ಸೆಲೆಬ್ರಿಟಿಗಳು ಕೆಲವೊಮ್ಮೆ ಸಿಂಪಲ್ ಲೈಫ್ ಇಷ್ಟ ಪಡ್ತಾರೆ ಅನ್ನೋದನ್ನ ನಾವೆಲ್ಲರೂ ಕೇಳಿದ್ದೇವೆ. ಲೈಫ್ ಫೀಲ್ ಮಾಡಿರುವ ನಟಿ ಶೋಭಿತಾ ಧೂಲಿಪಲಾ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಸೂಪರ್ ಸ್ಟಾರ್ ನಾಗಾರ್ಜುನ ಸೊಸೆ, ನಟ ನಾಗಚೈತನ್ಯ ಪತ್ನಿ ಶೋಭಿತಾ ಪ್ರವಾಸದ ವೇಳೆ ಅಡುಗೆ ಮಾಡ್ತಿರುವ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ರಸ್ತೆಯಲ್ಲೇ ಅಡುಗೆ ಸಾಂಬಾರ್ ಮಾಡೋದು, ಬೆಂಡೇಕಾಯಿ ಕಟ್ ಮಾಡುವುದು, ತೆಂಗಿನಕಾಯಿ ಒಡೆಯೋದು, ಕುಟಾಣಿಯಲ್ಲಿ ಕುಟ್ಟುವ ಕೆಲಸ ಮಾಡುತ್ತಿರುವ ಫೋಟೋಸ್ ಗಾಗೂ ವಿಡಿಯೋಗಳನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾಗಚೈತನ್ಯ 2ನೇ ಪತ್ನಿಯಾಗಿರುವ ಶೋಭಿತಾ ಸೂಪರ್ ಮಾಡೆಲ್ ಹಾಗೂ ನಟಿಯಾಗಿಯೂ ಗುರುತಿಸಿಕೊಂಡವರು. ಆದ್ರೆ ಇಷ್ಟು ಸರಳವಾಗಿರುತ್ತಾರೆಯೇ ಎಂದು ನೆಟ್ಟಿಗರು ಆಶ್ಚರ್ಯ ಪಡುವಂತೆ ನಡೆದುಕೊಂಡಿದ್ದಾರೆ. ಅಂದಹಾಗೆ ಶೋಭಿತಾಗೆ ಅಡುಗೆ ಮಾಡೋದು ಅಂದ್ರೆ ಇಷ್ಟ ಅನ್ನೋದು ಸಾಬೀತಾಗಿದೆ.















