ಮನೆ ರಾಷ್ಟ್ರೀಯ ನರೇಂದ್ರ ಮೋದಿ ಅವರು ಸರಕಾರ ರಚಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ: ಪಿ.ಚಿದಂಬರಂ

ನರೇಂದ್ರ ಮೋದಿ ಅವರು ಸರಕಾರ ರಚಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ: ಪಿ.ಚಿದಂಬರಂ

0

ಹೊಸದಿಲ್ಲಿ: ನರೇಂದ್ರ ಮೋದಿ ಅವರು ಸರಕಾರ ರಚಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

Join Our Whatsapp Group

ಎಕ್ಸ್‌ ಪೋಸ್ಟ್ ನಲ್ಲಿ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಪ್ರಧಾನಿ ನರೇಂದ್ರ ಮೋದಿ ಅವರು ನಾಯಕತ್ವದಿಂದ ಕೆಳಗಿಳಿಯಬೇಕು ಎಂದು ತಿಳಿಸಿದ್ದಾರೆ

ಪ್ರಧಾನಿ ಮೋದಿ ನೇತೃತ್ವದ ಸರಕಾರವು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸವಾಲುಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 ಸಂಸದೀಯ ಪ್ರಜಾಪ್ರಭುತ್ವದ ಅತ್ಯುತ್ತಮ ಸಂಪ್ರದಾಯಗಳಲ್ಲಿ, ತನ್ನ ಪಕ್ಷವನ್ನು ಸೋಲಿಗೆ ಕಾರಣವಾದ ಪ್ರಧಾನಿ ನಾಯಕತ್ವದಿಂದ ಕೆಳಗಿಳಿಯಬೇಕು. 303 ಸ್ಥಾನಗಳೊಂದಿಗೆ ಚುನಾವಣೆಗೆ ಇಳಿದು 370 ಸ್ಥಾನಗಳ ಗುರಿಯನ್ನು ಹೊಂದಿದ್ದ ಪಕ್ಷ 240 ಸ್ಥಾನಗಳನ್ನು ಗೆದ್ದಿರುವುದು ಹೀನಾಯ ಸೋಲು. ನರೇಂದ್ರ ಮೋದಿ ಅವರು ಸರಕಾರ ರಚಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಪಿ ಚಿದಂಬರಂ ಬರೆದಿದ್ದಾರೆ.

ಹಿಂದಿನ ಲೇಖನಮೋಟಾರ್​ ವಾಹನ ನಿರೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮರು ನಿಗದಿ
ಮುಂದಿನ ಲೇಖನಮಂಡ್ಯ: ಕೌಟುಂಬಿಕ ಕಲಹ, ದಂಪತಿಗಳು ನೇಣಿಗೆ ಶರಣು