ಮನೆ ಆರೋಗ್ಯ ನೆಗಡಿಯ ಬಗ್ಗೆ ಜನರಲ್ಲಿ ಊಹಾ ಪೋಹಗಳು- ಕಲ್ಪನೆಗಳು

ನೆಗಡಿಯ ಬಗ್ಗೆ ಜನರಲ್ಲಿ ಊಹಾ ಪೋಹಗಳು- ಕಲ್ಪನೆಗಳು

0

Join Our Whatsapp Group

ನೆಗಡಿಯ ಬಗ್ಗೆ ಜನರಲ್ಲಿ ಹಲವು ಬಗೆಯ ಊಹಾಪೋಹಗಳಿರಬಹುದು .ಅವುಗಳಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎಂದು ಪರಿಶೀಲಿಸಿ ನೋಡಿದಾಗ-

ಮಳೆಯಲ್ಲಿ ನೆನೆದರೆ ನೆಗಡಿಯಾಗುತ್ತದೆ:

ಮಳೆಯಲ್ಲಿ ನೆನೆಯುವುದರಿಂದ ನೆಗಡಿ ಆಗುವುದಿಲ್ಲ. ವಾಸ್ತವವಾಗಿ ಬಾಗಿಲನ್ನು ಭದ್ರವಾಗಿಸಿ ಮನೆಯಲ್ಲಿದ್ದರು ನೆಗಡಿ ಅಂಟಿಕೊಳ್ಳುತ್ತದೆ. ನೆಗಡಿಯ ವೈರಸ್ ಗಳುMoist Heat ನಲ್ಲಿ ಅಭಿವೃದ್ಧಿಯಾಗುವುದು. ಅಧಿಕ ಮಳೆ ಬೀಳುತ್ತಿರುವಾಗ ನೀವು ಮನೆಯಲ್ಲಿರುತ್ತೀರಿ, ಬೆಚ್ಚಗಿನ ವಾತಾವರಣ ಏರ್ಪಡುತ್ತದೆ. ಅಂತಹ ವಾತಾವರಣದಲ್ಲಿ ನಗಡಿಯ ವೈರಸ್ ಮೂಗಿನ ಮೂಲಕ ಪ್ರೀತಿಪೂರ್ವಕವಾಗಿ ಆವರಿಸಿಕೊಳ್ಳುತ್ತದೆ.

ತಲೆಯಲ್ಲಿ ಓಡಾಡಿದರೆ ನಂಗಡಿಯಾಗುತ್ತದೆ:

ಇದು ತಪ್ಪು ನಂಬಿಕೆ ಅಷ್ಟೇ. ನಿಜ ಸಂಗತಿ ಎಂದರೆ ಶೀತ ಪ್ರದೇಶಗಳಲ್ಲಿ ವಾಸಿಸುವವರಿಗೆ ನೆಗಡಿ ಎಷ್ಟು ಕಾಡುವುದಿಲ್ಲ, ಉಷ್ಣ ಪ್ರದೇಶದಲ್ಲಿರುವ ನಮಗೆ ಇದರ ಕಾಟ ಜಾಸ್ತಿ.

ನೆಗಡಿಯಾಗದಿರಲು ಮುಂಜಾಗ್ರತಾ ಕ್ರಮಗಳು:

ನಿಯಮಿತವಾದ ವ್ಯಾಯಾಮ:

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಮ್ಮೊಳಗಿನ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ನೆಗಡಿ ಎಂತಹ ಬಾಧೆಗಳು ನಮ್ಮ ಹತ್ತಿರ ಸುಳಿಯವು. ವ್ಯಾಯಾಮ ಅತಿಯಾಗದೆ ನಿಯಮಿತವಾಗಿರಲಿ. ನಡೆಯುವುದು, ಓದುವುದು, ಸೈಕಲ್ ತುಳಿಯುವುದು ಇಂತಹವನ್ನು ದಿನದಲ್ಲಿ ಅರ್ಧ ಗಂಟೆಗಳ ಕಾಲ ಮಾಡಬೇಕು. ಹೆಚ್ಚು ವ್ಯಾಯಾಮದಿಂದ ನೆಗಡಿಗೆ ಆಹ್ವಾನ ಸಿಗುತ್ತದೆ. (ಹಣೆಯಲ್ಲಿ ಬೆವರು ಮೂಡಿದ ನಂತರ ವ್ಯಾಯಾಮ ನಿಲ್ಲಿಸಬಹುದು)

ನೆಗಡಿಫ್ಲೂ

ನೆಗಡಿ ಯಾವಾಗ ಫ್ಲೂಗೆ ತಿರುಗುತ್ತದೆ?

ಹಾಗೆ ಆಗುವುದೇ ಇಲ್ಲ ವಾಸ್ತವವೆಂದರೆ ನೆಗಡಿ ಫ್ಲೂ ಎರಡು ಬೇರೆ ಬೇರೆ ಸೋಂಕುಗಳು ಈ ಕೆಳಗೆ ಅವುಗಳ ವ್ಯತ್ಯಾಸವನ್ನು ಕೊಟ್ಟಿದೆ.

ನೆಗಡಿ:

•ವರ್ಷದಲ್ಲಿ ಯಾವಾಗಲಾದರೂ ಬರಬಹುದು.

•ಕಣ್ಣು, ಕಿವಿ, ಮೂಗು, ಗಂಟಲು, ಗಳಿಗಂಟುತ್ತದೆ.

•ಚಿನ್ಹೆಗಳು: ಕೆಮ್ಮು, ಸೀನು, ಶ್ಲೇಷ್ಮ, ಗಂಟಲು ನೋವು.

•ಒಂದು ವಾರದವರೆಗೆ ಇರಬಹುದು ಶರೀರದ ಜೀವಕೋಶಗಳಿಗೆ ಶಾಶ್ವತ ಹಾನಿ ಆಗುವುದಿಲ್ಲ. ಗಂಭೀರವಾಗಬಹುದು ಆದರೆ ಭಾರಿ ಪ್ರಮಾಣದಲ್ಲಿ ಆಗದು.

ಫ್ಲೂ:

•ಮಳೆಗಾಲ ಚಳಿಗಾಲದಲ್ಲಿ ಬರುತ್ತದೆ ಶ್ವಾಸನಾಳ(Bronchial Tubes. ಶ್ವಾಸಕೋಶಗಳಿಗಂಟುತ್ತದೆ.

•ಚಿನ್ಹೆಗಳು: ಮೈ ಕೈ ನೋವು ನರಳುವುದು ಬಹಳ ವೇಗದಿಂದ ಹೆಚ್ಚುತ್ತದೆ.

•ಎರಡು ವಾರಗಳ ಕಾಲ ಇರುತ್ತದೆ ಬ್ಲೂ ವೈರಸ್ ಗಳು ಜೀವಕೋಶಗಳನ್ನು ದ್ವಂಸ ಮಾಡುತ್ತವೆ. ಅಪಾಯ ಉಂಟಾಗುವ ಸಾಧ್ಯತೆಗಳು ಅಧಿಕವಾಗಿರುತ್ತವೆ.

ಮಾನಸಿಕ ಒತ್ತಡ:

 ನೀವು ಗಮನಿಸಿರಬಹುದು ಪರೀಕ್ಷೆಗೆ ತಯಾರಾಗುತ್ತಿರುವಾಗ ಯಾವುದಾದರೂ ಮಾನಸಿಕ ಹಿಂಸೆ ಅಥವಾ ಕಷ್ಟದಲ್ಲಿ ಇರುವಾಗ ನಗಡಿಯಾಗುವ ಸಾಧ್ಯತೆ ಹೆಚ್ಚು. ಮಾನಸಿಕ ಒತ್ತಡ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೊಂದಿಸುವುದು ಇದಕ್ಕೆ ಕಾರಣ.

ಧ್ಯಾನ ಹಿತಕರವಾದ ಸಂಗೀತ ಆಲಿಸುವುದು ಯೋಗ ಮಾಡುವುದು ಮುಂತಾದವುಗಳಿಂದ ಮನಸ್ಸು ಪ್ರಶಾಂತವಾಗಿ ಮನದ ವ್ಯಾಕುಲತೆ ಕಡಿಮೆಯಾಗುತ್ತದೆ.

ಹಾಸ್ಯ ಸಿನಿಮಾಗಳು:

 ಹಾಸ್ಯ ಪ್ರಧಾನ ಸಿನಿಮಾ ನೋಡುವುದು ಹಾಸ್ಯ ಉತ್ಸವಗಳಲ್ಲಿ ಪಾಲ್ಗೊಳ್ಳುವುದು ಮಾಡುವುದರಿಂದ ರೋಗ ನಿರೋಧಕ ಶಕ್ತಿಗೆ ಬೇಕಾದ Immunoglobulin A(Ig A) ಉತ್ಪತ್ತಿ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ ಆದುದರಿಂದ ಸಾಧ್ಯವಾದಾಗಿಲ್ಲ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಳ್ಳೆಯದು ರೋಗನಿರೋಧಕ ಶಕ್ತಿ ಬಲಗೊಂಡು ನೆಗಡಿ ಅಂತ ಸೋಂಕಿನಿಂದ ದೂರ ವಿರುಸುತ್ತದೆ.

ಸಾಕಷ್ಟು ನೀರು ಕುಡಿಯುವುದು:

ನೀರು ಕಾಫಿ ಟೀ ಹಣ್ಣಿನ ರಸ ಇತ್ಯಾದಿಗಳ ಸಾಕಷ್ಟು ಸೇವನೆಯಿಂದ ನೆಗಡಿಯಾಗುವ ಸಂಭವ ಅತಿ ಕಡಿಮೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಡಾಕ್ಟರನ್ನು ಯಾವಾಗ ನೋಡಬೇಕು?

ಈ ಕೆಳಗಿನವುಗಳಲ್ಲಿ ಒಂದಕ್ಕೂ ಹೆಚ್ಚು ಚಿಹ್ನೆಗಳು ಕಾಣಿಸಿಕೊಂಡಾಗ ಡಾ.ಅನ್ನು ಸಂಪರ್ಕಿಸುವುದು ಸೂಕ್ತ ಪ್ರಾಯಶಃ ಅದು ಸಾಮಾನ್ಯವಾಗಿ ನೆಗಡಿಯಾಗಿರದೆ ಬೇರೇನು ಗಂಭೀರ ಕಾಯಿಲೆ ಇರಬಹುದು.

• ಜ್ವರ 101 ಡಿಗ್ರಿಗಿಂತ ಹೆಚ್ಚಿಗೆ ಹೆಚ್ಚು ಮೂರು ದಿನಗಳ ನಂತರವೂ ಮುಂದುವರೆದರೆ.

• 103 ಡಿಗ್ರಿಗಿಂತ ಜ್ವರ ಜಾಸ್ತಿ ಇದ್ದರೆ ತಕ್ಷಣವೇ ಸಂಪರ್ಕಿಸಿ.

• ಚಿಕ್ಕ ಮಕ್ಕಳಿಗೆ ಜ್ವರ ಅತಿ ಹೆಚ್ಚಾಗಿದ್ದರೆ 24 ಗಂಟೆ ಒಳಗೆ ಡಾಕ್ಟರನ್ನು ಕಾಣಬೇಕು.

• ಕಿವಿ ನೋವು ಟ್ಯಾನ್ಸಿಲ್ ಊತ, ಸೈನಸ್ ನೋವು, ಎದೆ ನೋವು ಗಳಿದ್ದರೆ.

• ಶ್ಲೇಷ್ಮ ಹೆಚ್ಚಾಗಿ ಹಸಿರು ಕೆಂಪು ಬಣ್ಣದಗಿದ್ದರೆ.

• ಉಗುಳು ನುಂಗುವುದು ಕಷ್ಟವಾದರೆ

• ಉಸಿರಾಡಲು ತಂದಿರೋ ಯಾದರೆ ಮೇಲಿನ ಎಲ್ಲ ಸಂದರ್ಭಗಳಲ್ಲೂ ಡಾಕ್ಟರನ್ನು ತಪ್ಪದೇ ಭೇಟಿಯಾಗಿ.

ಗಂಟಲೊಳಗೆ ನೆಗಡಿ ವೈರಸ್ ಗಳು ಬಿಡುಬಿಟ್ಟಿದ್ದರೆ, ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅವು ಗಂಟಲಿನಿಂದ ಹೊಟ್ಟೆಗೆ ಗಂಟಲ ನಾಳದ ಮೂಲಕ ಫ್ರೆಶ್ ಆಗಿ ಹೋಗುತ್ತದೆ. ಜಠರದ ಶಕ್ತಿಯುತ ರಾಸಾಯನಗಳು ವೈರಸ್ ಅನ್ನು ನಾಶಪಡಿಸುತ್ತವೆ.

ಕಿಟಕಿಬಾಗಿಲುಗಳನ್ನು ತೆರೆದಿಡಿ:

ನೆಗಡಿ ಇರುವ ವ್ಯಕ್ತಿ ಕೆಮ್ಮಿದಾಗ ಸೀನಿದಾಗ ವಿಲಿಯನ್ಗಟ್ಟಲೆ ವೈರಸ್ ಗಳು ಗಾಳಿಯಲ್ಲಿ ತುಂತುರು ಹನಿಗಳ ರೂಪದಲ್ಲಿ ಹರಡುತ್ತವೆ. ಆದ್ದರಿಂದ ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕೈಯನ್ನು ಕರವಸ್ತ್ರವನ್ನು ಅಡ್ಡ ಹಿಡಿದುಕೊಂಡು ಕೆಮ್ಮುವುದು ಸೀನುವುದು ಮಾಡಬೇಕು.

ನೆಗಡಿಗೆ ತುತ್ತಾದ ವ್ಯಕ್ತಿಗಳು ಮನೆಯಲ್ಲಿದ್ದಾಗ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದರೆ ಕೆಮ್ಮಿದಾಗ ಸೀಮಿತಾಗ ನೆಗಡಿ ವೈರಸ್ ಗಳು ಮನೆ ತುಂಬಾ ಹರಡಿ ಹೋಗಲು ದಾರಿ ಇಲ್ಲದೆ ಮನೆಯಲ್ಲಿರುವವರಿಗೆ ಸುಲಭವಾಗಿ ಸೋಂಕುವ ಇರುತ್ತದೆ

ಆದ್ದರಿಂದ ನೆಗಡಿ ಪೀಡಿತರೂ ಮನೆಯಲ್ಲಿದ್ದರೆ ಗಾಳಿ ಒಳಬರುವಂತೆ ಮತ್ತು ಕಲುಷಿತ ಗಾಳಿ ಊರ ಹೋಗುವಂತೆ ಕಿಟಕಿಗಳನ್ನು ತೆರೆದಿರುವುದು ಮಕ್ಕಳ ಶಾಲೆಯನ್ನು ಈ ಕ್ರಮ ಅನುಸರಿಸುವುದು ಅವಶ್ಯಕ.

ಶೀತ ವಾತಾವರಣ:

ನೆಗಡಿಯ ವೈರಸ್ ಗಳು ಬೆಚ್ಚಗಿರುವ ವಾತಾವರಣದಲ್ಲಿ ಶೀಘ್ರದವೃತ್ತಿಸುತ್ತವೆ ಸೀತ ವಾತಾವರಣದಲ್ಲಿ ಜಾಸ್ತಿ ವೃತ್ತಿಯಾಗುವುದು ಚಳಿಗಾಲದಲ್ಲಿ ಬಾಗಿಲು ಕಿಟಕಿ ಭದ್ರ ಪಡಿಸುವುದರಿಂದ ಮನೆಯಲ್ಲಿ ಬೆಚ್ಚಗಿರುತ್ತದೆ ಆದುದರಿಂದ ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದಿಡುವುದು ಒಳ್ಳೆಯದು ಆದರೆ ಬಾತ್ರೂಮ್ ಸ್ವಚ್ಛವಾಗಿರಬೇಕು.

ಆಗಾಗ ಕೈ ತೊಳೆದುಕೊಳ್ಳಿ :

ನೆಗಡಿ ಇದ್ದಾಗ ಅವಾಗ ಮೂಗನ್ನು ಉಳಿಸಿಕೊಳ್ಳಬೇಕಾಗುತ್ತದೆ ಆಗ ವೈರಸ್ ಗಳು ಕೈಗೆ ಅಂಟಿಕೊಳ್ಳುತ್ತದೆ ಅದೇ ಕೈಗಳಿಂದ ಬೇರೆಯವರನ್ನು ಮುಟ್ಟಿದಾಗ ಅವರಿಗೂ ನೆಗಡಿ ಆಗಬಹುದು ನೆಗಡಿ ಇರುವವರು ಹಲವಾರು ಬಾರಿ ನೀರಿನಿಂದ ಕೈಯನ್ನು ಸ್ವಚ್ಛಗೊಳಿಸಿಕೊಳ್ಳುವುದು ಅತ್ಯವಶ್ಯಕ.

ವಿಶ್ರಾಂತಿ:

ನೆಗಡಿ ಆದಾಗ ಹುಷಾರಿಲ್ಲದೆಂದು ಆಫೀಸು ಕಾಲೇಜಿಗೆ ಹೋಗದೆ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಾರೆ ನೆಗಡಿ ಪೀಡಿತರು ಹೀಗೆ ಮಾಡುವುದೇ ಸೂಕ್ತ ಇದರಿಂದ ಬೇರೆಯವರು ನೆಗಡಿ ಸೋಂಕಿಗೆ ಗುರಿಯಾಗದೆ ಸುರಕ್ಷಿತವಾಗಿರುತ್ತಾರೆ.

ನೆಗಡಿಯನ್ನು ಹತೋಟಿಯಲ್ಲಿಡುವ ವಿಧಾನಗಳು:

ವಿಟಮಿನ್ ಸಿ

ವಿಟಮಿನ್ ಸಿ ಪೆನ್ಸಿಲಿನ್ ಅಂತೆ ಆಂಟಿಬಯೋಟೆಕ್ ನೆಗಡಿಯನ್ನು ದೂರ ಮಾಡುತ್ತದೆ ಎನ್ನುವುದು ಸುಳ್ಳು ಬ್ಯಾಕ್ಟೀರಿಯಗಳ ಮೂಲಕ ಉಂಟಾದ ಸೋಂಕನ್ನು ಆಂಟಿಬಯೋಟಿಕ್ಸ್ ಗುಣಪಡಿಸುತ್ತದೆ ಹೊರತು ವೈರಸ್ ನಿಂದ ಬರುವ ನೆಗಡಿ ಅಂತ ಬೇನೆನಲ್ಲ.

ನಮ್ಮ ಶರೀರದಲ್ಲಿರುವ ತ್ಯಾಜ್ಯ ವಸ್ತುಗಳನ್ನು ವೈರಸ್ ಟ್ರಾಷ್ ಅನ್ನು ಕೂಡ ಹೊರಗೆ ಸೇರಲು ವಿಟಮಿನ್ ಸಿ ನಂತೆ ಕೆಲಸ ಮಾಡುತ್ತದೆ ನೆಗಡಿಯನ್ನು ಸಂಪೂರ್ಣ ಗುಣಪಡಿಸಲಾಗದಿದ್ದರೂ ಒಂದು ವಾರ ಇರಬಹುದು ಅದನ್ನು ಎರಡು ಮೂರು ದಿನಗಳಲ್ಲಿ ಕಡಿಮೆಯಾಗುವಂತೆ ಮಾಡಬಲ್ಲದು ಎಂದು ತಜ್ಞರು ಹೇಳುತ್ತಾರೆ.

ಕೆಮ್ಮು ಮತ್ತು ಸೀನುವುದನ್ನು ವಿಟಮಿನ್ ಸಿ ಕಡಿಮೆ ಮಾಡುತ್ತದೆ. ಇದಕ್ಕಾಗಿ ನೀವು ವಿಟಮಿನ್ ಸಿ ಮಾತ್ರೆಗಳನ್ನು ನುಂಗುವುದಕ್ಕಿಂತ ಸ್ವಾಭಾವಿಕವಾಗಿ ದೊರಕುವ ದ್ರಾಕ್ಷಿ ಮತ್ತು ಕಿತ್ತಳೆ ಹಣ್ಣಿನ ರಸವನ್ನು ಸೇವಿಸುವುದು ಉತ್ತಮ.

ಆಹಾರ:

ನಗಡಿಯಾದಾಗ ಗೋಪಿನ ಅಂಶವಿರುವ ಆಹಾರ ಪದಾರ್ಥಗಳು ಮಾಂಸ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿ.

ಚಿಕನ್ ಸೂಪ್:

 ನೆಗಡಿ ಆದವರಿಗೆ ಮೆಣಸು ತಿನ್ನುವಂತೆ ಮನೆಯ ಹಿರಿಯರು ಸಲಹೆ ಕೊಡುತ್ತಾರೆ ವೈದ್ಯರದು ಇದೆ ಅಭಿಪ್ರಾಯ.

 ಮಾಂಸಹಾರಿಗಳು ಒಂದು ಕಪ್ ಬಿಸಿಬಿಸಿ ಚಿಕನ್ ಸೂಪ್ ಸೇವಿಸಬೇಕು ಇದು ನಿಮ್ಮ ಮೂಗಿನ ಮುಚ್ಚಳವನ್ನು ಸಡಿಲಿಸಿ ಮೂಗಿನಿಂದ ನೀರು ಸುರಿಯುವಂತೆ ಮಾಡುತ್ತದೆ ಬಹುಶಹ ಇದು ಮೆಣಸಿನ ಪ್ರಭಾವದಿಂದ ಇರಬೇಕು ಅಥವಾ ಸೂಪ್ನ ರುಚಿ ಇರಬಹುದು ಮೂಗಿನ ನೀರನ್ನು ಹೀಗೆ ತೆಗೆದುಹಾಕುತ್ತಿದ್ದಾರೆ ಶರೀರದಲ್ಲಿದ್ದ ವೈರಸ್ ರೋಗಾಣುಗಳ ಸಂಖ್ಯೆ ಕಡಿಮೆ ಮಾಡಿದಂತೆಯೇ.

ಸಿಗರೇಟ್ ಸೇದುವುದನ್ನು ಬಿಡಿ:

ಸಿಗರೇಟು ಬಿಡಿ ಇತ್ಯಾದಿಗಳ ಸೇವನೆ ನಿಲ್ಲಿಸಿ ಇಲ್ಲದಿದ್ದರೆ ಗಂಟಲು ನೋಯುತ್ತದೆ ನೆಗಡಿ ಇದನ್ನು ಹೆಚ್ಚಿಸುತ್ತದೆ ಮೂಗಿನಲ್ಲಿರುವ ಸೂಕ್ಷ್ಮ ರೂಮಗಳ ತಡೆ ಮೂಗಿನಲ್ಲಿ ಪ್ರವೇಶಿಸುವ ಬ್ಯಾಕ್ಟೀರಿಯಗಳನ್ನು ಗಂಟಲಿನ ಮೂಲಕ ಶ್ವಾಸಕೋಶಗಳ ತಲುಪುವ ಹಾಗೆ ತಡೆಯುತ್ತದೆ ಸಿಗರೇಟ್ ಸೇವನೆಯಿಂದ ಈ ಕ್ರಿಯೆಗೆ ತೊಂದರೆಯಾಗಿ ಅದು ನಿಷ್ಕ್ರಿಯ ವಾಗುತ್ತದೆ ಆದ್ದರಿಂದ ಕನಿಷ್ಠ ನೆಗಡಿ ಹೋಗುವ ತನಕವಾದರೂ ಸಿಗರೇಟು ಬಿಡಿ ಸೇದದೇ ಹೋದರೆ ಇರುವುದೇ ಉತ್ತಮ.

ಉಪ್ಪು ನೀರಿನ ಗಂಟಲು ಮುಕ್ಕಳಿಸುವುದು:

 ನೆಗಡಿ ಇದ್ದಾಗ ಬೆಳಿಗ್ಗೆ ಮಧ್ಯಾಹ್ನ ಸಾಯಂಕಾಲ ಉಪ್ಪು ನೀರಿನಿಂದ ಗಂಟಲನ್ನು ಮುಕ್ಕಳಿಸುವುದು ಒಳ್ಳೆಯದು ಇದರಿಂದ ಗಂಟಲಿಗೆ ಹಿತವಾಗುತ್ತದೆ ಒಂದು ಗ್ಲಾಸ್ ನೀರಿಗೆ ಒಂದು ಟೀ ಸ್ಪೂನ್ ಉಪ್ಪು ಸಾಕು.

ಬ್ರಾಂದಿ ಔಷಧಿ :

ರಾತ್ರಿ ಮಲಗುವಾಗ ಮೂರು ಟೀ ಸ್ಪೂನ್ ಗ್ರಂಥಿಯನ್ನು ಬಿಸಿ ನೀರಿಗೆ ಸೇರಿಸಿ ಕುಡಿದರೆ ನೆಗಡಿ ಎಂದರೆ ಅರ್ಧ ಗ್ಲಾಸ್ ವೈನ್ ನಾದರೂ ಸಾಕು.

ಹಬೆ ಚಿಕಿತ್ಸೆ :

ಇದು ನಮ್ಮ ಪೂರ್ವಜರು ಅನುಸರಿಸುವ ಪದ್ಧತಿ ಪಾತ್ರೆಯಲ್ಲಿ ಕುದಿಯುವ ನೀರಿಗೆ ಸ್ವಲ್ಪ ಅಮೃತಂಜನ ಹಾಕಿ ದಪ್ಪ ಬಟ್ಟೆಯಿಂದ ಪಾತ್ರೆ ಸಮೇತ ಓದುಕೊಂಡು ಅದೇ ಹೆಣ್ಣು ಅಗ್ರಣಿಸಿದರೆ ಮೂಗು ಕಟ್ಟುವುದು ಕೆಮ್ಮು ಕಡಿಮೆಯಾಗುತ್ತದೆ.

ಮೂಗಿಗೆ ವ್ಯಾಸಲಿನ್:

 ಪದೇ ಪದೇ ಮೂಗನ್ನು ಒರೆಸಿಕೊಳ್ಳುವುದರಿಂದ ಮೂಗಿನ ಕೆಲಭಾಗ ಕೆಂಪಾಗಿ ಉರಿಯಲು ಪ್ರಾರಂಭಿಸುತ್ತದೆ ಪೆಟ್ರೋಲಿಯಂ ಜೆಲ್ಲಿ ವ್ಯಾಸಲಿನ್ ಮುಂತಾದ ಲೇಪನದಿಂದ ಉರಿ ಕಮ್ಮಿಯಾಗುತ್ತದೆ.

ಹಿಂದಿನ ಲೇಖನಹಾಸನ: ಮದ್ಯದ ಚಟ ಬಿಡಲು ಪುನರ್ವಸತಿ ಕೇಂದ್ರಕ್ಕೆ ಸೇರಿದ್ದ ವ್ಯಕ್ತಿಯ  ಕೊಲೆ
ಮುಂದಿನ ಲೇಖನಹನೂರು: ಅತಿಯಾದ ವೇಗಕ್ಕೆ ಯುವಕ ಬಲಿ