ಮನೆ ರಾಜ್ಯ ನಾಡಹಬ್ಬ ದಸರಾ: ಬಸ್’ಗಳ ಸಂಚಾರ ಮಾರ್ಗ ಬದಲು

ನಾಡಹಬ್ಬ ದಸರಾ: ಬಸ್’ಗಳ ಸಂಚಾರ ಮಾರ್ಗ ಬದಲು

0

ಮೈಸೂರು(Mysuru): ದಸರಾ ಮಹೋತ್ಸವದ ಪ್ರಯುಕ್ತ ಅ.೪ ಮತ್ತು ೫ ರಂದು ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಸಾರಿಗೆ ಬಸ್ಸುಗಳು ಸಂಚರಿಸುವ ಮಾರ್ಗ ಬದಲಿಸಲಾಗಿದೆ.

ನಗರದ ಹೊರ ಭಾಗಗಳಿಂದ ಬರುವ ಹಾಗೂ ನಗರದಿಂದ ಹೊರ ಹೋಗುವ
ಗ್ರಾಮಾಂತರ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚರಿಸುವ ಮಾರ್ಗಗಳು ಇಂತಿವೆ.

. ಮೈಸೂರುಬೆಂಗಳೂರು

ಮೈಸೂರು-ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ- ಎಡ ತಿರುವು- ರಿಂಗ್ ರಸ್ತೆ ಮೂಲಕ ಮಹದೇವಪುರ ರಿಂಗ್ ರಸ್ತೆ ಜಂಕ್ಷನ್- ಬಲ ತಿರುವು- ಸಾತಗಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.

. ಹುಣಸೂರು ಮಾರ್ಗ
ಆಗಮನ:
ಹುಣಸೂರು ರಸ್ತೆ- ಆರ್.ವೆಂಕಟರಮಣಯ್ಯ ವೃತ್ತ (ಪಡುವಾರಹಳ್ಳಿ)- ಬಯಲು ರಂಗಮಂದಿರ ರಸ್ತೆ- ಬೋಗಾದಿ ರಸ್ತೆ ಜಂಕ್ಷನ್- ಎಂ.ಡಿ ಜಂಕ್ಷನ್- ಡಾ. ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಅಂಡರ್‌ಬ್ರಿಡ್ಜ್ ರಸ್ತೆ ಮೂಲಕ- ಏಕಲವ್ಯ ವೃತ್ತ- ಕೆ.ಆರ್.ಬಿ ರಸ್ತೆ-ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.
ನಿರ್ಗಮನ:
ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ- ಕೆ.ಆರ್.ಬಿ-ರಸ್ತೆ- ಕೌಟಿಲ್ಯ ವೃತ್ತ- ಡಿ.ಸಿ. ಕಚೇರಿ ಆರ್ಚ್ ಗೇಟ್ ಜಂಕ್ಷನ್- ಹುಣಸೂರು ರಸ್ತೆ- ಕಲಾ ಮಂದಿರ ಜಂಕ್ಷನ್- ವಾಲ್ಮೀಕಿ ಜಂಕ್ಷನ್ ಮಾರ್ಗವಾಗಿ ಮುಂದೆ ಸಾಗುವುದು.

. ಬೋಗಾದಿ ಮಾರ್ಗ
ಆಗಮನ:
ಬೋಗಾದಿ ರಸ್ತೆ- ಎಂ.ಡಿ ಜಂಕ್ಷನ್- ಡಾ.ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಅಂಡರ್ ಬ್ರಿಡ್ಜ್ ರಸ್ತೆ ಮೂಲಕ- ಏಕಲವ್ಯ ವೃತ್ತ- ಕೆ.ಆರ್.ಬಿ ರಸ್ತೆ- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.

ನಿರ್ಗಮನ:
ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ – ಕೆ.ಆರ್.ಬಿ ರಸ್ತೆ- ಕೌಟಿಲ್ಯ ವೃತ್ತ- ಬೋಗಾದಿ ರಸ್ತೆ – .ಎಂ.ಡಿ ಜಂಕ್ಷನ್ ಮೂಲಕ ಬೋಗಾದಿ ರಸ್ತೆಯಲ್ಲಿ ಮುಂದೆ ಸಾಗುವುದು.

. ಎಚ್.ಡಿ. ಕೋಟೆ ಮಾರ್ಗ
ಆಗಮನ:
ಮಾನಂದವಾಡಿ ರಸ್ತೆ-ಶ್ರೀನಿವಾಸ ವೃತ್ತ- ಜೆ.ಎಲ್.ಬಿ. ರಸ್ತೆ- ವೇದಾಂತ ಹೆಮ್ಮಿಗೆ ವೃತ್ತ (ಎಸ್‌ಡಿಎಂ ಕಾಲೇಜು) – ಕಾಂತರಾಜ ಅರಸು ರಸ್ತೆ- ಅಶೋಕ ವೃತ್ತ (ಬಲ್ಲಾಳ್)- ಕೆ.ಜಿ.ಕೊಪ್ಪಲು ಅಂಡರ್ ಬ್ರಿಡ್ಜ್ ಜಂಕ್ಷನ್- ಕೆ.ಆರ್.ಬಿ ರಸ್ತೆ- ಏಕಲವ್ಯ ವೃತ್ತ- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.

ನಿರ್ಗಮನ:
ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ – ಕೆ.ಆರ್.ಬಿ ರಸ್ತೆ- ಕೌಟಿಲ್ಯ ವೃತ್ತ- ರಾಧಾಕೃಷ್ಣ ಮಾರ್ಗ- ಪ್ರಾಚ್ಯ ವಸ್ತುಸಂಗ್ರಹಾಲಯದ ಕಟ್ಟಡದ ಪೂರ್ವ ಭಾಗದ ರಸ್ತೆಗೆ ಬಲತಿರುವು ಪಡೆದು ಕೆ.ಆರ್.ಬಿ ರಸ್ತೆ- ಏಕಲವ್ಯ ವೃತ್ತ- ಕೆ.ಜಿ.ಕೊಪ್ಪಲು ರೈಲ್ವೆ ಅಂಡರ್ ಬ್ರಿಡ್ಜ್ ಜಂಕ್ಷನ್- ಅಶೋಕ ವೃತ್ತ (ಬಲ್ಲಾಳ್)- ವೇದಾಂತ ಹೆಮ್ಮಿಗೆ ವೃತ್ತ (ಎಸ್.ಡಿ.ಎಂ)- ಜೆ.ಎಲ್.ಬಿ ರಸ್ತೆ- ಶ್ರೀನಿವಾಸ ವೃತ್ತ- ಮಾನಂದವಾಡಿ ರಸ್ತೆ ಮೂಲಕ ಸಾಗುವುದು.

. ನಂಜನಗೂಡು ಮಾರ್ಗ
ನಂಜನಗೂಡು ರಸ್ತೆಯಲ್ಲಿ ಗುಂಡೂರಾವ್ ನಗರದ ಮೈದಾನದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ನಂಜನಗೂಡು ರಸ್ತೆ ಮೂಲಕ ಮುಂದೆ ಸಾಗಬೇಕು. (ಗುಂಡೂರಾವ್ ನಗರದ ಮೈದಾನದಿಂದ ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

. ಬನ್ನೂರು, ತಿ.ನರಸೀಪುರ ಮಾರ್ಗ
ಟಿ.ನರಸಿಪುರ ರಸ್ತೆ ಟಿ ಜಂಕ್ಷನ್- ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಆಟದ ಮೈದಾನದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಟಿ.ನರಸೀಪುರ ರಸ್ತೆ ಮೂಲಕ ಮುಂದೆ ಸಾಗಬೇಕು. (ಲಲಿತಮಹಲ್ ಮೈದಾನದಿಂದ ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

ಭಾಗ೦೨
ಅ.೫ರಂದು ಬೆಳಿಗ್ಗೆ ೭ರಿಂದ ರಾತ್ರಿ ೯ರವರೆಗೆ ನಗರ ವ್ಯಾಪ್ತಿಯಲ್ಲಿ
ನಗರ ಸಾರಿಗೆ ಬಸ್ಸುಗಳು ಸಂಚರಿಸುವ ಮಾರ್ಗ ಮತ್ತು ನಿಲುಗಡೆಯ ಸ್ಥಳ

ಕುವೆಂಪುನಗರ, ರಾಮಕೃಷ್ಣನಗರ ಹಾಗೂ ಸರಸ್ವತಿಪುರಂ ಕಡೆಯಿಂದ ನಗರಕ್ಕೆ ಆಗುಸುವ/ ನಿರ್ಗಮಿಸುವ ನಗರ ಸಾರಿಗೆ ಬಸ್ಸುಗಳು ರಾಮಸ್ವಾಮಿ ವೃತ್ತದ ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಮುಂದೆ ಸಾಗಬೇಕು.