ಮನೆ ಕ್ರೀಡೆ ವುಶು ಕ್ರೀಡೆಯಲ್ಲಿ 3 ಚಿನ್ನ 2 ಕಂಚಿನ ಪದಕ ಗೆದ್ದ ಮೈಸೂರಿನ ಜಿ.ಪ್ರಣತಿ

ವುಶು ಕ್ರೀಡೆಯಲ್ಲಿ 3 ಚಿನ್ನ 2 ಕಂಚಿನ ಪದಕ ಗೆದ್ದ ಮೈಸೂರಿನ ಜಿ.ಪ್ರಣತಿ

0

ಮೈಸೂರು(Mysuru): ‘ವುಶು’ ಕ್ರೀಡೆಯ ರಾಜ್ಯ ಹಾಗೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದಿರುವ 8 ವರ್ಷದ ‍ಜಿ.ಪ್ರಣತಿ ನಮ್ಮ ಮೈಸೂರಿನ ಗರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಸಾರಿದ್ದಾಳೆ.

ಪೊಲೀಸ್‌ ಪಬ್ಲಿಕ್‌ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯು ತನಗಿಂತ ಹೆಚ್ಚು ವಯಸ್ಸಿನ ಸ್ಪರ್ಧಿಗಳ ಮುಂದೆ ಸಾಮರ್ಥ್ಯ ಮೆರೆದು 5 ಪದಕಗಳನ್ನು ದೋಚಿದ್ದಾರೆ.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅವರು ಕೋಚ್‌ ಯು.ದರ್ಶನ್‌ ಅವರಿಂದ ವುಶು ಹಾಗೂ ಪೈಲ್ವಾನ್ ಮಧು ಬಳಿ ಕುಸ್ತಿ ಕಲಿಯುತ್ತಿದ್ದಾರೆ.

ಹ್ಯಾಟ್ರಿಕ್‌ ಚಿನ್ನ: 2020ರಲ್ಲಿ ಗದಗ, 2021ರಲ್ಲಿ ಮಂಗಳೂರಿನ ಮೂಡಬಿದರೆ ಹಾಗೂ 2022ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ವುಶು ಚಾಂಪಿಯನ್‌ಷಿಪ್‌ನ 20 ಕೆ.ಜಿ ಒಳಗಿವರ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.2020ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ವುಶು ಚಾಂ‍ಪಿಯನ್‌ ಷಿಪ್‌ನಲ್ಲಿ ಭಾಗವಹಿಸಿದ್ದರು.

ಮರು ವರ್ಷ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದರು. 2022ರಲ್ಲಿ ಹಿಮಾಚಲ ಪ್ರದೇಶದ ಮಂಡಿಯಲ್ಲೂ 11 ವರ್ಷ ಮೇಲ್ಪಟ್ಟ ವರನ್ನು ಸೋಲಿಸಿ ಕಂಚು ಗೆದ್ದರು. ನಿತ್ಯ 4 ಗಂಟೆ ವುಶು ಅಭ್ಯಾಸ ನಡೆಸುವ ಆಕೆ, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕೌಶಲ ತರಬೇತಿಯನ್ನು ನೀಡಿದ್ದರು. ದಸರಾ ಕ್ರೀಡಾಕೂಟದಲ್ಲಿ ಕ್ರೀಡಾ ಇಲಾಖೆಯೂ ಸನ್ಮಾನಿಸಿದೆ.‍