ಜಾಗ್ವಾರ್ ಪ್ರಾಣಿಗಳು ಮೈಸೂರು ಮೃಗಾಲಕ್ಕೆ ಬರಲು ಸಿದ್ದವಾಗಿವೆ. ಗಿರಿಕುಮಾರ್ ಅವರು ಮನೆಯ ನೆಲ ಮಹಡಿಯಲ್ಲಿ ಜಾಗ್ವಾರ್ ಪ್ಯಾಂಥರ್ಸ್ ಸಾಕಿದ್ದು, ಈ ಮಧ್ಯೆ ರಷ್ಯಾ ಯುದ್ಧದಿಂದ ಉಕ್ರೇನ್ ತೊರೆಯಲು ವೈದ್ಯ. ಗಿರಿಕುಮಾರ್ ಮುಂದಾಗಿದ್ದಾರೆ.

ಆಂಧ್ರಪ್ರದೇಶ ಮೂಲದ ವೈದ್ಯ ಡಾ.ಗಿರಿಕುಮಾರ್, ತನ್ನ ಪ್ರಾಣಿಗಳನ್ನು ಭಾರತಕ್ಕೆ ಕರೆತರಲು ಅವಕಾಶ ಕೋರಿ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ದೇಶದಲ್ಲಿ ವೈಯಕ್ತಿಕವಾಗಿ ಕಾಡು ಪ್ರಾಣಿ ಸಾಕಲು ಅವಕಾಶ ನಿರಾಕರಣೆ ಹಿನ್ನೆಲೆ, ಮೃಗಾಲಯದಲ್ಲಿ ಇಟ್ಟು ಸಾಕಲು ಅವಕಾಶ ಕೋರಿದ್ದಾರೆ.

ವೈದ್ಯ ಗಿರಿಕುಮಾರ್ ಕೋರಿಕೆಗೆ ಕೇಂದ್ರ ಅರಣ್ಯ ಇಲಾಖೆ ಮನ್ನಣೆ ನೀಡಿದೆ. ಈಗಾಗಲೇ 2019ರಲ್ಲೇ ಜಾಗ್ವಾರ ತರಿಸಿಕೊಳ್ಳಲು ಮೈಸೂರು ಮೃಗಾಲಯ ಅವಕಾಶ ಕೋರಿತ್ತು. ಬ್ಲಾಕ್ ಪ್ಯಾಂಥರ್ಸ್ ಹಾಗೂ ಜಾಗ್ವಾರ್ ಸಾಕಲು ಪ್ರಶಸ್ತ ವಾತಾವರಣ ಇದೆ. ಅವುಗಳನ್ನು ನಮ್ಮ ಮೃಗಾಯಲಕ್ಕೆ ಕೊಟ್ಟರೇ ಉತ್ತಮವಾಗಿ ಬೆಳೆಸುತ್ತೇವೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಹೇಳಿದ್ದಾರೆ.