ಮನೆ ಕಾನೂನು ನಂಜನಗೂಡು: ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರ ಬಂಧನ

ನಂಜನಗೂಡು: ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರ ಬಂಧನ

0

ನಂಜನಗೂಡು: ತಾಲೂಕಿನ ಹದಿನಾರು ಕೆರೆ ಹಾಗೂ ಕಾಲುವೆ ಬಳಿ ಪಕ್ಷಿಗಳನ್ನು ಬೇಟೆಯಾಡುತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸಿದ್ದಾರೆ.

ಅಂಥೋನಿ ಸೇವಿಯರ್ ಹಾಗೂ ರೋಹಿತ್ ಎ ಅವರನ್ನು ಬಂಧಿತರು.

ಬಂಧಿತರಿಂದ ಬೇಟೆಯಾಡಿದ ಗ್ರೇಟರ್ ಕಾಕಲ್, ರೆಡ್ ನೆಪಿಯರ್ ಐಬಿಸ್ ಹಾಗೂ ಇತರೆ ಒಟ್ಟು ಏಳು ಪಕ್ಷಿಗಳ ಕಳೆಬರಹ, ಒಂದು ಸ್ಕೂಟರ್ (ಆಕ್ಸಸ್), ಒಂದು ಏರ್ ಗನ್ ವಶಪಡಿಸಿ ಆರೋಪಿಗಳನ್ನು ನಂಜನಗೂಡು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಗ್ರಾಮಸ್ಥರು ನೀಡಿದ ಖಚಿತ ಮಾಹಿತಿ ಮೇರೆಗೆ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್. ಹಾಗೂ ಹೆಚ್ ಡಿ ಕೋಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಅವರ ಮಾರ್ಗದರ್ಶನದಲ್ಲಿ ನಂಜನಗೂಡು ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಎಂ.ಸಿ. ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮದನ್ ಕುಮಾರ್ ಎಂ.ಜಿ., ಗಸ್ತು ಅರಣ್ಯ ಪಾಲಕರಾದ ಶರತ್ ಕುಮಾರ್ ಎಸ್.ಜೆ., ವೈಶಾಕ್ ಪಿ.ಎಲ್., ಸುನಿಲ್, ಮಂಜುನಾಥ್, ನಾಗಣ್ಣ ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ನಡೆಸಲಾಯಿತು.

ಹಿಂದಿನ ಲೇಖನಆರ್ ​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಮಾಹಿತಿ ಇಲ್ಲಿದೆ
ಮುಂದಿನ ಲೇಖನಅರಮನೆ ಫಲಪುಷ್ಪ ಪ್ರದರ್ಶನದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ