ಮೈಸೂರು: ನಂಜನಗೂಡು ನಗರ ಸಭೆಯ ತೆರವಾಗಿರುವ 20 ನೇ ವಾರ್ಡ್ ನ ಉಪ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ
ಡಿಸೆಂಬರ್ 8 ರ ಶುಕ್ರವಾರ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 15 ಶುಕ್ರವಾರ,ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಡಿಸೆಂಬರ್ 16 ಶನಿವಾರ,ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಡಿಸೆಂಬರ್ 18 ಸೋಮವಾರ, ಅವಶ್ಯವಿದ್ದರೆ ಮತದಾನ ನಡೆಯುವ ದಿನ ಡಿಸೆಂಬರ್ 27 ಬುಧವಾರ.
ಮರುಮತದಾನ ಅವಶ್ಯವಿದ್ದಲ್ಲಿ ಮತದಾನ ನಡೆಯುವ ದಿನ ಡಿಸೆಂಬರ್ 29 ಶುಕ್ರವಾರ,ಮತ ಎಣಿಕೆ ಡಿಸೆಂಬರ್ 30 ಶನಿವಾರ ಬೆಳಗ್ಗೆ 8 ಗಂಟೆಗೆ
ಚುನಾವಣಾ ಸದಾಚಾರ ಸಂಹಿತೆಯು ಡಿಸೆಂಬರ್ 8 ರಿಂದ ನಂಜನಗೂಡು ನಗರ ಸಭಾ ವ್ಯಾಪ್ತಿಯ 20 ನೇ ವಾರ್ಡ್ ವ್ಯಾಪ್ತಿಯಲ್ಲಿ ಡಿಸೆಂಬರ್ 30 ರ ವರಗೆ ಜಾರಿಯಲ್ಲಿರುತ್ತದೆ.
ಚುನಾವಣಾ ಪ್ರಕ್ರಿಯೆ ಹಾಗೂ ಮತದಾನ ಶಾಂತಿಯುತವಾಗಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುಲಾಗಿದ್ದು,ಸಾರ್ವಜನಿಕ ರು ಮತ್ತು ಮತದಾರರ ಈ ಚುನಾವಣೆಯನ್ನು ಮುಕ್ತವಾಗಿ ನಿಷ್ಪಕ್ಷವಾಗಿ ಶಾಂತಿಯುತವಾಗಿ ನಡೆಸಲು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.