ಮೈಸೂರು: 2024 ರ ನಾಡಹಬ್ಬ ದಸರಾ ಸಂದರ್ಭ ಮೈಸೂರು ನಗರದಲ್ಲಿ ಹೆಚ್ಚುವ ವಾಹನಗಳ ಸಂಚಾರದ ಹಿನ್ನೆಲೆ ನಗರದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ನಗರದ ಹೊರಭಾಗದಿಂದ ಬಸ್ ನಿಲ್ದಾಣಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ಬಸ್‌ಗಳು ಮತ್ತು ನಗರ ವ್ಯಪ್ತಿಯಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‌ಗಳು ಮೈಸೂರು ನಗರದ ಹೃದಯ ಭಾಗದಲ್ಲಿರುವ ಅರಮನೆ ಸುತ್ತಲಿನ ರಸ್ತೆಯಲ್ಲೇ ಸಂಚರಿಸಲಿದ್ದು, ಇದರಿಂದಾಗಿ ಸದರಿ ರಸ್ತೆಗಳಲ್ಲಿ ವಾಹನ ಸಂಚಾರಗಳ ದಟ್ಟಣೆ ಅಧಿಕವಾಗಿ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೆ.ಎಸ್.ಆರ್.ಟಿ.ಸಿ ಮತ್ತು ನಗರ ಸಾರಿಗೆ ಬಸ್‌ಗಳು ಕೆ. ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಹಾಗೂ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ತೆರಳಲು ಪ್ರತ್ಯೇಕ ಮಾರ್ಗ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮೈಸೂರು ನಗರದ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಭಾರತೀಯ ಮೋಟಾರ್ ವಾಹನ ಕಾಯ್ದೆ 1988 ಕಲಂ 115 ಹಾಗೂ ಸೆಕ್ಷನ್ (3) ಆಫ್ ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಕಾಯ್ದೆ 1960ರಲ್ಲಿ ದತ್ತವಾಗಿರುವ ಕೆಳಕಂಡ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
1 ನೇ ಹಂತದಲ್ಲಿ ಮಾಡಲಾಗಿರುವ ಮಾರ್ಪಡುಗಳು
ಭಾಗ-1
ಅಕ್ಟೋಬರ್ 3 ರಿಂದ ಅಕ್ಟೋಬರ್ 10 ರವರೆಗೆ
(ಪ್ರತಿದಿನ ಸಂಜೆ 4 ಗಂಟೆಯಿoದ ರಾತ್ರಿ 11 ಗಂಟೆಯವರೆಗೆ)
1. ಮೈಸೂರು-ಬೆಂಗಳೂರು ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಬಸ್ ಗಳ ಮಾರ್ಗ:-
ಆಗಮನ :- ಬೆಂಗಳೂರು ರಸ್ತೆ- ನಾಡಭ್ರಭು ಕೆಂಪೇಗೌಡ ವೃತ್ತ-ಎಡ ತಿರುವು- ರಿಂಗ್ ರಸ್ತೆ ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ (ಸಾತಗಳ್ಳಿ ಬಸ್ ಡಿಪೋ)- ಮಹದೇವಪುರ ರಸ್ತೆ ರಸ್ತೆ- ನೆಕ್ಷಸ್ ಮಾಲ್ ಜಂಕ್ಷನ್- ಕಾಳಿಕಾಂಬ ದೇವಸ್ಥಾನ ರಸ್ತೆ ಜಂಕ್ಷನ್- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ನವಾಬ್ ಹೈದರಾಲಿ ಖಾನ್ ವೃತ್ತ ( ಫೈವ್ ಲೈಟ್ ಸರ್ಕಲ್) – ಬಿ.ಎಸ್ ರಸ್ತೆ- ಕೆ. ಎಸ್.ಆರ್. ಟಿ. ಸಿ ಬಸ್ ನಿಲ್ದಾಣ
ನಿರ್ಗಮನ :- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಡಾ।। ಬಿ.ಆರ್.ಅಂಬೇಡ್ಕರ್ ವೃತ್ತ (ಎಫ್.ಟಿ.ಎಸ್)- ಡಾ।। ರಾಜಕುಮಾರ್ ವೃತ್ತ (ಫೌಂಟೆನ್ ಸರ್ಕಲ್)- ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) – ಬನ್ನಿಮಂಟಪ ರಸ್ತೆ- ನಂದಿ ಬಸಪ್ಪ ಗೋರಿ ಜಂಕ್ಷನ್- ಟೋಲ್ ಗೇಟ್- ನಾಡಪ್ರಭು ಕೆಂಪೇಗೌಡ ವೃತ್ತ- ಬೆಂಗಳೂರು ರಸ್ತೆ ಮೂಲಕ ಮುಂದೆ ಸಾಗುವುದು.
2. ಮಡಿಕೇರಿ, ಹಾಸನ ಕಡೆಯಿಂದ ಹುಣಸೂರು ರಸ್ತೆ ಮೂಲಕ ಮೈಸೂರು ನಗರಕ್ಕೆ ಆಗಮಿಸುವ & ನಿರ್ಗಮಿಸುವ ಬಸ್‌ಗಳ ಮಾರ್ಗ:-
ಆಗಮನ:- ಹುಣಸೂರು ರಸ್ತೆ- ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)- ದಾಸಪ್ಪ ವೃತ್ತ- ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ) -ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗೌಂಡ್)- ಶೇಷಾದ್ರಿ ಅಯ್ಯರ್ ರಸ್ತೆ-ಸುಭಾಷ್ ಚಂದ್ರ ಬೋಸ್ ವೃತ್ತ(ಆರ್.ಎಂ.ಸಿ) ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ಸರ್ಕಲ್)- ನೆಲ್ಸನ್ ಮಂಡೇಲಾ ರಸ್ತೆ – ಟಿ.ಎನ್.ನರಸಿಂಹಮೂರ್ತಿ. ವೃತ್ತ (ಎಲ್.ಐ.ಸಿ ವೃತ್ತ)- ಟಿಪ್ಪು ವೃತ್ತ ಡಾ ರಾಜಕುಮಾರ್ ವೃತ್ತ (ಫೌಂಟೆನ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ನವಾಬ್ ಹೈದರಾಲಿ ಖಾನ್ ವೃತ್ತ(ಫೈವ್‌ಲೈಟ್ ವೃತ್ತ) ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.
ನಿರ್ಗಮನ:- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ – ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್‌ಲೈಟ್ ಸರ್ಕಲ್)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಎಫ್.ಟಿ.ಎಸ್)- ಡಾ. ರಾಜಕುಮಾರ್ ವೃತ್ತ (ಫೌಂಟೆನ್ ಸರ್ಕಲ್)- ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) – ನೆಲ್ಸನ್ ಮಂಡೇಲಾ ರಸ್ತೆ – ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ಸರ್ಕಲ್)- ಸುಭಾಷ್‌ಚಂದ್ರ ಬೋಸ್ ವೃತ್ತ(ಆರ್.ಎಂ.ಸಿ)- ಶೇಷಾದ್ರಿ ಅಯ್ಯರ್ ರಸ್ತೆ- ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗೌಂಡ್)- ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ)- ದಾಸಪ್ಪ ವೃತ್ತ- ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)- ಹುಣಸೂರು ರಸ್ತೆ ಮೂಲಕ ಮುಂದೆ ಸಾಗುವುದು.
3. ಹೆಚ್.ಡಿ. ಕೋಟೆ ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಬಸ್‌ಗಳ ಮಾರ್ಗ:-
ಆಗಮನ:- ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್ ಮಾನಂದವಾಡಿ ರಸ್ತೆ- ಶ್ರೀನಿವಾಸ ವೃತ್ತ- ಜೆಎಲ್‌ಬಿ ರಸ್ತೆ- ಕಂಸಾಳೆ ಮಹದೇವಯ್ಯ ವೃತ್ತ- ಶ್ರೀ ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ) ರಾಜಹಂಸ ಜಂಕ್ಷನ್- ಟ್ರಕ್ ಟರ್ಮಿನಲ್- ಸೋಮಸುಂದರo ವೃತ್ತ (ಎಂ.ಆರ್.ಸಿ)- ಮಹಾರಾಣ ಪ್ರತಾಪ ಸಿಂಹ ವೃತ್ತ- ಬ್ಯಾಂಕ್ ಬಂಡ್ ರಸ್ತೆ- ಸರ್ಕಸ್ ಮೈದಾನ ಜಂಕ್ಷನ್- ಲೋಕರಂಜನ್ ರಸ್ತೆ- ಎಸ್.ಅಂಗಣ್ಣ ವೃತ್ತ (ಚಿರಾಗ್)- ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಬಿ.ಎನ್.ರಸ್ತೆ – ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.
ನಿರ್ಗಮನ:- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ – ನವಾಬ್ ಹೈದರಾಲಿ ಖಾನ್ ವೃತ್ತ(ಫೈವ್ ಲೈಟ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಕಾಳಿಕಾಂಭ ದೇವಸ್ಥಾನದ ಜಂಕ್ಷನ್- ಹರಿಕೃಷ್ಣ ವೃತ್ತ (ಡಿ.ಪಿ.ಓ ವೃತ್ತ)- ಶಾಂತವೇರಿ ಗೋಪಾಲಗೌಡ ವೃತ್ತ (ನಜರ್‌ಬಾದ್)- ಟ್ಯಾಂಕ್ ಬಂಡ್ ರಸ್ತೆ- ಮಹಾರಾಣ ಪ್ರತಾಪ ಸಿಂಹ ವೃತ್ತ- ಮಹಾರಾಣ ಪ್ರತಾಪ ಸಿಂಹ ರಸ್ತೆ- ಸಿ.ಎ.ಆರ್ ಕೇಂದ್ರ ಸ್ಥಾನ “ವೈ” ಜಂಕ್ಷನ್- ಚಾಮಪ್ಪಾಜಿ ರಸ್ತೆ (ರೇಸ್ ಕೋರ್ಸ್ ಹಿಂಭಾಗದ ರಸ್ತೆ)- ಟ್ರಕ್ ಟರ್ಮಿನಲ್ ರಸ್ತೆ ಜಂಕ್ಷನ್- ಸತ್ಯ ಹರಿಶ್ಚಂದ್ರ ರಸ್ತೆ- ಶ್ರೀ ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ)- ಎಡ ತಿರುವು- ನಂಜನಗೂಡು ರಸ್ತೆ- ಜೆ.ಪಿ.ನಗರ ಅಂಕ್ ರಸ್ತೆ- ಮಾನಂದವಾಡಿ ರಸ್ತೆ ಮೂಲಕ ಮುಂದೆ ಸಾಗುವುದು.
4. ನಂಜನಗೂಡು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕಡೆಯಿಂದ ನಂಜನಗೂಡು ರಸ್ತೆ ಮೂಲಕ ನಗರಕ್ಕೆ ಆಗಮಿಸುವ & ನಿರ್ಗಮಿಸುವ ಬಸ್‌ಗಳ ಮಾರ್ಗ:-
ಆಗಮನ:- ನಂಜನಗೂಡು ರಿಂಗ್ ರಸ್ತೆ ಜಂಕ್ಷನ್- ಶ್ರೀ ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ)- ರಾಜಹಂಸ ಜಂಕ್ಷನ್- ಟ್ರಕ್ ಟರ್ಮಿನಲ್- ಸೋಮಸುಂದರo ವೃತ್ತ (ಎಂ.ಆರ್.ಸಿ)- ಮಹಾರಾಣ ಪ್ರತಾಪ ಸಿಂಹ ವೃತ್ತ- ಬ್ಯಾಂಕ್ ಬಂಡ್ ರಸ್ತೆ- ಸರ್ಕಸ್ ಮೈದಾನ ಜಂಕ್ಷನ್- ಲೋಕರಂಜನ್ ರಸ್ತೆ- ಎಸ್.ಅಂಗಣ್ಣ ವೃತ್ತ (ಚಿರಾಗ್)- ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.
ನಿರ್ಗಮನ:- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ- ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಕಾಳಿಕಾಂಭ ದೇವಸ್ಥಾನದ ಜಂಕ್ಷನ್- ಹರಿಕೃಷ್ಣ ವೃತ್ತ (ಡಿ.ಪಿ.ಓ ವೃತ್ತ)- ಶಾಂತವೇರಿ ಗೋಪಾಲಗೌಡ ವೃತ್ತ (ನಜರ್‌ಬಾದ್)- ಬ್ಯಾಂಕ್ ಬಂಡ್ ರಸ್ತೆ- ಮಹಾರಾಣ ಪ್ರತಾಪ ಸಿಂಹ ವೃತ್ತ- ಮಹಾರಾಣ ಪ್ರತಾಪ ಸಿಂಹ ರಸ್ತೆ- ಸಿ.ಎ.ಆರ್ ಕೇಂದ್ರ ಸ್ಥಾನ “ವೈ” ಜಂಕ್ಷನ್- ಚಾಮಪ್ಪಾಜಿ ರಸ್ತೆ (ರೇಸ್ ಕೋರ್ಸ್ ಹಿಂಭಾಗದ ರಸ್ತೆ) – ಟ್ರಕ್ ಟರ್ಮಿನಲ್ ರಸ್ತೆ ಜಂಕ್ಷನ್- ಸತ್ಯ ಹರಿಶ್ಚಂದ್ರ ರಸ್ತೆ- ಶ್ರೀ ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ)- ನಂಜನಗೂಡು ರಸ್ತೆ ಮೂಲಕ ಮುಂದೆ ಸಾಗುವುದು.
5. ಟಿ.ನರಸೀಪುರ ರಸ್ತೆ ಕಡೆಯಿಂದ ನಗರಕ್ಕೆ ಅಗಮಿಸುವ ಬಸ್‌ಗಳ ಮಾರ್ಗ:-
ಆಗಮನ:- ಟಿ.ನರಸೀಪುರ ರಸ್ತೆ “ಟಿ” ಜಂಕ್ಷನ್- ಲಲಿತಮಹಲ್ ರಸ್ತೆ- ಸಂಗೊಳ್ಳಿ ರಾಯಣ್ಣ ವೃತ್ತ- ಮಹಾರಾಣ ಪ್ರತಾಪ ಸಿಂಹ ವೃತ್ತ- ಟ್ಯಾಂಕ್ ಬಂಡ್ ರಸ್ತೆ- ಸರ್ಕಸ್ ಮೈದಾನ ಜಂಕ್ಷನ್- ಲೋಕರಂಜನ್ ರಸ್ತೆ- ಎಸ್.ಅಂಗಣ್ಣ ವೃತ್ತ (ಚಿರಾಗ್)- ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ) ಬಲ ತಿರುವು- ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.
ನಿರ್ಗಮನ:- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ- ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್)- ಸರ್ಕಾರಿ ಭವನದ ಉತ್ತರದ್ವಾರ- ಕಾಳಿಕಾಂಭ ದೇವಸ್ಥಾನದ ಜಂಕ್ಷನ್- ಹರಿಕೃಷ್ಣ ವೃತ್ತ (ಡಿ.ಪಿ.ಓ ವೃತ್ತ)- ಶಾಂತವೇರಿ ಗೋಪಾಲಗೌಡ ವೃತ್ತ (ನಜರ್‌ಬಾದ್ ವೃತ್ತ)- ಮಲೆ ಮಹದೇಶ್ವರ ರಸ್ತೆ- ಡೈರಿ ಜಂಕ್ಷನ್ ಆರ್.ಮಹದೇವಪ್ಪ ವೃತ್ತ (ಟೆರಿಷಿಯನ್ ಕಾಲೇಜು) ದಿಂದ ಬಲ ತಿರುವು ಪಡೆದು ಮುಂದೆ ಸಾಗುವುದು.
6. ಬನ್ನೂರು ಮತ್ತು ಮಳವಳ್ಳಿ ರಸ್ತೆ ಕಡೆಯಿಂದ ನಗರಕ್ಕೆ ಆಗಮಿಸುವ ಬಸ್‌ಗಳ ಮಾರ್ಗ:-
ಆಗಮನ:- ಬನ್ನೂರು ಮತ್ತು ಮಳವಳ್ಳಿ ಮೂಲಕ ಆಗಮಿಸುವ ಬಸ್ಸುಗಳು ಆರ್.ಮಹದೇವಪ್ಪ ವೃತ್ತ (ಟೆರಿಷಿಯನ್ ಕಾಲೇಜು)- ಬಲ ತಿರುವು- ರಾಜಕುಮಾರ್ ರಸ್ತೆ- ಉದಯಗಿರಿ ಕೆ.ಇ.ಬಿ ಜಂಕ್ಷನ್- ಎಡ ತಿರುವು- ಮಹದೇವಪುರ ರಸ್ತೆ- ಉದಯಗಿರಿ ಜಂಕ್ಷನ್- ನೆಕ್ಸಸ್ ಮಾಲ್ ಜಂಕ್ಷನ್- ಕಾಳಿಕಾಂಭ ದೇವಸ್ಥಾನ ಜಂಕ್ಷನ್- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ವೃತ್ತ) – ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.
ನಿರ್ಗಮನ:- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ- ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್)- ಸರ್ಕಾರಿ ಭವನದ ಉತ್ತರದ್ವಾರ- ಕಾಳಿಕಾಂಭ ದೇವಸ್ಥಾನದ ಜಂಕ್ಷನ್- ಡಿ.ಪಿ.ಓ ವೃತ್ತ- ಶಾಂತವೇರಿ ಗೋಪಾಲಗೌಡ ವೃತ್ತ (ನಜರ್‌ಬಾದ್ ವೃತ್ತ)- ಮಲೆ ಮಹದೇಶ್ವರ ರಸ್ತೆ- ಡೈರಿ ಜಂಕ್ಷನ್- ಆರ್.ಮಹದೇವಪ್ಪ ವೃತ್ತ (ಟೆರಿಷಿಯನ್ ಕಾಲೇಜು) ಮೂಲಕ ಬನ್ನೂರು ಮತ್ತು ಮಳವಳ್ಳಿ ರಸ್ತೆ ಕಡೆಗೆ ಮುಂದುವರೆಯುವುದು.
ಭಾಗ-02
ನಗರ ಸಾರಿಗೆ ಬಸ್‌ಗಳು ಸಂಚರಿಸುವ ಮಾರ್ಗ
(ಅಕ್ಟೋಬರ್ 3 ರಿಂದ ಅಕ್ಟೋಬರ್ 11 ರವರೆಗೆ ಮಧ್ಯಾಹ್ನ 4 ಗಂಟೆಯಿoದ ಸಂಜೆ 11 ಗಂಟೆಯ ವರೆಗೆ)
1. ರಾಮಸ್ವಾಮಿ ವೃತ್ತದ ಕಡೆಯಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್ ಗಳು (ಕುವೆಂಪುನಗರ, ಸರಸ್ವತಿಪುರಂ, ರಾಮಕೃಷ್ಣನಗರ, ಬೋಗಾದಿ)
ರಾಮಸ್ವಾಮಿ ವೃತ್ತ- ಎಂ.ಎನ್.ಜೋಯಿಸ್ ವೃತ್ತ (ಮೂಡಾ) -ರಮಾವಿಲಾಸ ರಸ್ತೆ- ಬನುಮಯ್ಯ ಕಾಲೇಜು ಹತ್ತಿರದ ತಾತ್ಕಾಲಿಕ ಬಸ್ ನಿಲ್ದಾಣದ ಇಳಿಸಿ/ಹತ್ತಿಸಿಕೊಂಡು ಬಿ.ರಾಚಯ್ಯ ವೃತ್ತ (ಕಾರ್ಪೋರೇಷನ್)- ಬಸವೇಶ್ವರ ವೃತ್ತ- ಎನ್.ಮಾಧವರಾವ್ ವೃತ್ತ(ಅಗ್ರಹಾರ ವೃತ್ತ)- ಎಂ.ಜಿ ರಸ್ತೆಯಲ್ಲಿ ಮುಂದುವರೆಯುವುದು.
2. ಸಿದ್ದಪ್ಪ ಸ್ಕ್ವೇರ್ ಕಡೆಯಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ವಿದ್ಯಾರಣ್ಯಪುರಂ, ಜೆ.ಪಿ.ನಗರ, ಶ್ರೀರಾಂಪುರ, ಹೆಚ್.ಡಿ.ಕೋಟೆ)
ಸಿದ್ದಪ್ಪ ಸ್ಕ್ವೇರ್- ಆರ್.ಟಿ.ಓ ವೃತ್ತ- ರಾಮಸ್ವಾಮಿ ವೃತ್ತ- ಎಂ.ಎನ್.ಜೋಯಿಸ್ ವೃತ್ತ (ಮೂಡಾ) -ರಮಾವಿಲಾಸ ರಸ್ತೆ- ಬನುಮಯ್ಯ ಕಾಲೇಜು ಹತ್ತಿರದ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಬಿ.ರಾಚಯ್ಯ ವೃತ್ತ (ಕಾರ್ಪೋರೇಷನ್)- ಬಸವೇಶ್ವರ ವೃತ್ತ- ಎನ್.ಮಾಧವರಾವ್ ವೃತ್ತ(ಅಗ್ರಹಾರ ವೃತ್ತ)- ಎಂ.ಜಿ ರಸ್ತೆಯಲ್ಲಿ ಮುಂದುವರೆಯುವುದು.
3. ನಂಜನಗೂಡು ರಸ್ತೆ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ನಂಜನಗೂಡು, ಕಡಕೊಳ)
ನಂಜನಗೂಡು ರಸ್ತೆ- ಜೆ.ಪಿ.ನಗರ ಲಿಂಕ್ ರಸ್ತೆ- ಮಾನಂದವಾಡಿ ರಸ್ತೆ- ಶ್ರೀನಿವಾಸ ವೃತ್ತ ವೇದಾಂತ ಹೆಮ್ಮಿಗೆ ವೃತ್ತ- ಆರ್.ಟಿ.ಓ. ವೃತ್ತ- ರಾಮಸ್ವಾಮಿ ವೃತ್ತ-ಎಂ.ಎನ್.ಜೋಯಿಸ್ ವೃತ್ತ (ಮೂಡಾ) -ರಮಾವಿಲಾಸ ರಸ್ತೆ- ಬನುಮಯ್ಯ ಕಾಲೇಜು ಹತ್ತಿರದ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಜಿ.ರಾಚಯ್ಯ ವೃತ್ತ (ಕಾರ್ಮೋರೇಷನ್)- ಬಸವೇಶ್ವರ ವೃತ್ತ- ಗನ್‌ಹೌಸ್ ವೃತ್ತ- ನಂಜನಗೂಡು ರಸ್ತೆ- ರಾಜಹಂಸ ಜಂಕ್ಷನ್ ಮೂಲಕ ಮುಂದುವರೆಯುವುದು.
4. ಕೆ.ಆರ್.ಎಸ್ ರಸ್ತೆ ಕಡೆಯಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಕೆ.ಆರ್.ಎಸ್. ಇಲವಾಲ, ಬೆಳವಾಡಿ, ಕೂರ್ಗಳ್ಳಿ, ವಿಜಯನಗರ, ಹೆಬ್ಬಾಳು, ಹೂಟಗಳ)
ಕೆ.ಆರ್.ಎಸ್.ರಸ್ತೆ-ಆಕಾಶವಾಣಿ ವೃತ್ತ- ದಾಸಪ್ಪ ವೃತ್ತ- ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ)- ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ(ಜೆ.ಕೆ.ಗೌಂಡ್)- ಸರ್.ಎಂ.ವಿಶ್ವೇಶ್ವರಯ್ಯ ವೃತ್ತ (ಆಯುರ್ವೇದಿಕ್ ವೃತ್ತ)- ಇರ್ವಿನ್ ರಸ್ತೆ- ನೆಹರು ವೃತ್ತ- ಅಶೋಕ ರಸ್ತೆ- ಮಹಾವೀರ ವೃತ್ತ (ದೊಡ್ಡ ಗಡಿಯಾರ)- ಗಾಂಧಿ ವೃತ್ತದ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಓಲ್ಡ್ ಬ್ಯಾಂಕ್ ರಸ್ತೆ- ಎಸ್.ಆರ್.ರಸ್ತೆ ಜಂಕ್ಷನ್- ಸರ್.ಎಂ.ವಿಶ್ವೇಶ್ವರಯ್ಯ ವೃತ್ತ (ಆಯುರ್ವೇದಿಕ್ ವೃತ್ತ)- ಎಡ ತಿರವು ಪಡೆದು ಮುಂದೆ ಸಾಗುವುದು.
5. ಹೈದಾರ್ ಆಲಿ ಖಾನ್ ವೃತ್ತ (ಪೈವ್ ಲೈಟ್ ಸರ್ಕಲ್) ಕಡೆಯಿಂದ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಶ್ರೀರಂಗಪಟ್ಟಣ, ಸಿದ್ದಲಿಂಗಪುರ, ಎನ್.ಆರ್.ಮೊಹಲ್ಲಾ, ಉದಯಗಿರಿ, ಕೆಸರೆ, ನಾಯ್ಡುನಗರ)
ಸರ್ಕಾರಿ ಭವನ ಉತ್ತರ ದ್ವಾರ ಜಂಕ್ಷನ್-ನವಾಬ್ ಹೈದರಾಲಿ ಖಾನ್ ವೃತ್ತ(ಪೈವ್ ಲೈಟ್)- ದಾವೂದ್ ಖಾನ್ ರಸ್ತೆ- ಅಶೋಕ ರಸ್ತೆ- ನೆಹರು ವೃತ್ತ- ಅಶೋಕ ರಸ್ತೆ- ಮಹಾವೀರ ವೃತ್ತ(ದೊಡ್ಡ ಗಡಿಯಾರ)- ಗಾಂಧಿ ವೃತ್ತದ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಮಹಾವೀರ ವೃತ್ತ(ದೊಡ್ಡ ಗಡಿಯಾರ)- ಚಂದ್ರಗುಪ್ತ ರಸ್ತೆ- ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ- ನವಾಬ್ ಹೈದರಾಲಿ ಖಾನ್ ವೃತ್ತ (ಪೈವ್ ಲೈಟ್) ಕಡೆಯಿಂದ ಮುಂದುವರೆಯುವುದು.
6. ಲೋಕರಂಜನ್ ರಸ್ತೆ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಚಾಮುಂಡಿ ಬೆಟ್ಟ, ಪೊಲೀಸ್ ಲೇಔಟ್, ಆಲನಹಳ್ಳಿ, ಲಲಿತಾದ್ರಿಮರ)
ಲೋಕರಂಜನ್ ರಸ್ತೆ- ಎಸ್.ಲಿಂಗಣ್ಣ ವೃತ್ತ(ಚಿರಾಗ್)- ಲೋಕರಂಜನ್ ರಸ್ತೆ ಅಂತ್ಯದಲ್ಲಿ ಹಾರ್ಡಿಂಜ್ ವೃತ್ತದ ಬಳಿ) Free Right Turn ಪಡೆದು ಮಿರ್ಜಾ ರಸ್ತೆಯ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಎಫ್.ಕೆ.ಇರಾನಿ ವೃತ್ತ- ವಸಂತಮಹಲ್ ಜಂಕ್ಷನ್- ಟ್ಯಾಂಕ್ ಬಂಡ್ ರಸ್ತೆ ಮೂಲಕ ಮುಂದೆ ಸಾಗುವುದು. (ಜಯಚಾಮರಾಜೇಂದ್ರ ಒಡೆಯರ್ (ಹಾರ್ಡಿಂಜ್) ವೃತ್ತದ ಕಡೆ ಬರುವಂತಿಲ್ಲ)
7. ಎಂ.ಎo. ರಸ್ತೆ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್‌ಗಳು (ಸಿದ್ದಾರ್ಥನಗರ, ಮಹದೇವಪುರ, ಬನ್ನೂರು)
ಡೈರಿ ಸರ್ಕಲ್- ವಾಯುವಿಹಾರ ಮಾರ್ಗ- ಸಂಗೊಳ್ಳಿ ರಾಯಣ್ಣ ವೃತ್ತ- ಬುಲೆವರ್ಡ್ ವೃತ್ತ- ಟ್ಯಾಂಕ್ ಬಂಡ್ ರಸ್ತೆ- ಸರ್ಕಸ್ ಗೌಂಡ್ ಜಂಕ್ಷನ್- ಲೋಕರಂಜನ್ ರಸ್ತೆ- ಎಸ್.ಲಿಂಗಣ್ಣ ವೃತ್ತ(ಚಿರಾಗ್)- ಲೋಕರಂಜನ್ ರಸ್ತೆ ಅಂತ್ಯದಲ್ಲಿ(ಹಾರ್ಡಿoಜ್ ವೃತ್ತದ ಬಳಿ) Free Right Turn ಪಡೆದು ಮಿರ್ಜಾ ರಸ್ತೆಯ ತಾತ್ಕಾಲಿಕ ಬಸ್ ನಿಲ್ದಾಣದ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಎಫ್.ಕೆ.ಇರಾನಿ ವೃತ್ತ- ವಸಂತಮಹಲ್ ಜಂಕ್ಷನ್ ಮೂಲಕ ಮುಂದೆ ಸಾಗುವುದು. (ಜಯಚಾಮರಾಜೇಂದ್ರ ಒಡೆಯರ್(ಹಾರ್ಡಿಂಜ್) ವೃತ್ತದ ಕಡೆ ಬರುವಂತಿಲ್ಲ)
2ನೇ ಹಂತದಲ್ಲಿ ಮಾಡಲಾಗಿರುವ ಮಾರ್ಪಾಡುಗಳು
ಭಾಗ-01
ಅಕ್ಟೋಬರ್ 11 ರಿಂದ 12 ವರೆಗೆ
(ಬೆಳಗ್ಗೆ 6 ಗಂಟೆಯಿoದ ರಾತ್ರಿ 12 ಗಂಟೆಯವರೆಗೆ)
1.ಮೈಸೂರು-ಬೆoಗಳೂರು ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಮಾರ್ಗ
ಆಗಮನ:- ಮೈಸೂರು-ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ- ಎಡ ತಿರುವು- ರಿಂಗ್ ರಸ್ತೆ ಮೂಲಕ ಮಹದೇವಪುರ ರಿಂಗ್ ರಸ್ತೆ ಜಂಕ್ಷನ್- ಬಲ ತಿರುವು- ಸಾತಗಳ್ಳಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.
ನಿರ್ಗಮನ:- ಸಾತಗಳ್ಳಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ- ಮಹದೇವಪುರ ರಿಂಗ್ ರಸ್ತೆ ಜಂಕ್ಷನ್- ಎಡ ತಿರುವು- ರಿಂಗ್ ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ-ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೇ ಮೂಲಕ ಮುಂದೆ ಸಾಗುವುದು.
2. ಹುಣಸೂರು ರಸ್ತೆ ಮೂಲಕ ಮೈಸೂರು ನಗರಕ್ಕೆ ಆಗಮಿಸುವ ಬಸ್ಸುಗಳ ಮಾರ್ಗ
ಆಗಮನ:- ಹುಣಸೂರು ರಸ್ತೆ- ಆರ್.ವೆಂಕಟರಮಣಯ್ಯ ವೃತ್ತ (ಪಡುವಾರಹಳ್ಳಿ)- ಬಯಲು ರಂಗಮoದಿರ ರಸ್ತೆ- ತಿಪ್ಪೇಸ್ವಾಮಿ ವೃತ್ತ- ವಿ.ಎಂ.ಡಿ ಜಂಕ್ಷನ್- ಡಾ ಪದ್ಮ ವೃತ್ತ- ಅಗ್ನಿಶಾಮಕ ಠಾಣಿ ಜಂಕ್ಷನ್- ಅಂಡರ್‌ಬ್ರಿಡ್ಜ್ ರಸ್ತೆ ಮೂಲಕ- ಏಕಲವ್ಯ ವೃತ್ತ- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.
ನಿರ್ಗಮನ:- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ- ಕೆ.ಆರ್.ಬಿ ರಸ್ತೆ- ಕೌಟಿಲ್ಯ ವೃತ್ತ- ಡಿ.ಸಿ. ಕಛೇರಿ ಆರ್ಚ್ ಗೇಟ್ ಜಂಕ್ಷನ್- ಕಲಾ ಮಂದಿರ ಜಂಕ್ಷನ್- ವಾಲ್ಮೀಕಿ ಜಂಕ್ಷನ್ ಮಾರ್ಗವಾಗಿ ಹುಣಸೂರು ರಸ್ತೆಯಲ್ಲಿ ಮುಂದೆ ಸಾಗುವುದು.
3. ಬೋಗಾದಿ ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಬಸ್ಸುಗಳ ಮಾರ್ಗ
ಆಗಮನ:- ಬೋಗಾದಿ ರಸ್ತೆ- ವಿ.ಎಂ.ಡಿ ಜಂಕ್ಷನ್- ಡಾ.ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಅಂಡರ್‌ಬ್ರಿಡ್ಜ್ ರಸ್ತೆ ಮೂಲಕ- ಏಕಲವ್ಯ ವೃತ್ತ- ಕೆ.ಆರ್.ಬಿ ರಸ್ತೆ- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.
ನಿರ್ಗಮನ:- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ-ಕೆ.ಆರ್.ಬಿ ರಸ್ತೆ – ಕೌಟಿಲ್ಯ ವೃತ್ತ- ಕುಕ್ಕರಹಳ್ಳಿ ರೈಲ್ವೇ ಗೇಟ್ ಜಂಕ್ಷನ್- ಬೋಗಾದಿ ರಸ್ತೆ – ವಿ.ಎಂ.ಡಿ ಜಂಕ್ಷನ್ ಮೂಲಕ ಬೋಗಾದಿ ರಸ್ತೆಯಲ್ಲಿ ಮುಂದೆ ಸಾಗುವುದು.
4. ಹೆಚ್.ಡಿ. ಕೋಟೆ ರಸ್ತೆ ಮೂಲಕ ನಗರಕ್ಕೆ ಅಗಮಿಸುವ ಬಸ್‌ಗಳ ಮಾರ್ಗ
ಆಗಮನ:- ಮಾನಂದವಾಡಿ ರಸ್ತೆ- ಶ್ರೀನಿವಾಸ ವೃತ್ತ- ಜೆ.ಎಲ್.ಬಿ. ರಸ್ತೆ- ವೇದಾಂತ ಹೆಮ್ಮಿಗೆ ವೃತ್ತ (ಎಸ್.ಡಿ.ಎಂ ಕಾಲೇಜು) – ಅಶೋಕ ವೃತ್ತ (ಬಲ್ಲಾಳ್)- ಕೆ.ಜಿ.ಕೊಪ್ಪಲು ಅಂಡರ್ ಬ್ರಿಡ್ಜ್ ಜಂಕ್ಷನ್- ಕೆ.ಆರ್.ಬಿ ರಸ್ತೆ- ಕೋರ್ಟ್ ಜಂಕ್ಷನ್- ಏಕಲವ್ಯ ವೃತ್ತ- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.
ನಿರ್ಗಮನ:- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ – ಕೆ.ಆರ್.ಬಿ ರಸ್ತೆ- ಕೌಟಿಲ್ಯ ವೃತ್ತ- ರಾಧಾಕೃಷ್ಣ ಮಾರ್ಗ-ಪ್ರಾಚ್ಯ ವಸ್ತು ಸಂಗ್ರಹಾಲಯದ ಕಟ್ಟಡದ ಪೂರ್ವ ಭಾಗದ ರಸ್ತೆಯಲ್ಲಿ ಬಲತಿರುವು ಪಡೆದು ಕೆ.ಆರ್.ಬಿ ರಸ್ತೆ- ಏಕಲವ್ಯ ವೃತ್ತ- ಕೋರ್ಟ್ ಜಂಕ್ಷನ್- ಕೆ.ಜಿ.ಕೊಪ್ಪಲು ರೈಲ್ವೆ ಅಂಡರ್ ಬ್ರಿಡ್ಜ್ ಜಂಕ್ಷನ್- ಅಶೋಕ ವೃತ್ತ (ಬಲ್ಲಾಳ್)- ವೇದಾಂದ ಹೆಮ್ಮಿಗೆ ವೃತ್ತ (ಎಸ್.ಡಿ.ಎಂ)- ಜೆ.ಎಲ್.ಬಿ ರಸ್ತೆ- ಶ್ರೀನಿವಾಸ ವೃತ್ತ- ಮಾನಂದನಾಡಿ ರಸ್ತೆ ಮೂಲಕ ಸಾಗುವುದು.
5. ನಂಜನಗೂಡು ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಬಸ್‌ಗಳ ಮಾರ್ಗ
ನಂಜನಗೂಡು ರಸ್ತೆಯ ಮೂಲಕ ಆಗಮಿಸುವ ಮತ್ತು ನಿರ್ಗಮಿಸುವ ಬಸ್‌ಗಳು ಗುಂಡೂರಾವ್ ನಗರದ ಮೈದಾನದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ನಂಜನಗೂಡು ರಸ್ತೆ ಮೂಲಕ ಮುಂದೆ ಸಾಗಬೇಕು. (ಗುಂಡೂರಾವ್ ನಗರದ ಮೈದಾನದಿಂದ ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)
6. ಬನ್ನೂರು, ಟಿ.ನರಸೀಪುರ ಮೂಲಕ ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಬಸ್‌ಗಳ ಮಾರ್ಗ
ಟಿ.ನರಸಿಪುರ ರಸ್ತೆ ಟಿ.ಜಂಕ್ಷನ್- ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಆಟದ ಮೈದಾನದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಟಿ.ನರಸೀಪುರ ರಸ್ತೆ ಮೂಲಕ ಮುಂದೆ ಸಾಗಬೇಕು. (ಲಲಿತಮಹಲ್ ಮೈದಾನದಿಂದ ನಗರದ ಕಡೆಗೆ ಪ್ರವೇಶಿಸುವಂತಿಲ್ಲ.
ಭಾಗ-02
ಅಕ್ಟೋಬರ್ 12 ರಂದು ನಗರ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್‌ಗಳು ಸಂಚರಿಸುವ ಮಾರ್ಗ ಮತ್ತು ನಿಲುಗಡೆ ಸ್ಥಳ
(ಬೆಳಗ್ಗೆ 6 ಗಂಟೆಯಿoದ ರಾತ್ರಿ 12 ಗಂಟೆಯವರೆಗೆ)
ಕುವೆoಪುನಗರ, ರಾಮಕೃಷ್ಣನಗರ, ಸರಸ್ವತಿಪುರಂ ಮತ್ತು ಬೋಗಾದಿ ಕಡೆಯಿಂದ ನಗರಕ್ಕೆ ಆಗಮಿಸುವ ನಗರ ಸಾರಿಗೆ ಬಸ್‌ಗಳು ರಾಮಸ್ವಾಮಿ ವೃತ್ತದ ಬಳಿ ಎಡ ತಿರುವು ಪಡೆದು ಏಕಲವ್ಯ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಕೌಟಿಲ್ಯ ವೃತ್ತ- ರಾಧಾಕೃಷ್ಣ ಮಾರ್ಗ- ಪ್ರಾಚ್ಯ ವಸ್ತು ಸಂಗ್ರಹಾಲಯದ ಕಟ್ಟಡದ ಪೂರ್ವ ಭಾಗದ ರಸ್ತೆಯಲ್ಲಿ ಬಲತಿರುವು ಪಡೆದು ಕೆ.ಆರ್.ಬಿ ರಸ್ತೆ- ಏಕಲವ್ಯ ವೃತ್ತ- ರಾಮಸ್ವಾಮಿ ವೃತ್ತ- ಆರ್.ಟಿ.ಓ ವೃತ್ತದ ಕಡೆಯಿಂದ ಮುಂದೆ ಸಾಗಬೇಕು.
ಜೆ.ಪಿ ನಗರ, ವಿದ್ಯಾರಣ್ಯಪುರಂ, ಶ್ರೀರಾಂಪುರ ಮತ್ತು ಹೆಚ್.ಡಿ.ಕೋಟೆ ಕಡೆಯಿಂದ ನಗರಕ್ಕೆ ಆಗಮಿಸುವ ನಗರ ಸಾರಿಗೆ ಬಸ್‌ಗಳು ಎನ್.ಮಾಧವರಾವ್ ವೃತ್ತದ ಬಳಿ ನಿಲುಗಡೆ ಮಾಡಿ ಪ್ರಾಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಅಗ್ರಹಾರ ವೃತ್ತದ ಬಳಿಯೇ ತಿರುವು ಪಡೆದು ಸಿದ್ದಪ್ಪ ಸ್ಕ್ವೇರ್ ಕಡೆಯಿಂದ ಮುಂದೆ ಸಾಗಬೇಕು.
ಕೆ.ಆರ್.ಎಸ್., ಇಲವಾಲ, ವಿಜಯನಗರ ಮತ್ತು ಕೂರ್ಗಳ್ಳಿ ಕಡೆಯಿಂದ ನಗರಕ್ಕೆ ಆಗಮಿಸುವ ನಿರ್ಗಮಿಸುವ ನಗರ ಸಾರಿಗೆ ಬಸ್‌ಗಳು ದಾಸಪ್ಪ ವೃತದ ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆ, ಕಲಾಮಂದಿರ ಜಂಕ್ಷನ್ ಮೂಲಕ ಮುಂದೆ ಸಾಗಬೇಕು.
ಎನ್.ಆರ್ ಮೊಹಲ್ಲಾ, ಕೆಸರೆ ಮತ್ತು ಉದಯಗಿರಿ ಕಡೆಯಿಂದ ನಗರಕ್ಕೆ ಆಗಮಿಸುವ, ನಿರ್ಗಮಿಸುವ ನಗರ ಸಾರಿಗೆ ಬಸ್‌ಗಳು ನವಾಬ್ ಹೈದರಾಲಿ ಖಾನ್ ವೃತ್ತದ (ಫೈವ್ ಲೈಟ್) ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ನವಾಬ್ ಹೈದರಾಲಿ ಖಾನ್ ವೃತ್ತದ ಬಳಿಯೇ ತಿರುವು ಪಡೆದು ಕಾಳಿಕಾಂಬ ಜಂಕ್ಷನ್- ಸಮೋಸಾ ಕಾರ್ನರ್- ಮಹದೇವಪುರ ರಸ್ತೆ ಕಡೆಯಿಂದ ಮುಂದೆ ಸಾಗಬೇಕು.
ಸಿದ್ದಾರ್ಥನಗರ, ಮಹದೇವಪುರ ಹಾಗೂ ಬನ್ನೂರು ಕಡೆಯಿಂದ ಎಂ.ಎo.ರಸ್ತೆಯಲ್ಲಿ ನಗರಕ್ಕೆ ಆಗಮಿಸುವ/ ನಿರ್ಗಮಿಸುವ ನಗರ ಸಾರಿಗೆ ಬಸ್‌ಗಳು ಡೈರಿ ಸರ್ಕಲ್‌ನಲ್ಲಿ ಎಡ ತಿರುವು ಪಡೆದು ವಾಯು ವಿಹಾರ ಮಾರ್ಗದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ತಿರುವು ಪಡೆದು ಡೈರಿ ಸರ್ಕಲ್- ಮಹದೇವಪುರ ರಸ್ತೆ ಕಡೆಯಿಂದ ಮುಂದೆ ಸಾಗಬೇಕು.
ಆಲನಹಳ್ಳಿ, ಪೊಲೀಸ್ ಲೇ ಔಟ್ ಲಲಿತಾದ್ರಿಪುರ ಮತ್ತು ಚಾಮುಂಡಿ ಬೆಟ್ಟದಿಂದ ನಗರಕ್ಕೆ ಆಗಮಿಸುವ/ ನಿರ್ಗಮಿಸುವ ನಗರ ಸಾರಿಗೆ ಬಸ್‌ಗಳು ಮಹಾರಾಣಾ ಪ್ರತಾಪ ಸಿಂಹ ವೃತ್ತದ (ಬುಲೆವರ್ಡ್) ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ತಿರುವು ಪಡೆದು ಸಂಗೊಳ್ಳಿ ರಾಯಣ್ಣ ವೃತ್ತ- ಲಲಿತಮಹಲ್ ರಸ್ತೆ ಕಡೆಯಿಂದ ಮುಂದೆ ಸಾಗಬೇಕು ಎಂದು ನಗರದ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.