ಮೈಸೂರು(Mysuru): ಅ.15 ರಿಂದ ಅ.24 ವರಗೆ ಟರ್ಕಿ ದೇಶದಲ್ಲಿ ನಡೆಯುವ ಪಂಜಾ ಕುಸ್ತಿಗೆ ನಗರದ ಟಿಕೆ ಲೇಔಟ್ ನಿವಾಸಿ ಕೆ.ಪಿ. ರಾಮಸ್ವಾಮಿ ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ ನಾಲ್ಕು ಜನ ಆಯ್ಕೆಯಾಗಿದ್ದು, ಬೆಂಗಳೂರಿನಿಂದ ಇಬ್ಬರು, ಧಾರವಾಢದಿಂದ ಒಬ್ಬರು ಆಯ್ಕೆಯಾಗಿದ್ದು, ಕ್ರೀಡಾಕೂಟಕ್ಕೆ ತೆರಳಲಿದ್ದಾರೆ.
ನಾಳೆ ಟರ್ಕಿ ಯಲ್ಲಿ ನಡೆಯುವ ಕ್ರೀಡಾಕೂಟಕ್ಕೆ ತೆರಳುತ್ತಿರುವ ವಿಶೇಷ ಚೇತನರಾದ ರಾಮಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ ಹಾಗೂ ಕವೀಶ್ ಗೌಡ ಧನ ಸಹಾಯ ಮಾಡಿ ಸ್ಪರ್ಧೆಯಲ್ಲಿ ಗೆದ್ದು ಬರುವಂತೆ ಶುಭ ಹಾರೈಸಿದರು.