ಮನೆ ಪೌರಾಣಿಕ ನಾರಾಯಣ ಸ್ವರೂಪ

ನಾರಾಯಣ ಸ್ವರೂಪ

0

ಪದ್ಮ ಮಹಾಕಲ್ಪವು ಅತಿಥಿವಾಗುತ್ತಲೇ ವಾಸುದೇವನಲ್ಲಿನ ಸೃಜನ ಶಕ್ತಿಯು ಎಚ್ಚೆತ್ತುಕೊಂಡು ಸರ್ವಶೂನ್ಯವಾಗಿರುವ ಸೃಷ್ಟಿಯನ್ನು ಪರಿವೀಕ್ಷಿಸಿತು. ಆ ಸಮಯದಲ್ಲಿ ಜಲಧೀಶಾಹಿಯಾದ ಜನಾರ್ಧನನ್ನು ತನ್ನ ಸೃಜನಶೀಲತೆಗೆ ಬ್ರಹ್ಮಪದವಿಯನ್ನು ಪ್ರಸಾದಿಸಿದನು.

“ಮೈತ್ರೇಯ ! ನಾರಾ ಅಂದರೆ ನೀರು ಎಂದರ್ಥ. ಆಯಾನವೆಂದರೆ ಸಂಚಾರ. ಸೃಷ್ಟಿಯು ಆದಿಯ ಸಮಯದಲ್ಲಿ ನಾರಗಳನ್ನು ಆಯನವಾಗಿ ಉಳ್ಳವನಾದ್ದರಿಂದ ವಾಸುದೇವನಿಗೆ ನಾರಾಯಣನೆಂದು ಕರೆಯುವರು.

ನಾರಾ ಎಂದರೆ ಜ್ಞಾನ ಎಂಬ ಮತ್ತೊಂದು ಅರ್ಥವು ಸಹ ಇದೆ. ಆದ್ದರಿಂದ ನಾರಾಯಣನೆಂದರೆ ಜ್ಞಾನಮಾರ್ಗದಿಂದ ಅಭಿಗಮ್ಯನೆಂದು ತಿಳಿಯಬೇಕು. ಆದಿದೇವನಾದ ಶ್ರೀಮನ್ನಾರಾಯಣ ಪ್ರಜಾಪ್ರತಿಯ ರೂಪವನ್ನು ಧರಿಸಿ ನೂರು ವರ್ಷಗಳ ಪ್ರಮಾಣವನ್ನು ಹೊಂದಿ ಅಲ್ಲಿಯವರೆಗೂ ಸೃಷ್ಟಿಯ ಕಾರ್ಯವನ್ನು ನಿರ್ವಹಿಸುವಂತೆ ಮಾಡುತ್ತಾನೆ. ಜಗದ್ವಿದಾತ ರೂಪದಲ್ಲಿ ನೂರು ವರ್ಷಗಳೆಂದರೆ ಅನೇಕಾನೇಕ  ಮಹಾಯುಗಗಳು ಕಳೆದು ಕಳೆದು ಹೋಗುತ್ತದೆ.

 ಆಕಾಶ, ಕಾಲ, ದಿಕ್ಕು, ಆತ್ಮ, ಮನಸ್ಸು ಎಂಬ ಈ ಐದು ನಿತ್ಯಗಳು ಇವುಗಳಲ್ಲಿ ಮೊದಲನೆಯದು ನಾಲ್ಕು ವಿಭೂ ದ್ರವ್ಯಗಳು ಪ್ರಭುಸ್ವರೂಪಗಳು ಆಗಿವೆ. ಕಾಲವು ನಿತ್ಯ ಪ್ರವಾಹದಂತಹದು. ಅನಾದಿ ಮಧ್ಯ ನಿಧನವಾದ ಕಾಲವು ಅಖಂಡವಾಗಿದ್ದರೂ ನಡೆದಿರುವುದು, ನಡೆಯುತ್ತಿರುವುದು, ನಡೆಯುವಂತಹ ವ್ಯವಹಾರಗಳಿಗೆ ಕಾರಣ ಉಪಾದಿಭೇದವೇ ಹೊರತು ಈ ಬದಲಾವಣೆಗಳು ಶಾಶ್ವತವಾದ ಕಾಲಕ್ಕೆ ಅನ್ವಯಿಸುವ ಸಹಜಧರ್ಮಗಳಲ್ಲ. 

ಕಾಲ ಸ್ವರೂಪನಾದ ಪರಮಾತ್ಮನ ತತ್ವವನ್ನು ಜೀರ್ಣಿಸಿಕೊಳ್ಳುವುದಕ್ಕೆ ಅನುಕೂಲವಾಗಿ ನಿಮಿಷಾಧಿ ಮಹಾಕಲ್ಪ ಪರ್ಯಾಂತವಾದ ಕಾಲ ಸ್ವರೂಪವನ್ನು ತಿಳಿಯಬೇಕು” ಎಂದು ಪರಾಶರ ಮುನಿಗಳು ಮೈತ್ರೇಯನಿಗೆ ಈ ರೀತಿಯಾಗಿ ವಿವರಿಸಿದ್ದರು.

ಹಿಂದಿನ ಲೇಖನಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಪ್ರತಿ ತಿಂಗಳು ಎರಡು ಸಾವಿರ ರೂ ಸಿಗಲಿದೆ: ಲಕ್ಷ್ಮೀ ಹೆಬ್ಬಾಳ್ಕರ್
ಮುಂದಿನ ಲೇಖನರಾಜ್ಯದಲ್ಲಿ ಬರದ ಛಾಯೆ: ಇಂದು ಅಥವಾ ನಾಳೆ ಸಚಿವ ಸಂಪುಟ ಉಪ ಸಮಿತಿಯ ಸಭೆ- ಸಿಎಂ ಸಿದ್ದರಾಮಯ್ಯ