ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ (ಎನ್’ಎಲ್’ಸಿ)ಆಫ್ ಇಂಡಿಯಾ ಲಿಮಿಟೆಡ್ ಗ್ರಾಜುಯೇಟ್ ಅಪ್ರೆಂಟಿಸ್, ಟೆಕ್ನೀಷಿಯನ್ ಅಪ್ರೆಂಟಿಸ್, ಟ್ರೇಡ್ ಅಪ್ರೆಂಟಿಸ್ ಪೋಸ್ಟ್ಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್’ಲೈನ್ ಮೂಲಕ ಅರ್ಜಿ ಹಾಕಿರಿ.
ಹುದ್ದೆಗಳ ವಿವರ
ಗ್ರಾಜುಯೇಟ್ ಅಪ್ರೆಂಟಿಸ್’ಗಳು : 35
ಟೆಕ್ನೀಷಿಯನ್ ಅಪ್ರೆಂಟಿಸ್’ಗಳು: 42
ಐಟಿಐ ಅಪ್ರೆಂಟಿಸ್’ಗಳು : 86
ಅಪ್ರೆಂಟಿಸ್ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಗಳು
ಗ್ರಾಜುಯೇಟ್ ಅಪ್ರೆಂಟಿಸ್’ಗಳು : ಬಿಇ ಪಾಸಾಗಿರಬೇಕು.
ಟೆಕ್ನೀಷಿಯನ್ ಅಪ್ರೆಂಟಿಸ್’ಗಳು: ಡಿಪ್ಲೊಮ ಪಾಸ್ ಆಗಿರಬೇಕು.
ಟ್ರೇಡ್ ಅಪ್ರೆಂಟಿಸ್’ಗಳು: ಐಟಿಐ ಪಾಸಾಗಿರಬೇಕು.
ವಯಸ್ಸಿನ ಅರ್ಹತೆ
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಕನಿಷ್ಠ 14 ವರ್ಷ ಆಗಿರಬೇಕು. ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಕೆಟಗರಿವಾರು ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-04-2023 ರ ಸಂಜೆ 05 ಗಂಟೆವರೆಗೆ.
ಮೂಲ ದಾಖಲೆಗಳ ಪರಿಶೀಲನೆಗೆ ಲಿಸ್ಟ್ ಬಿಡುಗಡೆಯ ಸಂಭಾವ್ಯ ದಿನಾಂಕ : 12-05-2023
ದಾಖಲೆಗಳ ಪರಿಶೀಲನೆ ದಿನಾಂಕ : 15-05-2023 ರಿಂದ 20-05-2023
ಆಯ್ಕೆಯಾದವರ ಲಿಸ್ಟ್ ಬಿಡುಗಡೆ : 25-05-2023
ಅಪ್ರೆಂಟಿಸ್ ತರಬೇತಿ ಆರಂಭ ದಿನಾಂಕ: 01-06-2023
ಅಪ್ರೆಂಟಿಸ್ ಅವಧಿ : 1 ವರ್ಷ.
ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆಯ ಅಂಕಗಳನ್ನು ಪರಿಗಣಿಸಿ, ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಈ ಶಾರ್ಟ್’ಲಿಸ್ಟ್ ಆದವರಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಮಾಸಿಕ ಸ್ಟೈಫಂಡ್ ವಿವರ
ಗ್ರಾಜುಯೇಟ್ ಅಪ್ರೆಂಟಿಸ್ ಗಳಿಗೆ ರೂ.15,028.
ಟೆಕ್ನೀಷಿಯನ್ ಅಪ್ರೆಂಟಿಸ್’ಗಳಿಗೆ ರೂ.12,524.
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ರೂ.10,019.
ಈ ಹುದ್ದೆಗಳನ್ನು ಇಲೆಕ್ಟ್ರೀಷಿಯನ್, ಫಿಟ್ಟರ್, ವೆಲ್ಡರ್, ಹಾರ್ಟಿಕಲ್ಚರ್, ವೈಯರ್ಮನ್, ಪ್ಲಂಬರ್, ರೆಫ್ರಿಜೆರೇಷನ್ ಮತ್ತು ಏರ್ ಕಂಡೀಷನರ್ ಟೆಕ್ನೀಷಿಯನ್, ಮೆಕ್ಯಾನಿಕ್ ಮೋಟಾರು ವೆಹಿಕಲ್, ಸಿವಿಲ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್, ಫೈನಾನ್ಸ್, ಹ್ಯೂಮನ್ ರಿಸೋರ್ಸ್, ಇತರೆ ವಿಭಾಗದಲ್ಲಿ ನೇಮಕ ಮಾಡಲಾಗುತ್ತದೆ.