ಮನೆ ಅಪರಾಧ ನಾಗಮಂಗಲ: ಕ್ರಿಕೆಟ್ ಬೆಟ್ಟಿಂಗ್ ಗೆ ಲಕ್ಷಾಂತರ ಸಾಲ: ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ...

ನಾಗಮಂಗಲ: ಕ್ರಿಕೆಟ್ ಬೆಟ್ಟಿಂಗ್ ಗೆ ಲಕ್ಷಾಂತರ ಸಾಲ: ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ

0

ನಾಗಮಂಗಲ:ಕ್ರಿಕೆಟ್ ಬೆಟ್ಟಿಂಗ್, ಪರಸ್ತ್ರೀ ಜೊತೆ ಮೋಜಿನಿಂದ ಸಾಲದ ಸುಳಿಗೆ ಸಿಲುಕಿದ್ದ ಪತಿಯೊಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ವುಣಿಸಿ ಕೊಲೆಗೈದು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Join Our Whatsapp Group


ಪಟ್ಟಣದ ಎಂಟನೇ ವಾರ್ಡ್ ನ ಪೇಟೆ ಹೊಲ ರಸ್ತೆಯ ನಿವಾಸಿ ನರಸಿಂಹ ಪತ್ನಿ ಮತ್ತು ಮಕ್ಕಳನ್ನು ಕೊಲಗೈದಿದ್ದಲ್ಲದೆ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ.
ಈತನ ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ಮತ್ತು ಒಂದೂವರೆ ವರ್ಷದ ರಿಷಿಕಾ ಸಾವನ್ನಪ್ಪಿದ್ದು, ನರಸಿಂಹನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಾಲೂಕಿನ ತೆಂಗಿನಭಾಗ ಗ್ರಾಮದ ಸ್ವಾಮಿ ರ ಪುತ್ರ ನರಸಿಂಹ ಕಟಿಂಗ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದನು ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕಂಬದಹಳ್ಳಿ ಗ್ರಾಮದ ಕೀರ್ತನಳನ್ನು ಮದುವೆಯಾಗಿದ್ದು ದಂಪತಿಗೆ ಮುದ್ದಾದ ಎರಡು ಮಕ್ಕಳು ಇದ್ದವು.
ಪರಸ್ತ್ರೀ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಈತ ಕ್ರಿಕೆಟ್ ಬೆಟ್ಟಿಂಗ್ ನಿಂದ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದನು, ಈ ಹಿನ್ನೆಲೆಯಲ್ಲಿ ಪತ್ನಿಗೆ ಹಣ ತರುವಂತೆ ಪೀಡಿಸುತ್ತಿದ್ದು ನ್ಯಾಯ ಪಂಚಾಯಿತಿ ನಡೆಸಿ ಹಣವನ್ನು ನೀಡಲಾಗಿತ್ತು, ಆದರೂ ಸಹ ಈತ ಬದಲಾಗಿರಲಿಲ್ಲ, ಐಪಿಎಲ್ ಪಂದ್ಯಾವಳಿ ಆರಂಭ ಗೊಂಡ ನಂತರ ಬೆಟ್ಟಿಂಗ್ ನಲ್ಲಿ ಹೆಚ್ಚು ಹಣ ಕಳೆದುಕೊಂಡಿದ್ದನು.
ಸುಮಾರು ಎಂಟು ಲಕ್ಷ ಸಾಲದ ಹೊರೆ ಈತನ ಮೇಲಿತ್ತು, ಸಾಲಗಾರರ ಕಿರುಕುಳಕ್ಕೆ ಒಳಗಾಗಿದ್ದ ಈತ ಸಾಲ ತೀರಿಸುವ ಮಾರ್ಗ ಇಲ್ಲದೆ ಪತ್ನಿ ಜೊತೆ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದನು, ಗುರುವಾರ 11 ರ ಮನೆಗೆ ಬಂದ ಈತ ಪತ್ನಿ ಕೀರ್ತನ ಮತ್ತು ಇಬ್ಬರು ಮಕ್ಕಳಿಗೆ ವಿಷ ವುಣಿಸಿದ ನಂತರ ಅವರು ಸಾವನ್ನಪ್ಪಿರುವುದನ್ನು ಖಚಿತ ಮಾಡಿಕೊಂಡು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,ಮದ್ಯಾಹ್ನದ ವೇಳೆ ಮನೆಯವರು ಹೋಗಿ ನೋಡಿದಾಗ ಪ್ರಕರಣ ನೆಡೆದಿರುವುದು ಬೆಳಕಿಗೆ ಬಂದಿದೆ, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತವರು ಮನೆಯಿಂದ ಹಣ ತರುವಂತೆ ಒತ್ತಡ ಹಾಕುತ್ತಿದ್ದ ನರಸಿಂಹ ಬಲವಂತವಾಗಿ ಹೆಂಡತಿ ಮಕ್ಕಳಿಗೆ ವಿಷ ವುಣಿಸಿದ್ದಾನೆ, ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕುಟುಂಬವನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದ್ದು ಪ್ರಕರಣದ ಸುತ್ತ ಹಲವು ಅನುಮಾನ ಸೃಷ್ಟಿಯಾಗಿದೆ.
ಕೀರ್ತನ ತಂದೆ ಶಿವನಂಜು ಮಾತನಾಡಿ ವರದಕ್ಷಿಣೆ ಕಿರುಕುಳವನ್ನು ಪದೇ ಪದೇ ನೀಡುತ್ತಿದ್ದನು,8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡು ನ್ಯಾಯ ಪಂಚಾಯತಿ ಎಲ್ಲ ನಡೆದಿದ್ದವು. ಆದರೂ ಕೂಡ ನಾನು ಅವರ ಹಣವನ್ನು ನೀಡಿದ್ದೆ ಅಳಿಯ ನರಸಿಂಹನ ಆಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದರು
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ