ಮನೆ ಅಪರಾಧ ನಾಗಮಂಗಲ | 3 ಕೆ.ಜಿ ತಿಮಿಂಗಿಲ ವಾಂತಿ ವಶ: ಆರೋಪಿ ಬಂಧನ

ನಾಗಮಂಗಲ | 3 ಕೆ.ಜಿ ತಿಮಿಂಗಿಲ ವಾಂತಿ ವಶ: ಆರೋಪಿ ಬಂಧನ

0

ನಾಗಮಂಗಲ:ಪಟ್ಟಣದ 8ನೇ ವಾರ್ಡ್‌ನ ನರಸಿಂಹಸ್ವಾಮಿ ದೇವಾಲಯದ ಹಿಂಭಾಗ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಸುಮಾರು 3 ಕೆ.ಜಿ. ತಿಮಿಂಗಲ ವಾಂತಿಯನ್ನು ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದು, ವಿನಯ್ ಕುಮಾರ್ (31) ಎಂಬಾತನನ್ನು ಬಂಧಿಸಿದ್ದಾರೆ.

Join Our Whatsapp Group


ವಿನಯ್ ಕುಮಾರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ಪಟ್ಟಣದ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾರ್ಯಾಚರಣೆಯಲ್ಲಿ ಮೈಸೂರು ಸಂಚಾರಿ ದಳದ ಆರ್‌ಎಫ್‌ಒ ಸುರೇಂದರ್, ಡಿಆರ್‌ಎಫ್‌ಒ‌ ಮೋಹನ್ ಕುಮಾರ್, ನಾಗಮಂಗಲ ಆರ್‌ಎಫ್‌ಒಗಳಾದ ಸಂಪತ್ ಪಟೇಲ್, ಡಿಆರ್‌ಎಫ್‌ಒ ಶಿವಲಿಂಗಯ್ಯ, ಮಹಾಂತೇಶ್ ಪಾಲ್ಗೊಂಡಿದ್ದರು.